ಬೆಂಗಳೂರು: ನಮ್ಮ ಕರ್ನಾಟಕ ಸೇನೆಯ ಬೆಂಗಳೂರು ಜಿಲ್ಲೆ ಯುವ ಘಟಕ ಅಧ್ಯಕ್ಷರಾಗಿ ಮನೋಜ್ ಕುಮಾರ್ ನೇಮಕವಾಗಿದ್ದು, ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ಅವರನ್ನು ಶಿವಾಜಿನಗರದಲ್ಲಿರುವ ಕಚೇರಿಯಲ್ಲಿ ಯುವ ನಾಯಕ ಭೇಟಿ ಮಾಡಿ ಅಭಿನಂದಿಸಿದರು.
ನಮ್ಮ ಕರ್ನಾಟಕ ಸೇನೆ ಮಾಡುವ ಕೆಲಸ ಕಾರ್ಯಗಳಲ್ಲಿ ಯಾವುದೇ ರಾಜಿ ರಹಿತ ಹಾಗೂ ರಾಜಕೀಯ ರಹಿತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯ ನಿರ್ವಹಿಸುತ್ತೇನೆ. ಸೇನೆಯ ತತ್ವ-ಸಿದ್ಧಾಂತಗಳಿಗೆ ಬದ್ಧನಾಗಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ” ಎಂಬ ಸೇನೆಯ ಅಚಲ ನಿರ್ಧಾರದಲ್ಲಿ ನಂಬಿಕೆ ಇಟ್ಟು ನಾಡ ಸೇವೆಗೆ ಶಕ್ತಿ ಮೀರಿ ದುಡಿಯುತ್ತೇನೆಂದು ಈ ಮೂಲಕ ಪ್ರಮಾಣಿಕರಿಸುತ್ತೇನೆ ಎಂದು ಬೆಂಗಳೂರು ಜಿಲ್ಲೆ ಯುಘಟಕದ ಅಧ್ಯಕ್ಷ ಮನೋಜ್ ಕುಮಾರ್ ಅವರು ತಿಳಿಸಿದರು.
ಇನ್ನು ಇದೇ ವೇಳೆ ನಮ್ಮ ಕರ್ನಾಟಕ ಸೇನೆಯ ಯುವ ಘಟಕದ ಬೆಂಗಳೂರು ಜಿಲ್ಲೆ ಉಪಾಧ್ಯಕ್ಷರಾಗಿ ಯಶ್ವಂತ್, ಸಹಾಯಕ ಉಪಾಧ್ಯಕ್ಷರಾಗಿ ವಿವೇಕ್ ನಾಯಕ್ ,ಆಪ್ತ ಕಾರ್ಯದರ್ಶಿಯಾಗಿ ಅಶೋಕ್ ಕೆ.ವಿ, ಜಂಟಿ ಕಾರ್ಯದರ್ಶಿಯಾಗಿ ಗಿರೀಶ್, ಖಜಾಂಚಿಯಾಗಿ ಪವನ್ ಕುಮಾರ್ ,ಸಂಚಾಲಕರಾಗಿ ಕೀರ್ತಿ ರಾಜ್ ಅವರು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.