ಬೆಂಗಳೂರು: ಮಾಜಿ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಅಸಭ್ಯವಾಗಿ ಮಹಿಳೆಯರನ್ನು ಬಳಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿವೆ. ಜಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೆಗೌಡರಿಗೆ ಪ್ರಜ್ವಲ್ ರೇವಣ್ಣನ ಮೇಲೆ ಇರುವ ಆಶ್ಲೀರ ವಿಡಿಯೋಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ತನಿಖಾ ತಂಡಕ್ಕೆ ವಹಿಸಿದೆ, ಸತ್ಯಸತೆಗೆ ಹೊರಬೀಳುತ್ತದೆ ಎಂದರು.
ಲೊಕಸಭಾ ಚುನಾವಣೆಯ ಸಮಯ, ಈ ಸಂದರ್ಭದಲ್ಲಿ ಪ್ರಜ್ವಲ್ ಮೇಲೆ ಬಂದಿರುವ ಆರೋಪಗಳು ಎಷ್ಟರ ಮಟ್ಟಿಗೆ ಸರಿಯೋ ತಪ್ಪೋ ಗೊತ್ತಿಲ್ಲ. ನಾನು ಅದರ ಬಗ್ಗೆ ಏನು ಹೇಳುವುದಿಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗುತ್ತದೆ. ತಪ್ಪಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.ತನಿಖೆಗೆ ಸಂಪೂರ್ಣವಾಗಿ ಸ್ವಾಗತವನ್ನು ನೀಡಿದ್ದೇವೆ. ವರದಿ ಬಂದ ಬಳಿಕ ಏನು ಮಾಡಬೇಕೋ ಎಂಬುದನ್ನು ಪಕ್ಷದಿಂದ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಜರ್ಮನಿಗೆ ಹಾರಿದ ಪ್ರಜ್ವಲ್ ರೇವಣ್ಣ ?
ಪ್ರಜ್ವಲ್ ರೇವಣ್ಣ ಅವರು ಅಶ್ಲೀಲ ವಿಡಿಯೋಗಳು ಯಾವಾಗ ಬೆಳಕಿಗೆ ಬಂದಾಗಿನಿAದ ಎಲ್ಲಿಯೂ ಕಾಣದೆ ಸತ್ಯ ಸತ್ಯತೆಯ ಬಗ್ಗೆ ಯಾವುದೇ ಸ್ಪಷ್ಟಿಕರಣ ನೀಡದೆ ತಲೆಮರೆಸಿಕೊಂಡಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರಜ್ವಲ್ ರೇವಣ್ಣ ಅವರು ಹಾಸನದಲ್ಲಿ ಇದ್ದಾರೋ, ಬೆಂಗಳೂರಿನಲ್ಲಿ ಇದ್ದಾರೋ, ಅಥವಾ ವಿದೇಶಕ್ಕೆ ಹೋಗಿದ್ದಾರೋ ಗೊತ್ತಿಲ್ಲ. ಪ್ರಕರಣ ಎಸ್ಐಟಿಯಲ್ಲಿ ತನಿಖೆ ನಡೆಯುತ್ತಿದೆ, ಯಾರು ದೂಷಿಯೆಂದು ಗೊತ್ತಾಗುತ್ತದೆ. ಇದರಲ್ಲಿ ಯಾರು ಏನು ಮಾಡಲು ಸಾಧ್ಯವಿಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗುತ್ತದೆ. ಅಲ್ಲಿಯ ತನಕ ಕಾದು ನೋಡೋಣ ಎಂದರು.
ಪ್ರಜ್ವಲ್ ಮೇಲಿನ ಆಶ್ಲೀಲ ವಿಡಿಯೋಗಳು ನನ್ನ ಗಮನಕ್ಕೆ ಬಂದಿಲ್ಲ!
ಸAಸದ ಪ್ರಜ್ವಲ್ ರೇವಣ್ಣ ಮೇಲೆ ಮಹಿಳೆಯರ ಅಶ್ಲೀಲ ವಿಡಿಯೋಗಳು ಇರುವುದು ಇಲ್ಲಿತನಕ ನನ್ನ ಗಮನಕ್ಕೆ ಬಂದಿಲ್ಲ. ಇಡೀ ರಾಜ್ಯದಲ್ಲಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲಿ ಹರಿದಾಡುತ್ತಿವೆ ಎಂದು ಪ್ರಶ್ನೆ ಮಾಡಿದಾಗ ಇವು ಯಾವು ನನಗೆ ಗೊತ್ತಿಲ್ಲ. ನೀವು ಹೇಳಿದಾಗ ಗೊತ್ತಾಗಿದೆ ಎಂದು ಹಾರಿಕೆ ಉತ್ತರ ನೀಡಿದರು.