ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ 29ರ ಅವಧಿಗೆ ರಾಜ್ಯ ಹಾಗು ಖಜಾಂಚಿ ಗಿರಿಗೆ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದೆ, ಹೀಗಾಗಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ವತಿಯಿಂದ ಇಬ್ಬರನ್ನು ಕಣಕ್ಕೆ ಇಳಿಸಲಾಗಿದ್ದು ಅವರನ್ನು ರಾಜ್ಯ ಸರ್ಕಾರಿ ನೌಕರರು ಅಭೂಪ ಪೂರ್ವಕವಾಗಿ ಗೆಲ್ಲಿಸಿಕೊಡುವಂತೆ ಅಭ್ಯರ್ಥಿಗಳು ಮಾನವಿಮಾಡಿಕೊಂಡರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಸ್ಥಾನದ ಆಕಾಂಕ್ಷಿ ಕೃಷ್ಣ ಮೂರ್ತಿ ಮಾತನಾಡಿ, ರಾಜ್ಯದ ವಿವಿಧ ಸಂಘಗಳ ವೃಂದದ ಮಟ್ಟುರಾಜ್ಯ ಸರಕಾರಿ NPS ನೌಕರರ ಸಂಘದ ಹಾಗು ಹಿರಿಯ ಮುಖಂಡರುಗಳ ಜಿಲ್ಲಾ ಹಾಗು ತಾಲುಕು ಮುಖಂಡರುಗಳ ಒತ್ತಾಯದ ಮೇರೆಗೆ ಅವಿರೋಧವಾಗಿ ರಾಜ್ಯಾಧ್ಯಕಾಗಿರಿಗೆ ನಿಲ್ಲಲು ಆಯಾಜೆ ಮಾಡಲಾಗಿದೆ. ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಸಮಾನತೆ, ಸಶಕ್ತ, ಸಧೃಡ ಸಂಘಟನೆ ಹಾಗು ರಾಜಿ ರಹಿತ ಹೋರಾಟದ ಸ್ವಾವಲಂಬನೆಯ ವೈಜ್ಞಾನಿಕ ನಿಲುವುಗಳಿಗೆ ಬದ್ಧರಾಗಿ, ನೌಕರರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ತಂಡ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದೆ. ಪ್ರಸ್ತುತ ಈಗಿರುವ ಅಧ್ಯಕ್ಷರು ಅವಕಾಶವಾದಿಗಳಾಗಿದ್ದು, ಏಕ್ ಸ್ವಾಮ್ಯ ನಿರ್ಧಾರವನ್ನು ತೆಗೆದುಕೊಂಡು ಸರ್ಕಾರಿ ನೌಕರರನ್ನು ಇಕ್ಕಟ್ಟಿಗೆ ಸಿಲುಕಿಸುವ, ನೌಕರರಿಗೆ ಯಾವುದೇ ಅನುಕೂಲವನ್ನು ಮಾಡಿಕೊಟ್ಟಿಲ್ಲ, ಅಲ್ಲದೆ ಸಂಘದಲ್ಲಿ ಒಬ್ಬ ಏಕವ್ಯಕ್ತಿ ಆಡಳಿತ ನಡೆಸುತ್ತಿದ್ದು ನೌಕರರಿಗೆ ಯಾವ ವಿಚಾರಕ್ಕೂ ಸ್ಪಂದನೆ ಮಾಡದೆ ಇರುವುದು ನೌಕರರ ಬೀಸರಕ್ಕೆ ಕಾರಣವಾಗಿದೆ.
ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸರ್ಕಾರಿ ನೌಕರರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಿ ನೌಕರರ ಸಂಘವನ್ನು ಬಳಸಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. 2019ರಿಂದ 24 ವರೆಗೆ ಸಂಘದ, ನೌಕರರ ಯಾವುದೇ ಸಂಸ್ಥೆಗಳಿಗೆ ವಿರುದ್ಧವಾಗಿ ಹೀರಾಟಗಳನ್ನು ರಚನಾತ್ಮಕವಾಗಿ ನಡೆಯದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ನೀತಾನ್ ಪಿಂಚಣಿ ವ್ಯವಸ್ಥೆ ಇಲ್ಲಿಯ ತನಕ ರದ್ದಾಗದೆ ಇರುವುದು, ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿದೆ ಇರುವುದು ಗಗನ ಕುಸುಮವಾಗಿದೆ ಎಂದು ತಿಳಿಸಿದರು.
ನೌಕರರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಆಕ್ರೋಶಕ್ಕೆ ಗುರಿ
ಸಂಘದ ಖಜಾಂಚಿ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಯಾಗಿರುವ ವಿವಿ ಶಿವರುದ್ರಯ್ಯ ಮಾತನಾಡಿ, ನಾನು ಸಹಾ 2019ರಿಂದ 24 ವರೆಗೆ ಈಗಿರುವ ಸಂಘದಲ್ಲಿ ಗೌರವ ಅಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ, ಆದರೆ ಪ್ರಸ್ತುತ ಅಧ್ಯಕ್ಷರ ಆಡಳಿತದ ವೈಖರಿ ಯಾವ ಸರ್ಕಾರಿ ನೌಕರರಿಗೂ ಸಮಾಧಾನ ತಂದಿಲ್ಲ, ನೌಕರರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ, ಅಲ್ಲದೆ ಅವರಿಗೆ ಉಸ್ತ ಬಂದಹಾಗೆ ಸಂಘದ ಬೈಲವನ್ನು ತಿದ್ದುಪಡಿ ಮಾಡಿಕೊಂಡು ಸಂಘದ ವಿರುದ್ಧವಾಗಿ ವರ್ತಿಸುತ್ತಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಲಿ ರಾಜ್ಯಾಧ್ಯಕ್ಷರಿಂದ ಸರ್ಕಾರಿ ನೌಕರರಿಗೆ ಯಾವುದೇ ಪ್ರಯೋಜನವಿಲ್ಲ
ಪ್ರಸ್ತುತ ಆಡಳಿತ ಮಂಡಳಿಯು ಪ್ರತಿ ತಾಲುಕು, ಜಿಲ್ಲೆಗಳಲ್ಲಿ ಮಿಲಟರಿ ಕ್ಯಾಂಟೀನ್ ತೆರೆಯುತ್ತೇವೆ ಎಂದು ಸುಳ್ಳು ಹೇಳಿರುವುದು, ಕೋವಿಡ್ ವೇಳೆ ತುಟ್ಟಿಭತ್ಯೆ ಗಳ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ಮರು ನೀಡದೆ ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2022 ರಿಂದ ಜಾರಿಯಾಗಬೇಕಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು 2024 ರಿಂದ ಜಾರಿಗೊಳಿಸುವ ಮೂಲಕ ಎರಡು ವರ್ಷಗಳ ಕಾಲ ಮಾಡಿ ವೇತನ ಆಯೋಗ ಜಾರಿಯಾಗಿದೆ. ತಾಲೂಕು ಚುನಾಯಿತ ಪ್ರತಿನಿಧಿಗಳಿಗೆ ರಾಜ್ಯ ಸಂಘಕ್ಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೆ ಇರುವುದು ಕೂಡ ಸರ್ಕಾರಿ ನೌಕರಿ ಇಷ್ಟು ವರ್ಷಗಳ ಕಾಲ ಇದ್ದ ಪ್ರತಿಭೆಗಳ ಹಕ್ಕುಗಳನ್ನು ಮುಟ್ಟಗೊಳಿಸಿದಾಗಿದೆ ಪ್ರಸ್ತುತ ನಮ್ಮ ತಂಡವು ಸರ್ಕಾರಿ ನೌಕರರು ಅನುಭವಿಸುತ್ತಿರುವ ವರ್ಗಾವಣೆ, ಬತ್ತಿ ಕಾಲಿ ಹುದ್ದೆಗಳ ಭರ್ತಿ ಎನ್ಪಿಎಸ್ ರದ್ದತಿ ಅಂತಹ ಅನೇಕ ನೌಕರರ ಸಮಸ್ಯೆಗಳಿಗೆ ಧ್ವನಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಪ್ರಾಥಮಿಕ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಎನ್ಪಿಎಸ್ನ ರಾಜ್ಯಾಧ್ಯಕ್ಷ ಶಾಂತರಾಮ್, ಸೋಮಶೇಖರ್ ನಿಂಗೇಗೌಡ ಧರ್ಮರಾಯ ಸೇರಿದಂತೆ ಅನೇಕ ಸರ್ಕಾರಿ ವಿರುದ್ಧದ ನೌಕರರು ಎದೆ ವೇಳೆ ಉಪಸ್ತರಿದ್ದರು.