ಬೆಂಗಳೂರು: ಪ್ರತಿಭೆಗಳಿಂದ ಯಾರು ವಂಚಿತರಾಗುತ್ತಿದ್ದಾರೊ ಅಂತಹವರಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಅಕ್ಷರ ಸಂಗೀತ ಸಂಸ್ಥೆ ಮಾಡುತ್ತಿದ್ದು, ನೀವು ಮಕ್ಕಳಿಗೆ ಒಂದು ರೀತಿಯಲ್ಲಿ ಆಸರೆಯಾಗಿದ್ದೀರಿ ಎಂದು ನಿರ್ಮಾಪಕ ಹಾಗು ಡಾ.ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ರಾದ ಸಾರಾ ಗೋವಿಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾರಾ ಗೋವಿಂದ್ ಮಾತನಾಡಿ, ತಂದೆಯವರ ಹಸಿರಾಗಿಸುವ, ಉಳಿಸುವ ಕೆಲಸವನ್ನು ಅವರು ಮಾಡುತ್ತಾರೆ, ಪ್ರತಿಭೆಗಳಲ್ಲಿ ಯಾರು ವಂಚಿತರಾಗುತ್ತಿದ್ದಾರೋ ಅವರಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂಗೀತದಲ್ಲಿ ಪುಟ್ಟ ಪುಟ್ಟ ಮಕ್ಕಳು ಮನೋರಂಜನೆ. ನೀಡುತ್ತಿರುವುದು ಹೆಮ್ಮೆಯ ಸಂಗತಿ, ನೀವು ಮಕ್ಕಳಿಗೆ ಒಂದು ಆಸರೆ ಆಗಿದ್ದಾರೆ. ನಾವೆಲ್ಲರೂ ಅವರ ಜೊತೆಗೆ ಕೈಜೋಡಿಸಬೇಕು ಆಗಿದ್ದಾಗ ಮಾತ್ರ ಒಳ್ಳೆಯ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ. ಜಿಲ್ಲೆ. ತಾಲುಕು ಮಟ್ಟದಿನ ಎಲ್ಲರನ್ನು ಕರೆಸಿ , 8ನೇ ವರ್ಷದ ಸಂಭ್ರಮ ಮಾಡುತ್ತಿರುವುದು ಕಷ್ಟದ ಕೆಲಸ ಎಂದರು.
ಇದೊಂದು ಅಚ್ಚ ಕನ್ನಡದ ಕಾರ್ಯಕ್ರಮ, ಕನ್ನಡ ಪದಗಳು ಅಳಿಸಿಹೋಗುವ ಕಾಲದಲ್ಲಿ ನಿಮ್ಮಂತವರು ಕನ್ನಡ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡಿಗರಿಗೆ ಉದ್ಯೋಗ ಕೊಡುವ ಕೆಲಸ ಮಾಡಬೇಕು, ಕನ್ನಡದ ಕಾರ್ಯಕ್ರಮಗಳನ್ನು ಹಲವು ಸಂಘಟನೆಗಳು ಮಾಡುತ್ತಾ ಬಂದಿವೆ. ಕನ್ನಡ ಉಳಿಸುವತ್ತಿರುವುದು ಹೋರಾಟಗಾರರಿಂದ ವರತು ರಾಜಕೀಯ ನಾಯಕರು, ಅಧಿಕಾರಿಗಳಿಂದ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು. ಕನ್ನಡ ಉಳಿವಿಗೆ ಅನೇಕ ಕನ್ನಡಪರ ಸಂಘಟನೆಗಳು ಉಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಕನ್ನಡ ಭಾಷೆ ಕೇವಲ ಕೆಲ ದಿನಗಳಿಗೆ ಸೀಮಿತವಾಗಬಾರದು ಇಡೀ ವರ್ಷ ಬೇರೂರ ಬೇಕು ಎಂದರು.
ರಾಜ್ ಕುಮಾರ್ ಅಪಹರಣ ಮಾಡಿದ ಅಂದು ಪಾರ್ವತಮ್ಮ ರಾಜ್ ಕುಮಾರ್ ಅವರು ಮಧ್ಯರಾತ್ರಿ ನನ್ನನ್ನು ಕರೆಸಿಕೊಂಡು ಅಪಹರಣದ ಬಗ್ಗೆ ತಿಳಿಸಿ, ಏನಾದರೂ ಮಾಡಿ ರಾಜ್ ಕುಮಾರ್ ಬಿಡಿಸಿಕೊಂಡು ಬರುವಂತೆ ಹೇಳಿದ್ರು. ಅದು ಒಂದು ಕಹಿಯಾದ ಘಟನೆ ಬಗ್ಗೆ ಮೆಲಕು ಹಾಕಿದರು. ನಾಡು ನುಡಿಗಾಗಿ ಹೋರಾಡಿದಾಗ ಸಾಕಷ್ಟು ಕಹಿ ಸಿಹಿ ಘಟನೆಗಳು ಇದ್ದಾವೆ, ಅದನ್ನು ಹೇಳಲು ಹೊರಟರೆ ದಿನಗಳು ಸಾಲದು, ಕನ್ನಡದ ಬಗ್ಗೆ ಎಲ್ಲರಿಗೂ ಹೋರಾಟ ಮಾಡಬೇಕು, ಹಿಂದಿ ಹೇರಿಕೆ, ಪಕ್ಕದ ರಾಜ್ಯ ತಮಿಳರ ಹಾವಳಿ ಹೆಚ್ಚಾಗಿರುವ ಕಾಲದಲ್ಲಿ ಅಲ್ಲಿನವರಿಗೆ ಖಡಕ್ ಸೂಚನೆಕೊಟ್ಟು ಇದೀಗ ಶಾಂತಿಯಿಂದ ವರ್ತನೆ ಮಾಡುತ್ತಿರುವುದನ್ನು ಮಾಡಿರುವುದು ಕನ್ನಡಪರ ಹೋರಾಟಗಾರರಿಂದ ಮಾತ್ರ ಯಾವುದೇ ರಾಜಕೀಯ ಪಕ್ಷಗಳಿಂದ ಆಗಿಲ್ಲ ಎಂಬುದು ಎಂದರು.
ಸಿನಿಮಾ ನಿರ್ದೇಶಕರಾದ ಎಸ್ ನಾರಾಯಣ ಮಾತನಾಡಿ, ಅಕ್ಷರ ಸಂಸ್ಥೆ ಜಾನ ವೃದ್ಧಿ ಮಾಡುವ ಕೇಂದ್ರವಾಗಿದೆ, ಎಲ್ಲರ ಬಳಿಯೂ ಕಲೆ ಇರುತ್ತದೆ, ಆದರೆ ಎಲ್ಲರಿಗೂ ಕಳೆಯ ರೂಪ ಇರುವುದಿಲ್ಲ, ಕಲೆ ಊಟ ಕೊಡುವುದರ ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಕನ್ನಡ ಪರ ಹೋರಾಟಗಾರ, ನಿರ್ಮಾಪಕ ಸಾರಾ ಗೋವಿಂದ್ ಅವರ ಕನ್ನಡದ ಬಗ್ಗೆ ಇದ್ದ ಅಭಿಮಾನ, ನಡೆದುಬಂದ ಹೋರಾಟಗಳ ಬಗ್ಗೆ ಇಂಚಿಂಚು ಮಾಹಿತಿಗಳನ್ನು ಹಂಚಿಕೊಂಡರು. ಗೌರಿ ಪ್ರಸಾದ ಅವರ ಸಂಸ್ಥೆ ಮುಂದೆ ದೊಡ್ಡಮಟ್ಟದಲ್ಲಿ ಬೆಳೆಯಲಿ, ನೂರಾರು ಜನರಿಗೆ ಸಂಗೀತ ಕಲಿಸುವ ಕೆಲಸ ಆಗಬೇಕು ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಗೌರಿ ಪ್ರಸಾದ್ ಮಾತನಾಡಿ, ಸಂಸ್ಥೆಯನ್ನು ಬೆಳೆಸಲು ಹಗಲಿರುಳು ಶ್ರಮಿಸಲಾಗುತ್ತಿದೆ, ಸಣ್ಣ ಸಣ್ಣ ಮಕ್ಕಳು ಸಂಸ್ಥೆಯಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ, ಅವರಿಗೆ ವೇದಿಕೆ ಕೊಡುವ ಸಮಾಜದಲ್ಲಿ ಸರಿದಾರಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಲಾಗುತ್ತಿದೆ. ನಮಗೆ ಸಾಕಷ್ಟು ಜನರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಅವರಿಗೆ ಕೃತಜ್ಞನಾಗಿದ್ದೇನೆ ಎಂದರು.
ಅಕ್ಷರ ಸಂಗೀತ ಮಾಲೀಕರು, ಗಾಯಕರು, ಸಮಾಜಸೇವಕರು , ನಮ್ಮ ಕನ್ನಡ ಸಂಸ್ಥೆಯ ಅಧ್ಯಕ್ಷ ಗೌರಿ ಪ್ರಸಾದ್, ಸಿನಿಮಾ ನಿರ್ಮಾಪಕ ಎಸ್ ನಾರಾಯಣ್, ನಿರ್ಮಾಪಕ ಸಾರಾ ಗೋವಿಂದು, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸುರೇಶ್, ರಮಾನಂದ , ಮಾಜಿ ಬಿಬಿಎಂಪಿ ವಿರೋಧ ಪಕ್ಷದ ನಾಯಕರು ಶಿವರಾಜ್, ಚಿಕ್ಕಣ್ಣ, ಬಿಜೆಪಿ ಮುಖಂಡರು ಡಾ.ಆರ್ ಮಹೇಶ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗಣ್ಯರು ಕಾರ್ಯಕ್ರಮದಲ್ಲಿ ಕನ್ನಡದ ಎರಡು ಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಿದರು,ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ 20 ಕ್ಕಿಂತ ಹೆಚ್ಚು ಸಾಧಕರಿಗೆ ಅಕ್ಷರ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನ ಮಾಡಿದರು. ಇದೇ ವೇಳೆ ಸಂಸ್ಥೆಯ ಪದಾಧಿಕಾರಿಗಳು, ಸಂಗೀತ ಆಸಕ್ತರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಯುವ, ಹೊಸ ಗಾಯಕರು ತಮ್ಮದೇ ಶೈಲಿಯಲ್ಲಿ ವೇದಿಕೆ ಮೇಲೆ ಸಂಗೀತ ಸುಧೆ ಹರಿಸಿದರು.