ಉತ್ತರ ಕನ್ನಡ, (ಕುಮಟಾ): ರಾಜ್ಯ ಸರ್ಕಾರದಲ್ಲಿ ಸಿಎಂ ಮತ್ತು ಡಿಸಿಎಂ ಮ್ಯೂಸಿಕಲ್ ಚೇರ್ ಆಡ್ತಿದ್ದಾರೆ. ಸಿದ್ದರಾಮಯ್ಯನವರನ್ನೇ ಸಿಎಂ ಅಂತ ಅನ್ಕೊಂಡಿದ್ವಿ. ರಾಜ್ಯದಲ್ಲಿ ಸೂಪರ್ ಸಿಎಂ ಇದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಬೇಕು, ಡಿಸಿಎಂಗೆ ಸಿಎಂ ಕುರ್ಚಿ ಬೇಕು, ಮತ್ತೊಬ್ಬರಿಗೆ ಅಧ್ಯಕ್ಷರ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ ವಾಡಿದರು.
ರಾಜ್ಯ ಸರ್ಕಾರದಲ್ಲಿ ಸಿಎಂ, ಡಿಸಿಎಂ ಮ್ಯೂಸಿಕಲ್ ಚೇರ್ ಆಡ್ತಿದ್ದಾರೆ
ಕುಮಟಾದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗಬೇಕೆಂದರೆ ಸುರ್ಜೆವಾಲ ಹತ್ತಿರ ಹೋಗಬೇಕಿದೆ. ರಾಜ್ಯ ಸರ್ಕಾರದಲ್ಲಿ ಒಬ್ಬರಿಗೆ ಸಿ.ಎಂ ಕುರ್ಚಿ ಉಳಿಸಿಕೊಳ್ಳಬೇಕು ಅಂತ. ಇನ್ನೊಬ್ಬರಿಗೆ ಡಿಸಿಎಂ ಸ್ಥಾನದಿಂದ ಸಿಎಂ ಆಗಬೇಕೆಂದು ಹಂಬಲ. ಮತ್ತೊಬ್ಬರಿಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಇವರನ್ನ ಖಾಲಿ ಮಾಡಿಸಿ ತಾವು ಕುಳಿತುಕೊಳ್ಳುವ ಪ್ಲಾನ್ ನಡೀತಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಅಂತ ಇಲ್ಲಿವರೆಗೆ ನಾವು ಆಂದುಕೊಂಡಿದ್ದೆವು. ಆದ್ರೆ ರಾಜ್ಯದಲ್ಲಿ ಸೂಪರ್ ಸಿ.ಎಂ ಬಗ್ಗೆ ಈಗ ಜನ ಚರ್ಚೆ ಮಾಡುತಿದ್ದಾರೆ.
ರಾಜ್ಯದಲ್ಲಿ ಸಿ.ಎಂ ಸ್ಥಾನ ಯಾರಿಗೆ ಕೊಟ್ಟಿದೆವೆ ಎಂದು ಜನ ಚರ್ಚೆ ಮಾಡುತಿದ್ದಾರೆ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ನಾಯಕರ ಮ್ಯೂಸಿಕಲ್ ಚೇರ್ ಆಸೆಗೆ ರಾಜ್ಯದ ಜನ ಬಲಿಯಾಗುತಿದ್ದಾರೆ. ಜನಗಳಿಗೆ ತೆರಿಗೆ ಹಾಕಿ ಲೂಟಿ ಮಾಡುತಿದ್ದಾರೆ. ನಾನು ಮುಂದಿನ ಚುನಾವಣೆ ನಿಲ್ಲುವ ಬಗ್ಗೆ ಆಲೋಚನೆ ಮಾಡಿಲ್ಲ. ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿ ಆಗಬೇಕು. ನನ್ನ ಹೋರಾಟ ಜೆಡಿಎಸ್ ಕಟ್ಟಬೇಕು, ಪಕ್ಷವನ್ನ ದಡ ಮುಟ್ಟಿಸಬೇಕು ಎಂದು ತಿಳಿಸಿದರು.
ಕುಮಟಾ ತಾಲೂಕಿನಲ್ಲಿ ಅತೀ ಹೆಚ್ಚು ಮೀನುಗಾರಿದ್ದಾರೆ. ಸದ್ಯ ಅವರಿಗೆ ಶೀಥಲೀಕರಣ ಘಟಕ (ಕೋಲ್ಡ್ ಸ್ಟೋರೇಜ್ ) ಅವಶ್ಯಕತೆ ಇದೆ. ಈ ಕೂಡಲೇ ಸರ್ಕಾರ ಅವರ ಸಮಸ್ಯೆಗಳನ್ನ ಪರಿಹರಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಹಿಸಿದರು.
ಮೀನುಗಾರರ ಶಾಶ್ವತ ಪರಿಹಾರಕ್ಕೆ ನಿಖಿಲ್ ಕುಮಾರಸ್ವಾಮಿ ಒತ್ತಾಯ
ಮೀನುಗಾರರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇಲ್ಲಿನ ಜನತೆ ಯಾವುದೇ ಗ್ಯಾರಂಟಿಯನ್ನ ನಂಬಿಕೊಂಡು ಜೀವನ ಮಾಡುತ್ತಿಲ್ಲ. ಶಾಶ್ವತ ಪರಿಹಾರವನ್ನ ಮೀನುಗಾರರಿಗೆ ಕೊಡಬೇಕು ಈ ಕೂಡಲೇ ಸರ್ಕಾರ ಮೀನುಗಾರ ಜತೆ ಸಭೆ ಮಾಡಿ ಅವರಿಗೆ ಸೂಕ್ತ ಪರಿಹಾರ ಒದಗಿಸಿಕೊಡ ಬೇಕೆಂದು ಅಗ್ರಹಿಸಿದರು.
ಈ ಭಾಗದಲ್ಲಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಇಲ್ಲದ ಕಾರಣ ಉತ್ತರಕನ್ನಡ ಜಿಲ್ಲೆಯ ಜನರು ಪರಡಾಡುತ್ತಿದ್ದಾರೆ. ನೂರಾರು ಕಿಲೋ ಮೀಟರ್ ದೂರವಿರುವ ಅಕ್ಕಪಕ್ಕದ ಜಿಲ್ಲೆಗಳನ್ನು ಚಿಕಿತ್ಸೆಗಾಗಿ ಆಶ್ರಯಿಸಬೇಕಾಗಿದೆ. ಈ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಯಾವುದೇ ಚಿಂತನೆ ಮಾಡಿಲ್ಲ.ಇತಿಹಾಸದಲ್ಲೇ ಇಂಥ ಕೆಟ್ಟ ಸರ್ಕಾರ ನೋಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬಗ್ಗೆ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
ಕುಮಟಾದಲ್ಲಿ ಸೂರಜ್ ಸೋನಿ ನಾಯಕ್ ಅವರ ಸೊಲು, ಅವರ ಸೋಲನ್ನ ಸೋಲು ಅಂತ ಭಾವಿಸುವುದಕ್ಕೆ ಸಾಧ್ಯವಿಲ್ಲ. ಅದು ನಿಜಕ್ಕೂ ಕೂಡ ಸೋಲಲ್ಲ, ಇಡೀ ನಗರದಲ್ಲಿ ರ್ಯಾಲಿ ಮಾಡುವ ವೇಳೆ ಪ್ರತಿಯೊಬ್ಬ ಕಾರ್ಯಕರ್ತರ ಹೆಸರನ್ನ ಬಾಯಲ್ಲಿ ಹೇಳ್ತಾರೆ ಇದೇ ಅವರ ನಿಜವಾದ ಗೆಲುವು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ರಾಜಕಾರಣದ ಬೇರು ಇದ್ದಂತೆ. ಕಾರ್ಯಕರ್ತರು ಪಕ್ಷದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಬಲ ತುಂಬುವಂತ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೆಡಬೇಡಿ. ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಬೇಡ, ನಿಮ್ಮ ಸಂಘಟನೆ ನೀವು ಮಾಡಿ ಕುಮಾರಣ್ಣ ಅವರು ಈಗಾಗಲೇ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಒಟ್ಟಾರೆ ಒಗ್ಗಟ್ಟಿನಿಂದ ಕಾರ್ಯಕರ್ತರು ಕೆಲಸ ಮಾಡಿ, ಒಂದಲ್ಲ ಹಲವಾರು ಭಾರಿ ಕುಮಟಾ ಕ್ಷೇತ್ರಕ್ಕೆ ನಾನು ಬರುತ್ತೇನೆ. ಸೂರಜ್ ಸೋನಿ ನಾಯಕ್ ಅವರು ನೂರಕ್ಕೆ ನೂರು ಜನರ ಪ್ರೀತಿ ಗಳಿಸಿದ್ದಾರೆ ಅದ್ರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷ ಸಂಘಟನೆ ಮಾಡಿ ನೂರಕ್ಕೆ ನೂರು
ಸೂರಜ್ ಸೋನಿ ನಾಯಕ್ ಅವರು ಶಾಸಕರಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆನಂದ್ ಅಸ್ನೋಟಿಕರ್, ಕೋರ್ ಕಮಿಟಿ ಸದಸ್ಯರಾದ ಸೂರಜ್ ನಾಯ್ಕ್ ಸೋನಿ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಬಾಲರಾಜ್ ಗುತ್ತೇದಾರ್, ಉದಯ್ ಶೆಟ್ಟಿ, ಗುರುರಾಜ್ ಹುಣಸಿಮರದ, ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.