ಬೆಂಗಳೂರು/ವಿಜಯನಗರ: ಪಾಡುರಂಗ ವಿಠ್ಠಲನ ಕೃಪೆಯಿಂದ ಎಲ್ಲರು ಬಾಳಿನಲ್ಲಿ ಸಂಕಷ್ಟಗಳ ನಿವಾರಣೆಯಾಗಲಿ ನಾಡಿನಲ್ಲಿ ಸುಖ, ಶಾಂತಿ ಲಭಿಸಲಿ ಎಂದು ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರು ತಿಳಿಸಿದರು.
ಹಂಪಿನಗರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪಶ್ಚಿಮ ಬೆಂಗಳೂರು ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಪೋಥಿ ಮತ್ತು ಧ್ವಜ ಸ್ಥಾಪನೆ ಮಹಾಮಂಗಳಾರತಿ ಹಾಗು ಪ್ರಸಾದ ವಿನಿಯೋಗ 8ನೇ ವರ್ಷದ ಡಿಂಡಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಭಾವಸಾರ ಕ್ಷತ್ರಿಯ ಮಹಾಸಭಾದ ವತಿಯಿಂದ ಡಿಂಡಿ ಮಹೋತ್ಸವದಲ್ಲಿ ಭಾಗವಹಿಸಿ ಪಾಡುರಂಗರ ಆಶೀರ್ವಾದ ಪಡೆಯುವ ಸೌಭಾಗ್ಯ ಲಭಿಸಿದೆ. ಪಾಡುರಂಗ ವಿಠ್ಠಲನ ಕೃಪೆಯಿಂದ ಎಲ್ಲರು ಬಾಳಿನಲ್ಲಿ ಸಂಕಷ್ಟಗಳ ನಿವಾರಣೆಯಾಗಲಿ ನಾಡಿನಲ್ಲಿ ಸುಖ, ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಪಾಡುರಂಗ ವಿಠ್ಠಲ, ರುಕ್ಮಿಣಿಯ ಮೂರ್ತಿ ಪೂಜೆ ಸಲ್ಲಿಸಿದ ಹರಿಭಕ್ತ ಪಾರಾಯಣ ಪಂಡಿತರಾದ ಭಾನುದಾಸ ಸರ್ವದೆರವರ ಆಶೀರ್ವಾದದಿಂದ ಶಾಸಕರಾದ ಎಂ.ಕೃಷ್ಣಪ್ಪರವರು ಅಧ್ಯಕ್ಷರಾದ ಹರಿಶಂಕರ್ ಸುಲಾಖೆ, ಪ್ರಧಾನ ಕಾರ್ಯದರ್ಶಿ ಸತೀಶ್ ಅಂಬೋರ್ , ಪಿ.ವಿಶ್ವನಾಥ್ ಪಿಸ್ಸೆ, ಎಸ್.ಗುರುಪ್ರಸಾದ್ ಅಷ್ಟಕರ್ ಭಾವಸಾರ ಕ್ಷತ್ರಿಯ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಅಂಬೋರ್ ರವರು ಶೋಭಯಾತ್ರೆ ಮತ್ತು ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು..
ಸಂತೋಷ್ ಕುಮಾರ್ ಅಂಬೋರ್ ರವರು ಮಾತನಾಡಿ ಸತತ 8ವರ್ಷಗಳಿಂದ ಡಿಂಡಿ ಮಹೋತ್ಸವ ಅಚರಣೆಯನ್ನು ಎರಡು ದಿನಗಳ ಕಾಲ ಮಾಡಿಕೊಂಡು ಬರಲಾಗುತ್ತಿದೆ. ಭಾವಸಾರ ಕ್ಷತ್ರಿಯ ಸೇವಾ ಸಮಾಜ ಟ್ರಸ್ಟ್ ಸಮಾಜದವರಿಗೆ ಡಿಜಿಟಲ್ ಕಾರ್ಡ್ ಮಾಡಲಾಗುತ್ತಿದೆ ಇದು ರಾಜ್ಯದಲ್ಲಿಯೆ ಮೊದಲು ಒಂದು ಜಾತಿ ಸಂಘಟನೆ ಸಮಾಜದ ಪ್ರತಿಯೊಬ್ಬರಿಗೂ ಡಿಜಿಟಲ್ ಕಾರ್ಡ್ ನೀಡುತ್ತಿರುವುದು. ಭಾವಸಾರ ಕ್ಷತ್ರಿಯ ಸಮಾಜ ರಾಜ್ಯದಲ್ಲಿ 20ಲಕ್ಷ ಜನಸಂಖ್ಯೆ ಇದೆ, ವರ್ಷದಲ್ಲಿ ಒಂದು ಬಾರಿ ಡಿಂಡಿ ಮಹೋತ್ಸವ ಭಾವಸಾರ ಕ್ಷತ್ರಿಯ ಸಮಾಜದವರು ಒಂದು ಕಡೆ ಸೇರಿ, ಪಾಂಡುರಂಗ ಭಜನೆ ಮಾಡಿ ಸಮುದಾಯದ ಸಂಘಟನೆ ಮಾಡಲಾಗುತ್ತಿದೆ.ಭಾವಸಾರ ಕ್ಷತ್ರಿಯ ಸಮಾಜವು ಬೆಂಗಳೂರಿನ 35ಕಡೆಗಳಲ್ಲಿ ದೇವಸ್ಥಾನವಿದೆ ಹುಣ್ಣಿಮೆ, ಏಕಾದಶಿ ದಿನದಂದು ಅದ್ದೂರಿ ಅಚರಿಸಲಾಗುತ್ತದೆ.
ಭಾವಸಾರ ಕ್ಷತ್ರಿಯ ಸಮಾಜದ ಶ್ರೇಯೋಭಿವೃದ್ದಿಗೆ ಹಲವಾರು ಸಾಮಾಜಿಕ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಪಾಂಡುರಂಗ ವಿಠ್ಠಲ, ರುಕ್ಮಿಣಿ ಉತ್ಸವ ಮೂರ್ತಿಗಳನ್ನು ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಸಾಗಿದರು.
ಜಯದೇವ ಸ್ಮಾರಕ ರಾಷ್ಟೋತ್ಥನ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ , ನೇತ್ರಾ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಇದೇ ವೇಳೆ ಭಾಗಿಯಾಗಿದ್ದರು.