ಬೆಂಗಳೂರು: ಕೆಪಿಎಸ್ಸಿ ನಡೆಸಿರುವ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ ಮತ್ತೆ ಹಲವು ತಪ್ಪುಗಳಾಗಿದ್ದು, ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅಭ್ಯರ್ಥಿಗಳ ಅನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಫೆ.18ರಂದು ನಗರದ ಸ್ಪಾತಂತ್ರ್ಯ ಉದ್ಯಾನವನದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟಗಳು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೆಎಎಸ್ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳು ಆಕ್ಟೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ, ಕರ್ನಾಟಕ ರಕ್ಷಣಾವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಅಖಿಲ ಕರ್ನಾಟಕ ರಾಜ್ಯವಿದ್ಯಾರ್ಥಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು, ಕೆಪಿಎಸ್ಸಿ ತಪ್ಪು ಮಾಡಿರುವ ನಿರ್ಧಾರವನ್ನು ವಿರೋಧಿಸಿ, ಫೆ.18ರಂದು ನಡೆಯುತ್ತಿರುವ ಹೋರಾಟದಲ್ಲಿ ಅಭ್ಯರ್ಥಿಗಳಿಗೆ, ಪೋಷಕರಿಗೆ, ಕನ್ನಡ ಚಿತ್ರರಂಗದ ನಟ-ನಟಿಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿವೆ. ಸ್ವಾರ್ಥವನ್ನು ಬಿಟ್ಟು ಪ್ರತಿಯೊಬ್ಬ ಕೆಪಿಎಸ್ಸಿ ಅಭ್ಯರ್ಥಿಯು’ ಆಯೋಗ ಹಾಗೂ ಸರ್ಕಾರದ ಧೋರಣೆಯನ್ನು ಖಂಡಿಸಿ, ಕರ್ನಾಟಕ ರಕ್ಷಣವೇದಿಕೆ ಮತ್ತು ಅಖಿಲ ಕರ್ನಾಟಕ ರಾಜ್ಯದ ವಿಡಿಯೋ ಕನ್ನಡಪರ ಸಂಘಟನೆಗಳ ಒಕ್ಕೂಟಗಳ ಸಹಯೋಗದೊಂದಿಗೆ ಬೃಹಪ್ರತಿಬಟನೆಯನ್ನು ನಗರದಲ್ಲಿ ನಡೆಸಲಾಗುವುದೆಂದು ಪತ್ರಿಕಾ ಘೋಷಿಯಲ್ಲಿ ತಿಳಿಸಿದರು.
ವಿವಿಧ ಸಂಘಟನೆ ಸಹಯೋಗದೊಂದಿಗೆ ನಡೆಯುವ ಹೋರಾಟಕ್ಕೆ ಕನಿಷ್ಠ 20ಸಾವಿರಕ್ಕೂ ಅಧಿಕ ಮಂದಿ ಪತಿಭಟನೆಗೆ ಭಾಗವಹಿಸಿ, ಕೆಪಿಎಸ್ಸಿ ಮತ್ತು ನೇಮಕಾತಿ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆಯಿರಿ ಎಂದು ತಿಳಿಸಲಾಗುವುದು ಎಂದು ಎಚ್ಚರಿಸಿದರು.
ಪರೀಕ್ಷೆಯಲ್ಲಿ ಆಗಿರುವ ಪ್ರಕರಣವೇನು:
ಕೆಪಿಎಸ್ಸಿ ನಡೆಸುವ ಪರೀಕ್ಷೆಗಳು ಅನೇಕ ಆಕಾಂಕ್ಷಿಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಇದಕ್ಕಾಗಿ. ಹಗಲು-ರಾತ್ರಿ ಶ್ರಮ ಹಾಕುವವರಿದ್ದಾರೆ. ಕನ್ನಡವನ್ನು ಎಲ್ಲ ಹಂತಗಳಲ್ಲಿಯೂ ಅನುಷ್ಠಾನಕೆ ತರಲು ನಿರ್ಧರಿಸಿದ ಸರ್ಕಾರ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-‘ 2022ನ್ನು ರೂಪಿಸಿತು. ಆದರೆ, ಪರೀಕ್ಷೆಗಳ ಮಟ್ಟಿಗೆ ಕನ್ನಡದಲ್ಲಿ ನಡೆಸುವ ಮತ್ತು ಇಂಗ್ಲಿಷ್ನಲ್ಲಿ ನಡೆಸುವ ಬಗ್ಗೆ ಬಹಳದೊಡ್ಡ ಅಂತರ ಕಂಡುಬಂದಿದೆ.
2024ರ ಆ.27ರಂದು ನಡೆದ KPSC ಪೂರ್ವಭಾವಿ ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳು ತಪ್ಪಾಗಿವೆ. ನಂತರ ಸರ್ಕಾರದ ಆದೇಶದಂತೆ ಡಿ. 29ರಂದು ನಡೆದ ಮರು ಪರೀಕ್ಷೆಗಳಲ್ಲೂ ಹಲವಾರು ತಪ್ಪಗಳು ಗೊಂದಲಗಳು ಕಂಡುಬಂದಿವೆ. ಹಾಗಾಗಿ ಡಿ.29ರಂದು ನಡೆದ ಪರೀಕ್ಷೆಯನ್ನು ರದ್ದುಪಡಿಸಿ, ಅಭ್ಯರ್ಥಿಗಳ ಹಿತ ದೃಷ್ಟಿಯಿಂದ ಮತ್ತೆ ಮರು ಪರಿಕ್ಷೆ ನಡೆಸಬೇಕು ಎಂದು ಈ ಹೋರಾಟವನ್ನು ಹಮ್ಮಿಹೊಳ್ಳಲಾಗಿದೆ ಎಂದು ತಿಳಿಸಿದರು. ಕೆಪಿಎಸ್ಸಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಇದೇ ವೇಳೆ ಪಸ್ತರಿಸಲು ಅಲ್ಲದೆ ಕನ್ನಡ ಪರ ಸಂಘಟನೆಗಳ ಮುಖಂಡರು ಸಹ ಈ ಒಂದು ಗೋಷ್ಠಿಯಲ ಹಾಜರಿದ್ದರು.