ಹಾಸನ ; 1985 ರಲ್ಲಿ ಕುಮಾರಣ್ಣ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದ್ರು, ಆಗ ಕುಮಾರಣ್ಣ ಅವರು ರಾಜಕೀಯಕ್ಕೆ ಬಂದಿರಲಿಲ್ಲ. ಸಿನಿಮಾ ಹಂಚಿಕೆದಾರರಾಗಿ ವೃತ್ತಿ ಶುರು ಮಾಡಿದ್ರು. ಅದರಲ್ಲಿ ದುಡಿದ ಹಣಕಾಸಿನಿಂದ ರಾಮನಗರ ಜಿಲ್ಲೆಯಲ್ಲಿ ರಾಜಕೀಯವಾಗಿ ಗಟ್ಟಿಯಾಗಿ ನೆಲೆ ಊರಲು ದೇವೇಗೌಡರು ಚುನಾವಣೆ ನಿಲ್ಲುವ ಮೊದಲೇ ತೆಗೆದುಕೊಂಡು ಜಮೀನು ಅದು ಎಂದು ಸ್ಪಷ್ಟನೆ ನೀಡಿದರು.
ಇವತ್ತು ಕೋರ್ಟ್ನಿಂದ ಒಂದಷ್ಟು ನಿರ್ದೇಶನ ಕೊಟ್ಟಿದ್ದಾರೆ. ಕೆಲವೊಂದು ಸರ್ವೆ ನಂಬರ್ ಕೊಟ್ಟು ವರದಿ ನೀಡಿ ಎಂದಿದ್ದಾರೆ ಕಾನೂನಾತ್ಮಕವಾಗಿ ಯಾವ ರೀತಿ ಹೋರಾಟ ಮಾಡುಬೇಕು ಮಾಡುತ್ತೇವೆ ಎಂದರು.
ಅದು ಕೃಷಿ ಭೂಮಿ, ಕಮರ್ಷಿಯಲ್ ಕಟ್ಟಡ ಕಟ್ಟಿಲ್ಲ
ಅದು ಕೃಷಿ ಭೂಮಿ,ಅಲ್ಲಿ ಕೃಷಿ ಚಟುವಟಿಕೆಗೆ ತೆಗೆದುಕೊಂಡಿರುವುದು. ನಾನು ಕುಮಾರಣ್ಣನ ಮಗನಾಗಿ ಒಂದು ಮಾತು ಹೇಳ್ತಿನಿ, ಅಲ್ಲಿ ಯಾವುದೇ ಕಮರ್ಷಿಯಲ್ ಕಟ್ಟಡ ಕಟ್ಟಿಲ್ಲ, ಅದರಿಂದ ಸಂಪಾದನೆ ಮಾಡಲು ತೆಗೆದುಕೊಂಡಿಲ್ಲ. ನಾವು ಮೂಲ ಕೃಷಿಕರು, ನೀವು ಬಂದು ನೋಡಬಹುದು ತೋಟದಲ್ಲಿ ಎಷ್ಟು ಅಡಿಕೆ, ಎಷ್ಟು ತೆಂಗಿಮರಗಳಿದೆ ಎಂದು ತಿಳಿಸಿದರು.
ಇದು ಕೃಷಿ ಚಟುವಟಿಕೆಗೆ ತೆಗೆದುಕೊಂಡಿರುವುದು,ನಿನ್ನೆ ದಿನ ಕಾಂಗ್ರೆಸ್ ನಾಯಕರ ಹೇಳಿಕೆ ನೋಡಿದ್ದೇನೆ, ನಾಲ್ಕೈದು ಜನ ಕಾಂಗ್ರೆಸ್ನ ಮಹಾನ್ ನಾಯಕರು ಕುಮ್ಮಕ್ಕು ಕೊಟ್ಟು ಮಾಧ್ಯಮದ ಮುಂದೆ ನಿಲ್ಲಿಸಿ ಹೇಳಿಕೆ ಕೊಟ್ಟಿದ್ದಾರೆ.ಇದು ಇವತ್ತಿಂದ ಅಲ್ಲ ಹದಿನೈದು, ಇಪ್ಪತ್ತು ವರ್ಷದಿಂದ ಇದೇ ಆಪಾದನೆ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.