ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಇಂದು ನಿನ್ನೆಯದಲ್ಲ ಹಲವು ವರ್ಷಗಳ ಸಮಸ್ಯೆಯಾಗಿದೆ ಸರ್ಕಾರ ಕೂಡಲೇ ಮೀನಮೇಷ ಮಾಡದೆ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವಿಧಾನಪರಿಷತ್ ಸದಸ್ಯರಾದ ಸಿಟಿ ರವಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಧರಣಿ ನಿರತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಬಗ್ಗೆ ಕಳೆದ ಅಧಿವೇಶನದಲ್ಲಿ ದ್ವನಿ ಎತ್ತಿದೆ, ಅದಕ್ಕೆ ಆಡಳಿತ ಸರ್ಕಾರದ ನಾಯಕರು ನುಣುಚಿಕೊಳ್ಳುವ ಕೆಲಸ ಮಾಡಿ, ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಪಲಾಯನ ವಾದರು.
ಪ್ರಾಥಮಿಕ ಶಾಲಾ ಶಿಕ್ಷಕರು ಸಮಸ್ಯೆಗಳಿಗೆ ನ್ಯಾಯಯುತವಾಗಿ ಬೇಡಿಕೆ ಮುಂದಿಟ್ಟಿದ್ದಾರೆ, ಅದಕ್ಕೆ ರಾಜ್ಯ ಸರ್ಕಾರ ಕಿವಿಗೊಡದೆ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು. ಶಿಕ್ಷಕರ ಬಗ್ಗೆ ಕಾಳಜಿ ಇದ್ದರೆ ಮೊದಲು ಶಿಕ್ಷಣ ಸಚಿವರು, ಮುಖ್ಯ ಮಂತ್ರಿಗಳು ಈ ಕೂಡಲೇ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ಹಿಂಬಡ್ತಿ ವಿರುದ್ಧ ಹಾಗೂ ಹೆಡ್ ಮಾಸ್ಟರ್ ಬಡ್ತಿ ನೀಡುವಲ್ಲಿ ಅನ್ಯಾಯ ಎಸಗಿದ್ದಾರೆ, ಕೂಡಲೇ ಅದನ್ನು ಮುಂಬಡ್ತಿ ನೀಡಬೇಕು ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ C & R ಬದಲಾವಣೆ ಮಾಡಬೇಕು ಎಂದರು. 2017ರಿಂದ C&R ಜಾರಿಗೆ ತರಲಾಗಿದ್ದು, ಅದನ್ನು ರದ್ದುಗೊಳಿಸಬೇಕು ಎಂದರು. ಸೆಪ್ಟೆಂಬರ್ 5ಕ್ಕೆ ಶಿಕ್ಷಕರ ದಿನಾಚರಣೆ ಇದೆ ಅದರೊಳಗಾಗಿ ಒಂದು ಸಿಹಿಸುದ್ದಿಯನ್ನು ಶಿಕ್ಷಕರಿಗೆ ಕೊಡಬೇಕು ಎಂದರು.
ಸಿಎಂ ನೇತೃತ್ವದಲ್ಲಿ ಶೀಘ್ರ ಸಭೆ, ಸಮಸ್ಯೆ ಇತ್ಯರ್ಥ: ಮಧು ಬಂಗಾರಪ್ಪ
ಪ್ರತಿಭಟನೆ ಸ್ವಾರೂಪ ಉಗ್ರರೂಪಕ್ಕೆ ಹೋಗುತ್ತಿದ್ದಂತೆ ಶಿಕ್ಷಣ ಸಚಿವ ಮಾಡಿ ಬಂಗಾರಪ್ಪ ಸ್ಥಳಕ್ಕೆ ಆಗಮಿಸಿ ಶಿಕ್ಷಕರ ಅಹವಾಲನ್ನು ಸ್ವೀಕರಿಸಿ ಮಾತನಾಡಿದರು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ, ಸಿಎಂ ಜೊತೆ ಶಿಕ್ಷರ ಸಮಸ್ಯೆ ಬಗ್ಗೆ 1ರಿಂದ 2 ಗಂಟೆ ಮಾತನಾಡಿದ್ದೇನೆ, ಶಿಕ್ಷಕರ ವರ್ಗಾವಣೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ, ನನ್ನ ಇಲಾಖೆಯಲ್ಲಿ ಶೇ40 ಗುರುಗಳು ಎಂದರೆ ಶಿಕ್ಷಕರು, ನನ್ನ ತಂದೆಯವರು ಒಳ್ಳೆ ನಿರ್ಧಾರ ತೆಗೆದುಕೊಂಡರು, ನಿಮಗೆ ಅನ್ಯಾಯ ವಾಗಿರುವುದು ನಿಜ, ನಿಮ್ಮ ಹಕ್ಕನ್ನು ಕೇಳುವುದರಲ್ಲಿ ತಪ್ಪೇನಿಲ್ಲ, 6ರಿಂದ 7 ವರ್ಷಗಳಲ್ಲಿ ಎಷ್ಟೋ ಜನ ನಿವೃತ್ತಿ ಹೊಂದಿದ್ದಾರೆ, 3 ರಿಂದ 4 ದಿನಗಳ ಒಳಗೆ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ, ಆರ್ಥಿಕವಾಗಿ ಯಾವುದೇ ಹಿಂದೇಟು ಹಾಕುವುದಿಲ್ಲ, C& R ನಿಯಮ ಮಾಡಬೇಕಾದರೆ ನಮ್ಮದು ಪಾತ್ರ ಇರುವುದಿಲ್ಲ, ನಿಮಗೆ ಸುಳ್ಳು ಹೇಳುವ ನನ್ನ ಉದ್ದೇಶವಿಲ್ಲ, ಸಮಯ ಹಾಳು ಮಾಡುವುದಿಲ್ಲ, ಇಂದೇ ಆಗುತ್ತದೆ ಎನ್ನುವ ಬಗ್ಗೆ ಹೇಳಲ್ಲ, ಮಕ್ಕಳಿಗೆ ನೀವು ವಿದ್ಯಾದಾನ ಮಾಡುತ್ತೀರಿ ಅದಕ್ಕಾಗಿ ನಿಮ್ಮ ಸಂಸ್ಥೆ ನಮಗೆ ಗೊತ್ತು, ನಿಮ್ಮ ಸಮಸ್ಯೆ ಬಗ್ಗೆ ಸಿಎಂಗೆ ನೇರವಾಗಿ ಮಾತನಾಡುತ್ತೇನೆ, ನಾನು ಇರುತ್ತೇನೆ, ಶಿಕ್ಷಕರ ದಿನಾಚರಣೆ ಕಲಗಾಗಿ ಮಾಡಲು ಪ್ರಯತ್ನ ಮಾಡುತ್ತೇನೆ, ಇಲ್ಲದಿದ್ದರೆ ಸಹಕರಿಸಿ, ನನ್ನ ಇಲಾಖೆಯಲ್ಲಿ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ, ವಿರೋಧ ಪಕ್ಷದವರು ಬೇಕಾಗುತ್ತಾರೆ, ಅವರ ಸಹಕಾರ ಕೀಳುತ್ತೇನೆ. ನಿಮಗೆ ತೃಪ್ತಿ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು. ಯಾವುದೇ ರೀತಿಯ ಯಿಂದ ಅಧಿಕಾರಿಗಳ ಕಾಂಟ್ರೋಲಿನಲ್ಲಿ ಇಲ್ಲ ಬದಲಿಗೆ ಇಲಾಖೆ ಸಿಎಂ ಅವರ ಕೈಯಲ್ಲಿ ಇದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ, ತಾಲುಕುಗಳಿಂದ 1 ಲಕ್ಷಕ್ಕೂ ಎಲ್ಲಾ ವಲಯದ ಶಿಕ್ಷಕರು ಮುಷ್ಕರದಲ್ಲಿ ಭಾಗವಹಿಸಿದರು. ಪ್ರತಿಭಟನಾ ನಿತರ ಸ್ಥಳಕ್ಕೆ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು, ಎಂಎಲ್ಸಿ ರಾಮೋಜಿ ಗೌಡ,ಸಂಘದ ರಾಜ್ಯಧ್ಯಕ್ಷರಾದ ನಾಗೇಶ್ , ಉಪಾಧ್ಯಕ್ಷರಾದ ಪದ್ಮಲತಾ, ಮಾರುತೀಶ್, ನಿರಂಜನ್ ಆರಾಧ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗಿ.