ನವದೆಹಲಿ: ಶಾಸನ ಸಭೆಗಳ ಸ್ವತಂತ್ರ, ಪಕ್ಷಾತೀತ ಕಾರ್ಯನಿರ್ವಹಣೆ ದೃಷ್ಠಿಯಿಂದ ಅವುಗಳಿಗೆ ಆರ್ಥಿಕ ಸ್ವಾಯತ್ತತೆ ನೀಡುವುದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಸೂಕ್ತ ಕಾನೂನಗಳಡಿ ಕಟ್ಟುನಿಟ್ಟಿನ ಕ್ರಮ ಅವಶ್ಯಕವಾಗಿದೆಯೆಂದು ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದರು.
ನವದೆಹಲಿಯ ನೂತನ ಸಂಸದ ಭವನದಲ್ಲಿ ಇಂದಿನಿಂದ ಆರಂಭಗೊಂಡ ಎರಡು ದಿನಗಳ 10ನೇ ಕಾಮನ್ವೆಲ್ತ್ ಸಂಸದೀಯ ಸಂಘದ ಭಾರತ ವಲಯದ ಸಮ್ಮೇಳನದ ಅಂಗವಾಗಿ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಶಾಸನ ಸಭೆಗಳ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ಮತ್ತು ಸ್ವಾಯತ್ತ ಸ್ಥಾನ-ಮಾನ ನೀಡುವ ಕುರಿತು ಕಾನೂನು ಮೂಲಕ ಸೂಕ್ತ ನಿರ್ಧಾರ ಕೈಗೊಂಡು ಸದನಗಳ ಗೌರವ, ಘನತೆ ಹಾಗೂ ಪ್ರಾಮುಖ್ಯತೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಲೋಕ ಸಭಾಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರತಿಯೊಂದು ಆರ್ಥಿಕ ಸಂಪನ್ಮೂಲಕ್ಕೂ ಸರಕಾರಗಳನ್ನು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಮೊರೆ ಹೋಗುವುದು ಸೂಕ್ತವಾದುದಲ್ಲ, ಹಾಗೂ ಈ ಪ್ರಕ್ರಿಯೆಯಿಂದ ಆರ್ಥಿಕ ಅನುದಾನ ಪಡೆಯಲು ಅತೀ ಹೆಚ್ಚಿನ ಸಮಯ ಹಾಗೂ ಶ್ರಮದ ಅವಶ್ಯಕತೆಯಿದ್ದು ಅಲ್ಲದೇ ಇದರಿಂದ ಶಾಸನ ಸಭೆಗಳ ಸ್ವಾಯತ್ತತೆಗೆ ಅಡ್ಡಿ ಉಂಟಾಗುತ್ತಿದೆ ಎಂದು ವಿವರಿಸಿದರು.
ಶಾಸನ ಸಭೆ ಅಧಿವೇಶನಗಳ ಕುರಿತು ಪ್ರಸ್ತಾಪಿಸಿದ ಬಸವರಾಜ ಹೊರಟ್ಟಿ, ವಾರ್ಷಿಕವಾಗಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸುವುದನ್ನು ಕಡ್ಡಾಯಗೊಳಿಸಬೇಕು. ಶಾಸನ ಸಭೆಗಳು ಜನಸಾಮಾನ್ಯರ ದೈನಂದಿನ ಬದುಕಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸುವ ಸೂಕ್ತ ವೇದಿಕೆಯಾಗಿವೆ. ಆದ್ದರಿಂದ ಪ್ರತಿ ವರ್ಷವೂ ಶಾಸನಸಭೆಗಳು ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಿ ಪ ಇಲ್, ರಾಜ್ಯಸಭೆ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್, ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್, ಕರ್ನಾಟಕದ ಉಭಯ ಸದನದ ಕಾರ್ಯದರ್ಶಿಗಳಾದ ಕೆ.ಆರ್. ಮಹಾಲಕ್ಷ್ಮೀ, ವಿಶಾಲಾಕ್ಷಿ, ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಮಹೇಶ ವಾಳ್ವೇಕರ್ ಸೇರಿದಂತೆ ವಿವಿಧ ರಾಜ್ಯಗಳ ವಿಧಾನ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.