ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಜನರಿಗೆ ನಡೆಸುತ್ತಿದ್ದ ಯುವಜನ ಮೇಳ ಯುವ ಸಂಪರ್ಕ ಸಭೆಗಳನ್ನ ನಡೆಸಲಾಗುತ್ತಿತ್ತು ಅವುಗಳನ್ನು ಪುನಃ ಜಾರಿಗೆ ತರಬೇಕೆಂದು ಯುವ ಸಬಲೀಕರಣದ ಸದಸ್ಯರಾದಂತಹ ಡಾ. ಚಿನ್ನಪ್ಪ ವೈ ಚಿಕ್ಕ ಹಾಗಡೆ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರಣದೀಪ್ ಡಿ ಐಎಎಸ್ ರವರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತದಿಂದ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದವರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಜನರಿಗೆ ನಡೆಸುತ್ತಿದ್ದ ಯುವಜನ ಮೇಳ ಯುವ ಸಂಪರ್ಕ ಸಭೆಗಳನ್ನ ಕಳೆದ ಐದು ವರ್ಷಗಳಿಂದ ನಿಲ್ಲಿಸಲಾಗಿತ್ತು. ಅದನ್ನ 2025ರ ಬಜೆಟ್ ನಲ್ಲಿ ಸೇರಿಸಿ ಮತ್ತೊಮ್ಮೆ ಯುವ ಜನರಿಗಾಗಿ ಇರುವ ಕಾರ್ಯಕ್ರಮಗಳಾದ ಯುವಜನ ಮೇಳ ಯುವ ಸಂಪರ್ಕ ಸಭೆ ಯುವ ಪ್ರಯಾಣ ರಾಜ್ಯ ಯುವ ಪ್ರಶಸ್ತಿ ಮತ್ತು ಇಲಾಖೆಯು ಗ್ರಾಮೀಣ ಭಾಗದ ಯುವ ಜನರಿಗಾಗಿ ನಡೆಸುತ್ತಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಪುನರ್ ಆರಂಭಿಸುವಂತೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರಣದೀಪ್ ಡಿ ರವರಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಡಾ. ಚಿನ್ನಪ್ಪವೈ ಚಿಕ್ಕ ಹಾಗಡೆ. ಎಚ್ಜಿ ಶೋಭಾ. ಎಂ ನಾಗವೇಣಿ ಓಂ ಪ್ರಕಾಶ್ ರೊಟ್ಟಿ ಮನವಿಯನ್ನ ಸಲ್ಲಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾರ್ಥಿ ಅಲ್ಲದ ಯುವಜನರು ಯುವಕರ ಸಂಘ, ಇವತ್ತಿ ಮಂಡಳಿ, ಮಹಿಳಾ ಮಂಡಳಿಗಳನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದರು . ಜೊತೆಗೆ ಇಲಾಖೆಯೂ ಪ್ರತಿವರ್ಷ ತಾಲೂಕು ಮಟ್ಟದಲ್ಲಿ ಯುವಜನ ಮೇಳಗಳನ್ನು ಸಂಘಟಿಸಿ ಈ ಯುವಜನ ಮೇಳಗಳಲ್ಲಿ ಜಾನಪದ ನೃತ್ಯ ಜಾನಪದ ಗೀತೆ ಕೋಲಾಟ ಲಾವಣಿ ಗೀಗಿಪದ ಗೀತಿಪದ, ಏಕಪಾತ್ರ ಅಭಿನಯ, ರಂಗಗೀತೆ ಭಜನೆ ಚರ್ಮ ವಾದ್ಯ, ವೀರಗಾಸೆ ಹೀಗೆ 17 ಪ್ರಕಾರದ ಗ್ರಾಮೀಣ ಕಲೆಗಳ ಯುವಜನ ಮೇಳಗಳನ್ನು ಇಲಾಖೆಯ ತಾಲೂಕು ಮಟ್ಟ ಜಿಲ್ಲಾ ಮಟ್ಟ ವಿಭಾಗ ಮಟ್ಟ ಮತ್ತು ರಾಜ್ಯಮಟ್ಟದ ಯುವಜನ ಮೇಳಗಳನ್ನು ಇಲಾಖೆ ಆಯೋಜಿಸಿ ಯುವ ಜನರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿ ಕೊಡುತ್ತಾ ಬರುತ್ತಿತ್ತು ಆದರೆ ಇತ್ತೀಚೆಗೆ ಐದು ವರ್ಷಗಳಿಂದ ಈ ಮೇಳಗಳನ್ನು ನಿಲ್ಲಿಸಲಾಗಿದೆ ಜೊತೆಗೆ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಅದೀನದಲ್ಲಿ ಬರುವ ಯುವಕ ಸಂಘ ಯುವತಿ ಮಂಡಳಿ ಮಹಿಳಾ ಮಂಡಳಿಯ ಸಂಪೂರ್ಣವಾಗಿ ನಿಶ್ಚಲವಾಗಿದೆ ಇಲಾಖೆಯು ಕೂಡಲೇ ಯುವಕ ಸಂಘಗಳನ್ನ ಪುನಶ್ಚೇತನ ಮಾಡಬೇಕು ಮತ್ತು ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದ ಯುವ ಪ್ರೇರಣ ಯುವ ಚೇತನ ತರಬೇತಿ ಶಿಬಿರಗಳನ್ನು ನಡೆಸಬೇಕು ನಡೆಸಬೇಕು ಮತ್ತು ರಾಜ್ಯಮಟ್ಟದ ಯುವಜನ ಮೇಳದಲ್ಲಿ ರಾಜ್ಯ ಯುವ ಪ್ರಶಸ್ತಿಯನ್ನು ಕೂಡ ಸಮಾಜಮುಖಿ ಕೆಲಸ ಮಾಡುವ ಯುವಕರಿಗೆ ಕೊಡಬೇಕೆಂದು ಮನವಿ ಸಲ್ಲಿಸಿದರು ಹಾಗೂ ರಾಜ್ಯದಲ್ಲಿ ಯುವ ಜನರಿಗಾಗಿಯೇ ಇರುವ ಯುವ ಸಬಲೀಕರಣ ಕ್ರೀಡಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡೆಗೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ಯುವಜನ ಚಟುವಟಿಕೆಗೆ ಸಂಪೂರ್ಣವಾಗಿ ಕಾರ್ಯಕ್ರಮ ನಿಲ್ಲಿಸಲಾಗಿದೆ ಇದು ರಾಜ್ಯದಲ್ಲಿರುವ ಶೇಕಡ 40ರಷ್ಟು ಯುವಕರಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ ಮತ್ತು ಯುವಕರು ಕಲೆ ಮತ್ತು ಸಂಸ್ಕೃತಿಯನ್ನು ಮತ್ತು ದೇಶ ಸೇವೆಯಲ್ಲಿ ತೊಡಗಿಸುವ ಕಾಯಕವನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ತೊಡಗಿಕೊಂಡಿದ್ದಾರೆ ಆದ್ದರಿಂದ ಇಲಾಖೆಯೂ ಮುಂಬರುವ ಬಜೆಟ್ ನಲ್ಲಿ ಯುವಕರಿಗಾಗಿ ಇಂದೇ ಇದ್ದ ಎಲ್ಲಾ ಯೋಜನೆಗಳನ್ನು ಪುನರ್ ಆರಂಭ ಮಾಡಬೇಕೆಂದು ಕರ್ನಾಟಕ ರಾಜ್ಯದ ಭಾರತ ಸರ್ಕಾರದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ವೇದಿಕೆ ಸರ್ಕಾರವನ್ನ ಒತ್ತಾಯ ಮಾಡುತ್ತಿದೆ ಮತ್ತೋರ್ವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಎಚ್ ಡಿ ಶೋಭಾ ಅವರು ಮಾತನಾಡಿ ಇಲಾಖೆಯು ಯುವಜನರಿಗಾಗಿ ಒಳಾಂಗಣ ತರಬೇತಿ ಶಿಬಿರಗಳನ್ನು ಕೂಡ ನಿಲ್ಲಿಸಲಾಗಿದೆ ಮತ್ತು ನಗರ ಪ್ರದೇಶದ ಯುವ ಜನರಿಗಾಗಿದ್ದ ತರಬೇತಿ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ ಅವುಗಳನ್ನು ಕೂಡ ಪುನರ್ ಆರಂಭ ಮಾಡಬೇಕೆಂದು ಮಾನ್ಯ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದರು ನಿಯೋಗದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಎಂ ನಾಗವೇಣಿ ಟಿ ರಾಯಪ್ಪ ಬೀದರ್ ನ ಓಂ ಪ್ರಕಾಶ್ ರೊಟ್ಟಿ ಭಾಗವಹಿಸಿ ಮನೆ ಪತ್ರವನ್ನು ಸಲ್ಲಿಸಿದರು.