ಬೆಂಗಳೂರು: 70 ಕ್ಕಿಂತ ಹೆಚ್ಚು ಸಾಹಿತ್ಯಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಹೆಗ್ಗಳಿಗೆ ಡಾ.ಎಸ್ ವಿದ್ಯಾಶಂಕರ ಅವರು ಪಾತ್ರರಾಗಿದ್ದಾರೆ ಎಂದು ಹಂಪಿ ವಿವಿ ಕುಲಪತಿ ಡಾ.ಡಿವಿ ಪರಮಶಿವಮೂರ್ತಿ ತಿಳಿಸಿದರು.
ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ, ರಮ್. ಶಿ.ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ, ವೀರಣ್ಣ ಅವರ ಕನ್ನಡ ಸಾಹಿತ್ಯ ಬೆಳವಣಿಗೆ, ಜೊತೆ ಜೊತೆಗೆ ಒಂದು ಸಂಸ್ಥೆ, ವಿಶ್ವವಿದ್ಯಾನಿಲಯ ಮಾಡುವ ಕೆಲಸವನ್ನು ವಿದ್ಯಾಶಂಕರ ಅವರು ಒಬ್ಬರೇ ಮಾಡಿದ್ದಾರೆ. ಏಕ ವ್ಯಕ್ತಿಯಾಗಿ ಸಾಹಿತ್ಯ ಪರಂಪರೆ ಉಳಿಸುವ ನಿಟ್ಟಿನಲ್ಲಿ ವಿದ್ಯಾಶಂಕರ ಕಾಯಕ ಅಪಾರವಾಗಿದೆ.
ವಿದ್ಯಾಶಂಕರ ಅವರು 70ಕ್ಕೂ ಹೆಚ್ಚು ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ
ಸಂಸ್ಥೆ ಹುಟ್ಟಿದಾಗಿನಿಂದ ಇಲ್ಲಿಯತನಕ ಅತ್ಯುತ್ತಮ ವಿದ್ವಾಂಸರಿಗೆ ವಿದ್ಯಾಶಂಕರ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. 70 ಕ್ಕಿಂತ ಹೆಚ್ಚು ಸಾಹಿತ್ಯಕೃತಿಗಳು ನೀಡಿರುವ ಹೆಗ್ಗಳಿಗೆ ಅವರದಾಗಿದೆ. ವಿದ್ಯಾಶಂಕರ ಅವರು ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಿಕೊಂಡು ಬಂದಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷ ಡಾ.ಎಸ್ ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಈ ಭಾರಿ ಡಾ. ಬಿ ಎಸ್ ಸ್ವಾಮಿ, ಹಾಗು ಅಶೋಕ್ ದೊಮ್ಮಲೂರು ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರಾದ ಎಸ್ ಎನ್ ಸ್ವಾಮಿ ಮಾತನಾಡಿ, ವಿದ್ಯಾಶಂಕರ ಅವರ ನಾನು ಅಣ್ಣತಮ್ಮಂದಿರು, ಅವರು ಕಲೆ ವಿಭಾಗ, ನಾನು ವಿಜ್ಞಾನ ವಿಭಾಗದವರು, ಸಂಶೋಧನೆ ಮಾಡಲು ಅನೇಕ ತೊಡಕುಗಳು ಎದುರಾದವು, ಆ ವೇಳೆ ಅದಕ್ಕೆ ಸಾಕಷ್ಟು ಸಾಹಿತಿಗಳು ನನಗೆ ನೆರವಾದರು. ಕೊನೆಗೆ ಸಂಶೋಧನೆ ಮುಗಿಯಿತು. ಸಾಹಿತ್ಯಕ್ಷೇತ್ರದಲ್ಲಿ ಸಾಕಷ್ಟು ಅನುಭವಗಳನ್ನು ಹಂಚಿಕೊಂಡರು.
ಪ್ರಶಸ್ತಿ ಪುರಸ್ಕೃತರಾದ ಅಶೋಕ್ ದೊಮ್ಮಲೂರು ಮಾತನಾಡಿ, ಸಾಹಿತ್ಯ ಕೃಷಿ ಆರಂಭವಾದಾಗಿನಿಂದ ಇಲ್ಲಿಯ ತನಕ ನಡೆದ ಘಟನೆ ವಿವರಿಸಿದರು. ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ತಾಳೆಗರಿಗಳ ರಕ್ಷಣೆ, ವಚನಗಳ , ಶರಣ ಕ್ಷೇತ್ರಗಳ ಗಳ ಬಗ್ಗೆ ಅಪಸ್ವರ ಇದೆ, ಶರಣರ ವಚನಗಳ ಬಗ್ಗೆ ಯಾರು ಅಷ್ಟು ಆಸಕ್ತಿ ಬೆಳೆಸಿಕೊಳ್ಳಬೇಕು, ಶರಣರ ಕ್ಷೇತ್ರಗಳ ಬಗ್ಗೆ ಸಂರಕ್ಷಣೆಯಾಗಬೇಕು. ವಚನಕಾರ ಹೆಸರುಗಳು ಬೇರೆ ಬೇರೆ ರಾಜ್ಯಗಳಲ್ಲಿ ಜಾತಿ ಹೆಸರುಗಳು ರೂಢಿಯಲ್ಲಿವೆ, ಮರೆಯಾಗುತ್ತಿರುವ ಸಾಹಿತ್ಯ ವಿಚಾರಧಾರೆಗಳ ಹಸ್ತಪ್ರತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸ್ಕ್ಯಾನಿಂಗ್ ಮಾಡುವ ಕೆಲಸ ಮಾಡುತ್ತಿದ್ದೇನೆ.
ಕೆಲಸವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿಯೇ ಇಲ್ಲ!
ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಪ್ರೊ. ಜಿಎಸ್ ಸಿದ್ಧಲಿಂಗಯ್ಯ ಮಾತನಾಡಿ, ಸಾಕಷ್ಟು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡಲೇ ಇಲ್ಲ, ಅವರು ಮಾಡಿರುವ ಸಾಹಿತ್ಯ ಕೃಷಿಗೆ ಎಲ್ಲಿಯೂ ಮನ್ನಣೆ ಸಿಕ್ಕಿಲ್ಲ, ಪ್ರಶಸ್ತಿಗಳು ಕೆಲವರಿಗೆ ಯೋಗ್ಯತೆ ಮೇಲೆ ಸಿಗುತ್ತದೆ, ಇನ್ನು ಕೆಲವರಿಗೆ ಶಿಫಾರಸ್ಸಿನ ಮೇಲೆ ಸಿಗುತ್ತದೆ. ರಾಜಕೀಯ ವಿಚಾರಗಳು ಹೊರತಾಗಿಲ್ಲ. ಎಸ್ ಎಲ್ ಭೈರಪ್ಪ ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿಲ್ಲ, ಪ್ರಶಸ್ತಿಗಳು ಸಿಗುವ ಬಗ್ಗೆ ಅನೇಕ ವಿಸ್ಮಯಗಳು ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತವೆ ಎಂದರು.
ವಿದ್ಯಾಶಂಕರ ಅವರು ದೊಡ್ಡ ವಿದ್ವಾಂಸರು, ಅವರು ಯಾರಿಗೆ ಸಿಗದ ಸಾಹಿತ್ಯ ಕ್ಷೇತ್ರದಲ್ಲಿ ಸಿಕ್ಕಿಲ್ಲದ ಗೌರವವನ್ನು ವಿದ್ಯಾಶಂಕರ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. ವಿದ್ಯಾಶಂಕರ ಅವರು ಸಾಹಿತ್ಯ ಚರಿತ್ರೆ ರಚನೆ ಬರೆದಿದ್ದಾರೆ. ಸಾಹಿತ್ಯ ಲೋಕದಲ್ಲಿ ಅನೇಕ ವಿಸ್ಮಯಗಳು ನಡೆಯುತ್ತವೆ, ಅದರಲ್ಲಿ ಒಂದು ಮಾತ್ರ ಇಲ್ಲಿ ಹೇಳಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಗೆ ಅಧ್ಯಕ್ಷರಾಗುವ, ಅದರಲ್ಲಿ ಲಾಭಿ ನಡೆಸುವ ವಿಚಾರಗಳ ಬಗ್ಗೆ ಕೊನೆಗೆ ಯಾರಿಗೆ ಅಧ್ಯಕ್ಷಪಟ್ಟ ಯಾರಿಗೆ ಸಿಗಬೇಕಿತ್ತು, ಮತ್ತೆ ಯಾರಿಗೆ ಸಿಕ್ತು ಎಂಬುದರ ಬಗ್ಗೆ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುವ ವಿಸ್ಮಯಗಳ ಬಗ್ಗೆ ವಿವರವಾಗಿ ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷರಾದ ನಲ್ಲೋರ ಪ್ರಸಾದ್ ಅಧ್ಯಕ್ಷೀಯ ನುಡಿ ಮಾತನಾಡಿ, ಪ್ರತಿಷ್ಠಾನದಲ್ಲಿ ನಡೆಯುವ ಎಲ್ಲವೂ ಸಹ ವಿದ್ಯಾಶಂಕರ ಮಕ್ಕಳು ಮಾಡಿಕೊಂಡು ಬರುತ್ತಿದ್ದಾರೆ. ನಾನು ನೆಪಮಾತ್ರಕ್ಕೆ ಇದ್ದೆನೆ. ಅಪ್ಪನಿಗೆ ನಿಜಕ್ಕೂ ಮಕ್ಕಳು ಶ್ರೇಷ್ಟ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿಷ್ಠಾನ ಅದ್ಬುತ ಕೆಲಸ ಮಾಡಿಕೊಂಡು ಬರುತ್ತಿದೆ. ಹೀಗೆ ಅನೇಕ ಕೆಲಸಗಳನ್ನು ಪ್ರತಿಷ್ಠಾನ ಮಾಡಿಕೊಂಡು ಬರಲಿ ಎಂದು ಆಶಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ನಿಡುಮಾಮಿಡಿ ಮಠದ ಗುರುಗಳಾದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಪ್ರತಿಷ್ಠಾನ ಆಶಯಗಳನ್ನು ಪೂರೈಸಲು ಇಡೀ ಮನೆತನ ಸಾಕಷ್ಟು ಕಾಳಜಿ ಹೊಂದಿದೆ. ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಗೊ.ರೂ. ಚೆನ್ನಬಸಪ್ಪ ಅವರು ನಿಡುಮಾಮಿಡಿ ಮಠದಲ್ಲಿ 8 ವರ್ಷ ಆಶ್ರಯ ಪಡೆದಿದ್ದರು. ಹಾಗಾಗಿ ಅವರ ನೆನಪು ಆಗಿತ್ತು, ಸಿದ್ಧಲಿಂಗಯ್ಯ ಅವರು ಹಿರಿಯರು, ಸಾಹಿತ್ಯ ಸಮ್ಮೇಳನದಲ್ಲಿ ಗುರುತಿಸುವ ಕೆಲಸ ಆಗಬೇಕಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾಶಂಕರ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಸಾಧನೆಯನ್ನು ನೋಡಿ ಗೌರವಿಸುವ ಪರಿಪಾಠವನ್ನು ಇಟ್ಟುಕೊಂಡು ಬಂದ್ದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಆರ್ಹರನ್ನು ನೋಡಿ ಗೌರವಿಸುವ ಕೆಲಸ ಮಾಡಿಕೊಂಡು ಬಂದಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಕೆಲಸವರು ಸಮಗ್ರವಾಗಿ ಕೃತಿ, ಕಾದಂಬರಿ ಬರೆದಿದ್ದಾರೆ, ಕೇಳದವರು ಒಂದೆರಡು ಕೃತಿ, ಕಾದಂಬರಿ ಬರೆದು ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವುದು ನೋ ಡಬಹುದು. ಅವುಗಳಲ್ಲಿ ಪ್ರಬುದ್ಧತೆ ಬಹಳ ಮುಖ್ಯವಾಗುತ್ತದೆ. ಇಬ್ಬರು ಸಾಧಕರನ್ನು ಗೌರವಿಸಿರುವುದು ಬಹಳ ಮೆಚ್ಚುಗೆಯ ಸಂಗತಿಯಾಗಿದೆ.