ಬೆಂಗಳೂರು: ಇಸ್ಕಾನ್ ದೇವಸ್ಥಾನದಲ್ಲಿ ಬಲರಾಮ ಪೌರ್ಣಮಿ ಮಹೋತ್ಸವವನ್ನು ಹರ್ಷೋಲ್ಲಾಸಗಳೊಂದಿಗೆ ಆಚರಿಸಕಾಯಿತು.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಶ್ರಾವಣ ಮಾಸದ ಪೌರ್ಣಿಮೆ ದಿನದಂದು ಭಗವಂತ ಶ್ರೀ ಕೃಷ್ಣನ ಅಣ್ಣನಾಗಿ ಅವತರಿಸಿದ ಶ್ರೀಬಲರಾಮರು, ಶ್ರೀಮಾನ್ ವಾಸುದೇವ ಹಾಗೂ ಶ್ರೀಮತಿ ರೋಹಿಣಿರವರ ಮಗನಾಗಿ “ಬಲದೇವ”,”ಬಲಭದ್ರ” ಹಾಗೂ “ಸಂಕರ್ಷಣ”ಎಂಬ ಹೆಸರುಗಳಿಂದಲೂ ಪ್ರಸಿದ್ಧಿಯಾಗಿದೆ.
ಶ್ರೀ ಬಲರಾಮನು ಭಕ್ತರ ಆಧ್ಯಾತ್ಮಿಕ ಸಾಧನೆಯಲ್ಲಿ, ಎದುರಾಗಬಹುದಾದ ಎಲ್ಲಾ ಅಡಚಣೆಗಳನ್ನು ಎದುರಿಸಲು ಬೇಕಾದ ಶಕ್ತಿ ಸಾಮರ್ಥ್ಯ ಮತ್ತು ಬಲವನ್ನು ಕರುಣಿಸುತ್ತಾನೆ. ಈ ಪವಿತ್ರ ದಿನದಂದು, ಭಕ್ತಾದಿಗಳು ಅರ್ಧದಿನ ಉಪವಾಸವನ್ನು ಆಚರಿಸಿ, ತಮ್ಮ ಆಧ್ಯಾತ್ಮಿಕ ಸ್ಥೈರ್ಯ ಹಾಗೂ ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಿಕೊಳ್ಳಲು ಪ್ರಾರ್ಥಿಸಿದರು.
ಇಸ್ಕಾನ್ ಬೆಂಗಳೂರು ದೇವಸ್ಥಾನದಲ್ಲಿ , ಶ್ರೀಶ್ರೀ ಕೃಷ್ಣ ಬಲರಾಮರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಸಂಜೆ 6:00ಗೆ ಶ್ರೀ ಕೃಷ್ಣ ಬಲರಾಮಾರಾ ಉತ್ಸವಮೂರ್ತಿಗಳಿಗೆ ಮಹಾಭಿಷೇಕವು ಘನವಾಗಿ ಜರುಗಿತು. ಇದಾದ ನಂತರ ಅವರಿಗೆ ಮಹಾ ಭಕ್ತರ ಮಧುರ ಭಜನೆ–ಕೀರ್ತನೆಗಳೊಂದಿಗೆ ಮಹಾಮಂಗಳಾರತಿಯೂ ನೆರವೇರಿತು.
ಈ ಮಹೋತ್ಸವದ ಅಂಗವಾಗಿ ಶ್ರೀ ಶ್ರೀ ಕೃಷ್ಣ ಬಲರಾಮ ದೇವರಿಗೆ 56 ಬಗೆಯ ವಿಶೇಷ ಮಹಾಪ್ರಸಾದಗಳನ್ನು (ಚಪ್ಪನ್ ಭೋಗ)ವನ್ನು ಸಮರ್ಪಿಸಲಾಗಿತ್ತು.ಭಕ್ತಿ , ಸಂತೋಷ ಹಾಗೂ ಆಧ್ಯಾತ್ಮಿಕ ಹರ್ಷೋಲ್ಲಾಸಗಳಿಂದ ಉತ್ಸವವು ನೆರವೇರಿತು.