ಬೆಂಗಳೂರು: ಸಾರ್ವಜನಿಜರ ಆರೋಗ್ಯ ಕಾಪಾಡುವ ಉದ್ದೇಶದಿಂದ ಬೆಂಗಳೂರು ರೋಟರಿ 3191 ಗ್ಯಾಸ್ಟೊ ಕೇಂದ್ರಕ್ಕೆ ವೆಲ್ ನೆಸ್ ಆನ್ ವ್ಹೀಲ್ಸ್ ಎಂಬ ಆರೋಗ್ಯ ವಾಹನ ಹಸ್ತಾಂತರ ಮಾಡಲಾಗುತ್ತದೆ ಎಂದು ಯೋಜನೆಯ ಸಮನ್ವಯ ಅಧಿಕಾರಿ ರಾಯ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬೆಂಗಳೂರು ರೋಟರಿ ಕಬ್ಬನ್ ಪಾರ್ಕ್3191 ಸಂಸ್ಥೆಯಿಂದ ಸುದ್ದಿಗೋಸ್ಟಿ ನಡೆಸಿ ಮಾತನಾಡಿ, ಪ್ರಸ್ತುತ ಸಾರ್ವಜನಿಕರು ಗ್ಯಾಸ್ಟೊ ಸಮಸ್ಯೆಯಿಂದ ಬಹಳ ಮಂದಿ ಬಳಲುತ್ತಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಬಡ ಜನರ ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ಜಾರಿಗೆ ತರಲಾಗಿದೆ ಎಂದರು.
ಜನರು ಗ್ಯಾಸ್ಟೊ ಸಮಸ್ಯೆಯನ್ನು ತಿರಸ್ಕಾರ ಮಾಡಿ ನೋವು ಅನುಭವಿಸುತ್ತಾರೆ, ಮಾತ್ರೆಗಳನ್ನು ತೆಗೆದುಕೊಂಡು ನೆಗ್ ಲೆಟ್ ಮಾಡುತ್ತಾರೆ. ಅದು ಹಾಗೆ ಮುಂದುವರೆದು ದೊಡ್ಡದಾಗಿ ಮುಂದೆ ಜೀವಕ್ಕೆ ಕುತ್ತು ಬರುತ್ತದೆ ಎಂಬುದು ಗೊತ್ತಿಲ್ಲವೆ? ಎಂದು ಆರೋಗ್ಯ ಕಾಪಾಡಿಕೊಳುವ ಗುಟ್ಟು ಹೇಳಿದರು.
ರೋಟರಿ 3191 ರ ಅಧ್ಯಕ್ಷೆ ರೋಟೆರಿಯನ್ ಸಂಗೀತ ಐಆರ್ ಮಾತನಾಡಿ, ಗ್ಯಾಸ್ಟೊ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ 3 ಕೋಟಿ ರೂ.ಮೌಲ್ಯದ ಆರೋಟಗ್ಯ ತೊಆಸಣ ವಾಹನವನ್ನು ಆ.10ರಂದು ಬರಂಗಳೂರಿನ ಬಿವಿ ಕಾರಂತ ರಸ್ತೆಯ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡಮಿಯಲ್ಲಿ ಗ್ಯಾಸ್ಟೊ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಜೀರ್ಣಾಂಗ ವ್ಯವಸ್ಥೆಯ ಆರೈಕೆ ಮಹತ್ವ ಬಗ್ಗೆ ಡಾ.ಯೋಗಾನಂದ ರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು. ಸಾರ್ವಜನಿಕರ ಆರೋಗ್ಯ ಕಾಳಜಿ ಗಮನದಲ್ಲಿ ಇಟ್ಟುಕೊಂಡು ಸಂಚಾರಿ ವಾಹನದ ಉಪಯೋಗ ಪಡೆದುಕೊಳ್ಳಲು ತಿಳಿಸಿದರು. 2025-26ನೇ ಸಾಲಿನ ಸಂಸ್ಥೆಯ ಮೊದಲ ಹಾಗೂ ದೊಡ್ಡ ಯೋಜನೆಯಾಗಿದೆ ಎಂದರು. ಕಟ್ಟಕಡೆಯ ವ್ಯಕ್ಯಿಗೂ ಆರೊಗ್ಯ ಸಿಗಲಿ ಎಂಬ ಉದ್ದೇಶದಿಂದ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೊಸ್ಟಿಯಲ್ಲಿ ಬಾಸ್ಕರ್ ಉಪಸ್ಥಿತರಿದ್ದರು