ಹಾಸನ :- ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್ಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದ ಪುಟ್ಟಗೂಡಿನ ಪಟ್ಟದರಸಿ ಮಕ್ಕಳ ಕನ್ನಡ ಚಲನಚಿತ್ರದ ಚಿತ್ರೀಕರಣ ಬುಧವಾರ ಶೆಟ್ಟಿಹಳ್ಳಿ ಚರ್ಚಿನಲ್ಲಿ ಚಿತ್ರದ ಅಂತಿಮ ಹಂತದ ( ಕ್ಲೈಮಾಕ್ಸ್ ) ಚಿತ್ರೀಕರಣ ಮಾಡುವ ಮೂಲಕ ಮುಕ್ತಾಯಗೊಂಡಿತು.
ಆಲೂರು ತಾಲೂಕಿನ ತಾಳೂರಿನಲ್ಲಿ ಸುಮಾರು ೨೬ ದಿನಗಳಿಂದ ಸತತವಾಗಿ ಚಿತ್ರೀಕರಣ ಕೈಗೊಂಡ ಚಿತ್ರತಂಡವು ಕೊನೆಯ ಹಂತದ ಕ್ಲೈಮಾಕ್ಸ್ ಚಿತ್ರೀಕರಣಕ್ಕೆ ಬೈರಾಪುರದ ಬೆಥಸ್ತಾ ಶಾಲೆಯ ೫೦ಕ್ಕೂ ಹೆಚ್ಚು ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರು ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರುಗಳನ್ನು ಬಳಸಿಕೊಳ್ಳುವ ಮೂಲಕ ಚಿತ್ರದ ಅಂತಿಮ ಹಂತದ ಕ್ಲೈಮಾಕ್ಸ್ ಅನ್ನು ಚಿತ್ರದ ನಿರ್ದೇಶಕರಾದ ಅರುಣ್ ಗೌಡ ಚಿತ್ರೀಕರಣ ಮಾಡುವ ಮೂಲಕ ಪೂರ್ಣಗೊಳಿಸಿದರು.
ಈ ಮಕ್ಕಳ ಚಿತ್ರದ ನಿರ್ಮಾಪಕರಾದ ಲಕ್ಷ್ಮಿಕುಮಾರ್ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದAತೆ ಶಾಲೆಗಳು ಪ್ರಾರಂಭವಾಗುವ ಹೊತ್ತಿಗೆ ಚಿತ್ರೀಕರಣ ಮುಗಿಸಬೇಕೆಂಬ ಅಭಿಲಾಷೆ ಹೊಂದಿದ್ದರು. ಅದರಂತೆ ಒಂದು ತಿಂಗಳ ಒಂದೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದ ಚಿತ್ರ ತಂಡವು ೨೬ ದಿನಗಳಲ್ಲಿ ಚಿತ್ರದ ಎಲ್ಲಾ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಿ ಮುಗಿಸುವ ಮೂಲಕ ಚಿತ್ರ ತಂಡಕ್ಕೆ ಖುಷಿ ತಂದಿದೆ.
ಸಾಹಿತಿಗಳು ಹಾಗೂ ಶಿಕ್ಷಕರಾದ ಕೊಟ್ರೇಶ್ ಎಸ್ . ಉಪ್ಪಾರ್ ಅವರ ಕಾದಂಬರಿ ಆಧಾರಿತ ಈ ಮಕ್ಕಳ ಚಿತ್ರವಾಗಿದ್ದು ಕಾದಂಬರಿಯಲ್ಲಿ ಬರುವ ಎಲ್ಲಾ ಸನ್ನಿವೇಶಗಳು ಹಾಗೂ ಸಂಭಾಷಣೆಗಳು ಸ್ವಾಭಾವಿಕವಾಗಿ ಬರಬೇಕೆಂಬ ನಿಟ್ಟಿನಲ್ಲಿ ಪ್ರತಿದಿನ ನಿರ್ಮಾಪಕ ಹಾಗೂ ನಿರ್ದೇಶಕರೊಂದಿಗೆ ಚರ್ಚಿಸುವ ಮೂಲಕ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಎಲ್ಲಾ ಸನ್ನಿವೇಶಗಳನ್ನು ಕಾದಂಬರಿಯಲ್ಲಿ ಮೂಡಿ ಬಂದಿರುವ ಪ್ರಕಾರದಲ್ಲಿಯೇ ಚಿತ್ರೀಕರಣ ಮಾಡುವಂತಾಗಿದೆ . ತಮ್ಮ ಕಾದಂಬರಿ ಸಿನಿಮಾ ಆಗುವ ಮೂಲಕ ಸಮಾಜಕ್ಕೆ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಜೀವನದಲ್ಲಿ ನಡೆಯುವ ಕಥೆಯನ್ನು ಓದುಗರರಿಗೆ ಹಾಗೂ ಸಿನಿಪ್ರಿಯರಿಗೆ ನೋಡುವಂತೆ ಮಾಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದಗಳು ಹೇಳುವ ಮೂಲಕ ಖುಷಿ ವ್ಯಕ್ತಪಡಿಸಿದರು.
ಚಿತ್ರದ ಚಿತ್ರೀಕರಣ ಪ್ರಾರಂಭವಾದಾಗಿನಿAದ ಹಿಡಿದು ಮುಗಿಯುವವರೆಗೂ ಪ್ರತಿದಿನ ಪ್ರತಿ ಹಂತದಲ್ಲೂ ತಮ್ಮದೇ ಸ್ವಂತ ಚಿತ್ರದಂತೆ ಊರಿನವರು ಹಾಗೂ ತಾಲೂಕಿನವರು ಪ್ರೋತ್ಸಾಹಿಸಿದ್ದು ಖುಷಿ ತಂದಿದೆ. ಮತ್ತೊಂದು ಚಿತ್ರವನ್ನು ಇದೇ ತಾಲೂಕಿನಲ್ಲಿ ಇವರ ಪ್ರೋತ್ಸಾಹದ ಜೊತೆಗೆ ಮಾಡುವುದಾಗಿ ಚಿತ್ರದ ನಿರ್ಮಾಪಕರಾದ ಲಕ್ಷ್ಮಿಕುಮಾರ್ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಸಕಲೇಶಪುರ ತಾಲೂಕಿನವರೇಯಾದ ಪತ್ರಕರ್ತರದ ಅರುಣ್ ಗೌಡ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದು . ತಮ್ಮ ೮ ವರ್ಷದ ಸಿನಿಮಾ ನಿರ್ದೇಶನದ ಕ್ಷೇತ್ರದ ಅನುಭವದೊಂದಿಗೆ ಮೊದಲ ಬಾರಿಗೆ ನಿರ್ದೇಶನಕ್ಕಾಗಿ ಕೈಗೆತ್ತಿಕೊಂಡ ಕಾದಂಬರಿ ಆಧಾರಿತ ಮಕ್ಕಳ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದು. ಹಳೆ ಕಲಾವಿದರು ಹಾಗೂ ಸ್ಥಳೀಯ ಹವ್ಯಾಸಿ ಕಲಾವಿದರಗಳೊಂದಿಗೆ, ಚಿಕ್ಕ ಮಕ್ಕಳನ್ನು ಇಟ್ಟುಕೊಂಡು ಒಂದೇ ಹಂತದ ಚಿತ್ರೀಕರಣ ಮಾಡಿರುವುದು ಖುಷಿ ತಂದಿದೆ. ಚಿತ್ರೀಕರಣಕ್ಕೆ ನೆರವಾದ ಎಲ್ಲರಿಗೂ ಹಾಗೂ ಚಿತ್ರದ ಕಲಾವಿದರಿಗೂ ತಂತ್ರಜ್ಞರಿಗೂ ಧನ್ಯವಾದಗಳು ತಿಳಿಸಿದರು.
ಒಟ್ಟಾರೆ ಜಿಲ್ಲೆಯವರೇ ಆದ ಕಾದಂಬರಿಗಾರರು, ನಿರ್ದೇಶಕರು ಹಾಗೂ ಕಲಾವಿದರುಗಳನ್ನು ಒಳಗೊಂಡ ಈ ಮಕ್ಕಳ ಚಿತ್ರವು ಒಂದೇ ಹಂತದ ೨೬ ದಿನಗಳಲ್ಲಿ ತಮ್ಮ ಚಿತ್ರಿಕರಣವನ್ನು ಮುಗಿಸಿರುವುದು ಚಿತ್ರತಂಡದವರೆಲ್ಲರಿಗೂ ಖುಷಿಯನ್ನು ತಂದಿದೆ. ಆದಷ್ಟು ಬೇಗ ಚಿತ್ರ ತೆರೆ ಮೇಲೆ ಬರಲಿ ಎಂಬುದು ಜಿಲ್ಲೆಯವರ ಅಸೆ.
ಚಿತ್ರಕ್ಕೆ ಸಂಭಾಷಣೆಯನ್ನು ವಿಜಯ ಹಾಸನ್ ಬರೆದಿದ್ದು , ಛಾಯಾಗ್ರಹಣ ಚಂದು, ಸಹ ನಿರ್ದೇಶನ ಶರತ್ ಬಾಬು, ಅನಿಲ್ ಕುಮಾರ್, ಸಹಾಯಕ ನಿರ್ದೇಶಕ ಅರ್ಜುನ್ ಕ್ಷತ್ರಿಯ ಮುಂತಾದವರಿದ್ದು .
ತಾರಾಗಣದಲ್ಲಿ ಸಿದ್ದುಮಂಡ್ಯ, ಪೂಜಾ ರಘುನಂದನ್, ಪಿ.ಜಿ.ಆರ್. ಸಿಂಧ್ಯಾ, ಸಿಮೆಂಟ್ ಮಂಜುನಾಥ್, ಕುಮಾರಿ ಶರಣ್ಯ, ಮಂಜುಳಮ್ಮ, ಗ್ಯಾರಂಟಿ ರಾಮಣ್ಣ, ಲತಾಮಣಿ ತುರುವೇಕೆರೆ, ಎಚ್.ಎಸ್.ಪ್ರಭಾಕರ್, ಅಂಬಿಕಾ, ಸ್ಪೂರ್ತಿ, ಧನ್ವಿತ್, ಸಿಂಚನ, ದೀಪಿಕಾ, ನವೀನ್ ಎಂ. ಜೆ, ಶ್ರೇಯಸ್, ಲಕ್ಷ್ಮಿ, ಯಶಸ್ಸು, ಹೇಮಲತಾ, ಶ್ರೇಯಸ್, ವೀಣಾ, ಆಶಾ, ಲಕ್ಷ್ಮಿ, ಚಂದನ್, ಮುರಳಿ ಹಾಸನ್, ಜಯಶಂಕರ್ ಬೆಳಗುಂಬ, ಸಾಸು ವಿಶ್ವನಾಥ್, ಶರತ್ ಬಾಬು, ಶೋಭಾ, ಡಾ.ಹಸೀನಾ ಎಚ್.ಕೆ, ಬಿ.ಪಿ.ಗಿರೀಶ್, ಭಾನುಮತಿ, ಶ್ವೇತಾ ಶಾಂತಕುಮಾರ್, ಶಶಿಚಂದ್ರಿಕಾ, ರೀನಾ ಮೆತಿವ್ಸ್, ಶಲ್ಪಕೃತಿ, ಎಂ.ಬಾಲಕೃಷ್ಣ, ಪ್ರದೀಪ್ ಗೌಡ, ಪ್ರಿಯಾಂಕ.ಎಸ್, ಧರ್ಮ ತಾಳೂರು, ಶ್ರೀಧರ್, ಅರ್ಜುನ್ ಕ್ಷತ್ರಿಯ, ರೇವಂತ್, ಮಾರೇಶ್, ಗಿರೀಶ್ ಗಾಂಧರ್ವ, ಪ್ರಿಯಾ, ಉಷಾ ಸೇರಿದಂತೆ ಇತರರಿದ್ದಾರೆ .