ಬೆಂಗಳೂರು: ರಾಜ್ಯದಲ್ಲಿ ಬ್ಯೂಟಿಷಿಯನ್ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಹಾಗೂ ಸರ್ವತೋಮುಖ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಬೆಂಗಳೂರು ಬ್ಯೂಟಿಶಿಯನ್ ಮಹಿಳಾ ಟ್ರಸ್ಟ್ ನ ಅಧ್ಯಕ್ಷೆ ಸವಿತಾ ನಾಗೇಶ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋವಿಂದ ಸಂಕಷ್ಟ ಕಾಲದಲ್ಲಿ ಬ್ಯೂಟಿಷನಗಳ ನೆರವಿಗೆ ಯಾರು ಸಹ ಧಾವಿಸಿಲ್ಲ, ಆ ಸಮಯದಲ್ಲಿ ಎಲ್ಲಾ ವರ್ಗದ ಸಮುದಾಯಗಳಿಗೂ ವರ್ಗದವರಿಗೂ ಸ್ಪಂದನೆಯನ್ನು ವ್ಯಕ್ತಪಡಿಸಿದರು, ಆದರೆ ನಮಗೆ ಯಾರು ಸಹ ಸಹಾಯ ಹಸ್ತ ನೀಡಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸಂಸ್ಥೆ ಪ್ರಾರಂಭವಾಗಿ ಕೆಲವೇ ತಿಂಗಳು ಆಗಿದೆ, ಸರ್ಕಾರ ಎಲ್ಲಾ ಸಂಸ್ಥೆಗಳಿಗೆ ನೆರವು ನೀಡುವ ಹಾಗೆ ನಮ್ಮ ಸಂಸ್ಥೆಗಳಿಗು ನೆರವು ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡರು, ಕಾರ್ಪೊರೇಟ್ ಬ್ಯೂಟಿಷಿಯನ್ ಸಂಸ್ಥೆಗಳ ಕಡೆ ಜನರು ಹೆಚ್ಚು ಹೊತ್ತು ಕೊಡುತ್ತಿದ್ದಾರೆ, ವಿಪರ್ಯಾಸವೆಂದರೆ ಇದೇ ನಾಡಿನಲ್ಲಿ ಹುಟ್ಟಿ ಸ್ವಂತ ಕಾಲ ಮೇಲೆ ನಿಂತುಕೊಂಡು ದುಡಿಯುತ್ತಿರುವ ಮಹಿಳೆಯರ ಸ್ವಾವಲಂಬನೆಗೆ ಯಾರು ಸಹ ಸಹಾಯ ಮಾಡಲು ಮುಂದೆ ಬರುತ್ತಿಲ್ಲ ಎಂದರು.
ಬ್ಯೂಟಿಷನ್ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಬ್ಯಾಂಕುಗಳಲ್ಲಿ ನಮಗೆ ಲೋನ್ ಕೊಡುತ್ತಿಲ್ಲ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಣಬೆಗಳಂತೆ ಪಾರ್ಲರ್ಗಳು ಹುಟ್ಟಿಕೊಂಡಿದ್ದು ಯಾವುದೇ ಸರ್ಟಿಫಿಕೇಟ್ ಇಲ್ಲದೆ ಕಾನೂನುಬಾಹಿರವಾಗಿ ಸಂಸ್ಥೆಗಳನ್ನು ನಡೆಸಿದ್ದಾರೆ, ಅವರಿಗೆ ಯಾವುದೇ ರೀತಿಯ ತರಬೇತಿಗಳು ಸಹ ಸಿಕ್ಕಿರುವುದಿಲ್ಲ, ಇಂತಹ ಸಂಸ್ಥೆಗಳ ವಿರುದ್ಧ ಹಲವು ಬಾರಿ ಬಿಜೆಪಿ ಹಾಗೂ ಸರ್ಕಾರದ ಮುಖ್ಯ ತಂದರು ಸಹ ಕಿ ಮತ್ತು ಕೊಡುತ್ತಿಲ್ಲ, ಕೇವಲ ಎರಡು ಮೂರು ತಿಂಗಳು ತರಬೇತಿ ಪಡೆದವರು ಈಗ ಪಾರ್ಲರ್ ಇಟ್ಟುಕೊಂಡು ದುಬಾರಿ ವ್ಯವಹಾರ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದರು.
ಸರ್ಕಾರದ ಮುಂದಿಟ್ಟಿರುವ ಬ್ಯೂಟಿಷನ್ ಗಳ ಬೇಡಿಕೆಗಳು:
ಬ್ಯೂಟಿಷಿಯನ್ನಾಗಿ ಕನಿಷ್ಠ 15 ವರ್ಷಕ್ಕಿಂತ ಮೇಲ್ಪಟ್ಟು ತರಬೇತಿ ಪಡೆದು ಕೆಲಸ ಮಾಡುತ್ತಿದ್ದವರಿಗೆ ಸರ್ಕಾರದ ಸಹಾಯಧನ ಕೊಡಬೇಕು.
ವಿನ್ಯಾಸಗಾರರಿಗೆ ಮಾಸಿಕ ಅನುದಾನ ನಿಗದಿಪಡಿಸಬೇಕು.
ಆನಾರೋಗ್ಯಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರಿಯಾಯಿತಿ ದರದಲ್ಲಿ ನೀಡಬೇಕು.
60 ವರ್ಷ ಮೇಲ್ಪಟ್ಟ ಬ್ಯೂಟಿಷನ್ ಗಳಿಗೆ ಪಿಂಚಣಿಯನ್ನು ನೀಡಬೇಕು.
ಅಕ್ರಮವಾಗಿ ನಡೆಸುತ್ತಿರುವ ಪವರ್ ಗಳಿಗೆ ಸರ್ಕಾರದಿಂದ ಕಡಿವಾಣ ಹಾಕಬೇಕು.
ಸರ್ಕಾರದಿಂದಲೇ ಬ್ಯೂಟಿಷನಗಳಿಗೆ ತರಬೇತಿ ನೀಡಬೇಕು ಅಂತವರಿಗೆ ಸರ್ಟಿಫಿಕೇಟ್ ಸಹ ನೀಡಿ, ಪ್ರೋತ್ಸಾಹಿಸಬೇಕಾಗಿ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಸುಜಾತ ಕಾರ್ಯದರ್ಶಿ ಪಾರ್ವತಿ ಸೇರಿದಂತೆ ಇತರರು ಉಪಸ್ಥಿರಿದರು.