ಬೆಂಗಳೂರು: ಕೆಟೆಲ್ ವಿಜ್ಞಾನ ಕಾಲೇಜು ಆಡಳಿತ ಮಂಡಳಿ ಬಡ ಗುತ್ತಿಗೆದಾರರಿಗೆ ಮಾಡಿದ ಕೆಲಸಗಳಿಗೆ ಸರಿಯಾಗಿ ದುಡ್ಡು ಕೊಡದೆ ಸತಾಯಿಸಿ ಮೋಸ ಮಾಡುವ ಜಾಣ ಕುರುಡುತನ ಸಂಸ್ಥೆ ಮಾಡದೆ ಎಂದು ದಲಿತ ಸೇನೆ ಕರ್ನಾಟಕ ರಾಜ್ಯ ಯುವ ಅಧ್ಯಕ್ಷ ಕಲಿಯುಗಾನ ಅವರು ಆರೋಪ ಮಾಡಿದರು.
ಬೆಂಗಳೂರಿನ ಪುಸ್ಕೋಪ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಿಂದ ಕಿಟಲ್ ವಿಜ್ಞಾನ ಕಾಲೇಜಿನ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಗುತ್ತಿಗೆದಾರರಾಗಿ ಬಡ ಬಡೆ ಸಾಹೇಬ್ ಅವರು ವಹಿಸಿಕೊಂಡಿದ್ದರು, ಕಾಮ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು ಹಣ ಬಿಡುಗಡೆ ಮಾಡಲು ಇಲ್ಲಸಲ್ಲದ ಸೊಬಗು ಹೇಳುತ್ತಿದ್ದಾರೆ, ನಾಲ್ಕು ಅಂತಸ್ತಿನ ಶಾಲಾ ಕಟ್ಟಡ ಕಟ್ಟಲು ಕೋಟ್ಯಂತರ ರೂಪಾಯಿ ಬಂಡವಾಳ ಸುರಿದಿದ್ದಾರೆ, 2020ಗೆ ಕೇವಲ 70 ಲಕ್ಷ ಮಾತ್ರ ಹಣ ನೀಡಿ ಇನ್ನು ಉಳಿದ ಹಣವನ್ನು ಕಳೆದ 5 ವರ್ಷಗಳಿಂದ ಕೊಡುವುದಾಗಿ ಸತಾಯಿಸುತ್ತಿದ್ದಾರೆ.
ಕಿಟಲ್ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಪತ್ರಗಳನ್ನು ಕೊಟ್ಟು ಬಡ ಗುತ್ತೇದಾರನಿಗೆ ಸಮಸ್ಯೆ ಇರುವ ಬಗ್ಗೆ ಮನವರಿಕೆ ಮಾಡಿದರು ಸಹ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೆ ಪ್ರತಿ ಬಾರಿಯೂ ಸಹ ವರ್ಷದಲ್ಲಿ ಒಬ್ಬೊಬ್ಬರೇ ಪ್ರಾಂಶುಪಾಲರು ಬದಲಾಗುತ್ತಿದ್ದಾರೆ ಕಾಲೇಜಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾರು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವಿದ್ ಖಾನ್ ಮಾತನಾಡಿ, ಧಾರವಾಡದಲ್ಲಿರುವ ಕಿಟಲ್ ವಿಜ್ಞಾನ ಕಾಲೇಜು ನ್ಯಾಯ ಸಮ್ಮತವಾಗಿ ಮಾಡಿರುವ ಕೆಲಸಕ್ಕೆ ತಕ್ಕಂತೆ ಹಣ ಪಾವತಿ ಮಾಡಬೇಕಾಗಿದೆ, ಅದನ್ನು ಬಿಟ್ಟು ಇಲ್ಲಸಲ್ಲದ ಸಬೂಬು ಹೇಳಿಕೊಂಡು ಬಡ ಗುತ್ತಿಗೆದಾರನನ್ನು ಅಲೆದಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಿಟಲ್ ವಿಜ್ಞಾನ ಕಾಲೇಜು ಧಾರವಾಡದ ಆಡಳಿತ ಮಂಡಳಿ ನೇಮಕ ಮಾಡಿರುವ ಪ್ರಾಂಶುಪಾಲರಾದ ಸ್ಟ್ಯಾನ್ಲಿ ಪೀಟರ್ ಸಿ ಎಸ್ ಐ ಪ್ರಾಂಶುಪಾಲರಾದ ಕಮಲ ಢವಳೆ, ಅಶೋಕ್ ದೇಸಾಯಿ, ಬಾಬು ಹೆಬ್ಬಳ್ಳಿ ಹಾಗೂ ಪೊಲೀಸ್ ಸಿಬ್ಬಂದಿಗಳ ನಡುವೆ ಹಲವು ವಿಷಯಗಳ ಬಗ್ಗೆ ಚರ್ಚೆಗಳು ಸಹ ಆಗಿದವು. ಈ ವೇಳೆ ಕಾಲೇಜು ಆಡಳಿತ ಮಂಡಳಿಯು ಬಡ ಗುತ್ತಿಗೆದಾರನಿಗೆ ಬಿಟ್ಟು ವಾಪಸ್ ಕೊಡುವುದಾಗಿ ಎಲ್ಲರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದರು. ಆದರೆ ಇಲ್ಲಿಯವರೆಗೂ ಸಹ ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಿಟಲ್ ವಿಜ್ಞಾನ ಕಾಲೇಜು ಆಡಳಿತ ಮಂಡಳಿಯಿಂದ ಮೋಸಕ್ಕೆ ಒಳಗಾಗಿರುವ ಗುತ್ತಿಗೆದಾರ ಬಡಬಡೆ ಸಾಹೇಬ್ ಅವರು ಮಾತನಾಡಿ, ಕಾಲೇಜಿನ ನಾಕು ಅಂತಸ್ಥನ ಕಟ್ಟಡಕ್ಕೆ ಕೋಟ್ಯಾಂತರ ರೂಪಾಯಿ ಅನುಮೋದ ನೀಡಿರುವ ಕಾಲೇಜಿನ ಆಡಳಿತ ಮಂಡಳಿ ಪತ್ರೊಂದಿದೆ ಅದಕ್ಕೆ ಸಂಬಂಧಿಸಿದಂತೆ ನಾಲ್ಕು ಒಂದಷ್ಟು ನಿರ್ಮಾಣ ಮಾಡಲಾಗಿದೆ ಅದಕ್ಕೆ ಸಂಬಂಧಿಸಿದಂತೆ ಕೇವಲ 70,ಲಕ್ಷ ಹಣವನ್ನು ಮಾತ್ರ ನೀಡಿದ್ದಾರೆ ಇನ್ನು ಉಳಿದ ಹಣ ನೀಡಲು ನಮ್ಮನ್ನು ಅಲೆದಾಡಿಸಿಕೊಳ್ಳುತ್ತಿದ್ದಾರೆ, ನಮ್ಮ ಮನೆಯ ಪೋಷಕರು ವಯಸ್ಸಾಗಿದ್ದು ಸಾಕಷ್ಟು ಹಣಕಾಸಿನ ತೊಂದರೆ ಎದುರಾಗುತ್ತದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಹಣ ಇಲ್ಲದೆ ತೊಂದರೆ ಅನುಭವಿಸಿಂತಾಗಿದೆ ಹಿಂದೂ ತಮ್ಮ ಹಾಡನ್ನು ತೋಡಿಕೊಂಡರು.
ಕೆಟ್ಟಲ್ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಗೆ ಇನ್ನೂ ಒಂದು ವಾರಗಳ ಕಾಲ ಹಣವನ್ನು ನೀಡಲು ಗಡುವನ್ನು ನೀಡದಿದ್ದೇವೆ ಅಂದರೆ ಮುಂದಿನ ಸೋಮವಾರ ಹಣ ನೀಡದೆ ಇದ್ದ ಪಕ್ಷದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ದಲಿತ ಸಂಘಟನೆಗಳಿಂದ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಇದೆ ವೇಳೆ ತಿಳಿಸಿದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಯ ಹಲವು ಮುಖಂಡರು ಇದೆ ವೇಳೆ ಉಪಸ್ಥಿತರಿದ್ದರು.