ಬೆಂಗಳೂರು: ರಾಜ್ಯ ಸರ್ಕಾರ ನಿವೇಶನ ಜಮೀನು ಮಾಲೀಕರ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಭೂ ಮಾಫಿ ಹಾಗೂ ವಂಚಕೂರರ ಮಾಡುವ ವ್ಯವಹಾರ ತಡೆಗಟ್ಟುವ ಉದ್ದೇಶದಿಂದ ಆರಂಭಿಸಿರುವ ಡಿಜಿಟಲೀಕರಣ ಹಾಗೂ ಈ ಸ್ವತ್ತು ಅಭಿಯಾನ ಪ್ರಸ್ತುತ ಗೊಂದಲದ ಗೂಡಾಗಿದೆ ಎಂದು ನ್ಯಾಷನಲ್ ಪಬ್ಲಿಕ್ ಸರ್ವಿಸ್ಸ್ಥೆ ಸಂಸ್ಥೆಯ ರಾಜ್ಯಾಧ್ಯಕ್ಷ ಎನ್ ಡಿ ಎಸ್ ಸ್ಟೇಪನ್ ಆರೋಪ ಮಾಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಹಾಗೂ ಭೂ ಮಾಲೀಕರಿಗೆ ಸರಳವಾಗಿ ಹಾಗೂ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ಮಹತ್ವದ ಡಿಜಿಟಲೀಕರಣ ರೂಪಿಸಿದೆ, ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಖಾತ ಅಭಿಯಾನ ಸರಾಗವಾಗಿ ನಡೆಯುತ್ತಿದ್ದು ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಇತರೆಡೆ ಈ ಸ್ವತ್ತು ಮಾಡಿಸುವುದು ಕೆಲಸವಾಗಿದೆ ಅಕ್ಷರ ಜ್ಞಾನ ಇಲ್ಲದವರು ಈ ಸತ್ತು ಮಾಡಿಸಲು ಹೋದರೆ ಸ್ಥಳೀಯ ಆಡಳಿತ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ.
ಸರ್ಕಾರಕ್ಕೆ ಒಂದು ರಸಿದಿ ಅಧಿಕಾರಿಗಳಿಗೆ ಮತ್ತೊಂದರ ರಸೀದಿ!
ಈ ಕಾಟ ಮಾಡಿಸಲು ಸರ್ಕಾರದಿಂದ ಕೇವಲ ರೂ.100ಗಳಿದ್ದರೆ ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ದುಪ್ಪಟ್ಟು ಹಣವನ್ನು ಹೀಗುತ್ತಿರುವುದು ನೋಡಬಹುದಾಗಿದೆ ಅದಕ್ಕೆ ಸಂಬಂಧಿಸಿದಂತೆ ದಾಖಲಾತಿಗಳು ಸಹ ತಮ್ಮಲ್ಲಿ ಇವೆ ಎಂದು ತಿಳಿಸಿದರು. ಅಲ್ಲದೆ ಸರ್ಕಾರಕ್ಕೆ ಈ ಕಾತ ಮಾಡಿಸುವಾಗ ಹಣ ಕೊಡುವುದು ಇದೆ ಆದರೆ ಇಲಾಖೆಯ ಅಧಿಕಾರಿಗಳು ಮತ್ತೊಂದು ರಶೀದಿಯಲ್ಲಿ ದುಪ್ಪಟ್ಟು ಹಣವನ್ನು ಸ್ಪೀಕುತಿದ್ದಾರೆ ಹಾಗಾದರೆ ಸರ್ಕಾರ ಈ ಯೋಜನೆ ಮಾಡಿದರೂ ಪ್ರಯೋಜನವೇನು ಎನ್ನುವ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಕಾಡುತ್ತಿದೆ.
ಈ ಸ್ವತ್ತು ಹೈಟೆಕ್ ಭ್ರಷ್ಟಾಚಾರ?
ಅಧಿಕಾರಿಗಳಿಗೆ ಹಣ ಕೊಟ್ಟು ಮಾಡಿಸಬೇಕು ಅದಕ್ಕಾಗಿ ವೆಚ್ಚವಾಗುತ್ತದೆ ಎಂದು ನಿವೇಶನ ಮಾಲೀಕರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಹಣ ಪೀಕುತಿದ್ದಾರೆ. ಈ ಸ್ವತ್ತು ಒಂದು ರೀತಿಯಲ್ಲಿ ಹೈಟೆಕ್ ರೀತಿಯ ಬ್ರಷ್ಟಾಚಾರವಾಗಿ ಕಾಡುತ್ತಿದೆ. ಭೂ ಮಾಲೀಕರಿಗೆ ಈ ಸ್ವತ್ತು ಮಾಡಿಸುವುದೆಂದರೆ ಪ್ರಸ್ತುತ ಇನ್ನೊಂದು ಜನ್ಮ ವ್ಯಕ್ತಿ ಬಂದಂಗೆ ಆಗುತ್ತದೆ ಎಂದು ಹೊಲನನ್ನು ಸಹ ತೋಡಿಕೊಂಡಿದ್ದಾರೆ.
ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡು ನಿವೇಶನಕ್ಕೆ ಈ ಸ್ವತ್ತು ಮಾಡಿಸಿಕೊಳ್ಳದಿದ್ದರೆ ಕಾನೂನು ಬದ್ಧವಾಗಿ ಅದಕ್ಕೆ ಮಾನ್ಯತೆ ಇಲ್ಲ ವಾಗುತ್ತದೆ ಎಂದರೆ ಅಂತಹ ಸ್ವತ್ತುಗಳನ್ನು ಸರ್ಕಾರ ನೋಂದಣಿ ಮಾಡಿಸಲು ಏಕೆ ಅವಕಾಶ ನೀಡಬೇಕು ಎಂದು ಸ್ಟೀಫನ್ ಸರ್ಕಾರಕ್ಕೆ ಪ್ರಶ್ನೆ ಮಾಡಿದರು?
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರ್ಕಾರದ ಈಸತ್ತು ಮಾಡಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು, ಮೇಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಸ್ವತ್ತು ಆಗುವಂತೆ ಕ್ರಮ ಕೈಗೊಳ್ಳಬೇಕು, ಈ ಮೂಲಕ ನಿವೇಶನ ಮಾಲೀಕರಿಗೆ ನೆರವಾಗಬೇಕು ಎಂದು ಅವರು ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಪತ್ರಿಕ ಗೋಷ್ಠಿಯಲ್ಲಿ ಮನೋಹರ್ ಉಪಸ್ಥಿತರಿದ್ದರು.