ಬೆಂಗಳೂರು: ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೆಲಸವನ್ನು ಜಲ ಮಂಡಳಿ ಮಾಡುತ್ತಿದ್ದು, ನಗರ ವಿಸ್ತಾರವಾದಂತೆ ಕುಡಿಯುವ ನೀರಿನ ಬೇಡಿಕೆ ಹೆಚ್ಚು ಇದೆ ಎಂದು ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಸ್ ವಿಶ್ವನಾಥ್ ತಿಳಿಸಿದರು.
2023 ರಲ್ಲಿ ಅವಧಿಯಲ್ಲಿ ನಿವೃತ್ತರಾದ ಅಭಿಯಂತರರಿಗೆ ಸನ್ಮಾನ ಮಾಡಲಾಯಿತು. ನಂತರ ಮಾತನಾಡಿ, ಬೆಂಗಳೂರಿಗೆ ಕುಡಿಯುವ ನೀರಿಗೆ ಸರಭರಾಜಾಗುವ ಹೆಸರುಗ್ಗಟ್ಟ, ತಿಪ್ಪಗೊಂಡನಹಳ್ಳಿ ಯಿಂದ ನೀರು ಸರಬರಾಜು ಆಗುತ್ತಿತ್ತು, ಆದರೆ ನೀರು ಸಾಲದೆ ಇದದ್ದಕ್ಕೆ 1960 ರಲ್ಲಿ ಕಾವೇರಿಯಿಂದ ಬೆಂಗಳೂರಿಗೆ ನೀರು ತರಲು ಪ್ರಾರಂಭವಾಗಿತ್ತು.
ನಗರದಲ್ಲಿ ಅಂತರ್ಜಲದ ಬಗ್ಗೆ ಗಮನ ಇಲ್ಲ, 4 ರಿಂದ 5 ಲಕ್ಷ ಬೋರ್ವೆಲ್ ಇದೆ, ಕುಡಿಯುವ ನೀರಿಗೆ ಬಳಸಲಾಗುತ್ತಿದೆ. ಅಂತರ್ಜಲದ ನೀರನ್ನು ಪುನಃ ಬಳಸುವ ಬಗ್ಗೆ ಹೇಗೆಲ್ಲ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡಿ ತಿಳಿದುಕೊಳ್ಳಬೇಕು.
ಜನಸಂಖ್ಯೆಗೆ ಅನುಗುಣವಾಗಿ ನೀರನ್ನು ಬಳಸುವ ವಿಧಾನ ಬಳಕೆ ಮಾಡಿಕೊಳ್ಳಬೇಕು. ಜಲ ಮಂಡಳಿ, ಒಳಚರಂಡಿ ಮಂಡಳಿ, ವೇಸ್ಟ್ ವಾಟರ್ ಮ್ಯಾನೇಜ್ಮೆಂಟ್ ಇಲಾಖೆಗಳು ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದರು.
ಬೆಂಗಳೂರಿನಲ್ಲಿ ಭಯೋ ಮೂಲಕ 2 ಲಕ್ಷ ನೀರನ್ನು ತೆಗೆಯುವ ಸಂಕಲ್ಪ ಮಾಡಬೇಕು, ಮಳೆ ನೀರನ್ನು ಕೆರೆಗಳ ನೀರು ಹೇಗೆಲ ಸಮರ್ಪಕವಾಗಿ ಬಳಸಬೇಕು ಎಂಬುದರ ಬಗ್ಗೆ ಹೆಚ್ಚು ಒತ್ತು ನೀಡಿದಾಗ ಮಾತ್ರ 2ರಿಂದ 3 ವರ್ಷದಲ್ಲಿ ಭಾರತ ಮುನ್ನೆಲೆಗೆ ಹೋಗುವ ಕಾಲ ಸನ್ನಿಹಿತವಾಗಿದೆ.
ಕ್ಲಿನಿಕಲ್ ಸೈಕೋಲಾಜಿಸ್ಟ್ ಡಾ.ಪದ್ಮಾ ಕ್ಷಿ ಲೋಕೇಶ್ ಮಾತನಾಡಿ, ಎಲ್ಲರಿಗೂ ನೀರನ್ನು ಕೊಡುವ ನೀವು ಕೆಲಸದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದೀರಿ, ಅವರಿಗೆ ಒಂದಲ್ಲ ಒಂದು ಸಮಸ್ಯೆಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾಡುತ್ತಿರುತ್ತವೆ, ಮೊದಲು ಮಾನಸಿಕವಾಗಿ ಸಿದ್ಧರಿರಬೇಕು, ಮೊದಲು ನಿಮ್ಮ ಒತ್ತಡ ಕಡಿಮೆ ಮಾಡಲು ಬೇರೆಯವರ ಮಾತನಾಡುವಾಗ ಒತ್ತು ಕೊಡಿ, ನೆಮ್ಮದಿಯಿಂದ ಮಲಗಿ, ಮೊಬೈಲ್ ಬಳಕೆ ಕಡಿಮೆ ಮಾಡಿ, ಮನೆ ಮಂದಿಗೆಲ್ಲ ಸಮಯಕೊಡುವುದು,ನೀರನ್ನು ಹೆಚ್ಚಿನದಾಗಿ ಕುಡಿಯುವುದು, ಉತ್ತಮ ಆಹಾರ ಸೇವನೆ, ದೈಹಿಕ ಶ್ರಮ ಮುಖ್ಯ ಎಂದರು.
ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಡಾ.ರಾಮ ಪ್ರಸಾತ್ ಮನೋಹರ್ ಮಾತನಾಡಿ, ಬೇರೆ ದೇಶ, ರಾಜ್ಯ, ಜಿಲ್ಲೆ ಸಂಸ್ಥೆಗಳ ಬಗ್ಗೆ ಹೇಳಿ ಇಲಾಖೆಯ ಅಧಿಕಾರಿಗಳ ಸಮಸ್ಯೆಗಳನ್ನು ಬಗೆಹರಿಸಿದ್ದೀರಿ ಎಂದು ಭಾಸವಾಯಿತು. ವಿಶ್ವದ ಪ್ರತಿ ಮನೆಯಲ್ಲಿ ಸಾವು ನೋವು ಇದ್ದೇ ಇರುತ್ತದೆ, ಎಲ್ಲಾ ಕ್ಷೇತ್ರದಲ್ಲಿ ಸಮಸ್ಯೆಗಳು ಒಂದಲ್ಲ ಒಂದು ಇರುತ್ತದೆ, ಸಮಸ್ಯೆ ಎಂದು ಜೀವನ ಭಾರ ಮಾಡಿಕೊಳ್ಳುವುದು ವ್ಯರ್ಥ ಎಂದರು. ಶೇ 80 ರಷ್ಟು ಕಾಲ ಸದುಪಯೋಗ ಪಡಿಸಿಕೊಳ್ಳಿ,ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಎರಡು ಬಹಳ ಮುಖ್ಯ, ಬೆಂಗಳೂರು ಜಲಮಂಡಳಿಯಿಂದ ನಗರದಲ್ಲಿ 5ನೇ ಹಂತ ನೀರು ಸರಬರಾಜು ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚು ಆದಂತೆ ತಾಂತ್ರಿಕತೆಯನ್ನು ಹೆಚ್ಚಿನದಾಗಿ ಬಳಸಬೇಕು ಎಂದರು.
ಬೆಂಗಳೂರು ಜಲಮಂಡಳಿಯ ಅಭಿಯಂತರರು ಸಂಘದ ಅಧ್ಯಕ್ಷರು, ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಇದೇ ವೇಳೆ ತಾಂತ್ರಿಕ ದಿನಚರಿ 2024ರ ಬಿಡುಗಡೆ ಹಾಗು 2023 ರಲ್ಲಿ ಅವಧಿಯಲ್ಲಿ ನಿವೃತ್ತರಾದ ಅಭಿಯಂತರರಿಗೆ ಸನ್ಮಾನಮಾಡಲಾಯಿತು.