ರಾಮನಗರ: ನೀವು ಅಧಿಕಾರದಲ್ಲಿ ಇದ್ದೀರಿ. ಕೆಲಸ ಮಾಡಿ ಜನರಿಗೆ, ನಮ್ಮ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ? ಇನ್ನು 2-3 ವರ್ಷ ಇರಬಹುದು, ನೋಡೋಣ ಏನು ಕಡಿದು ದಬ್ಬಾಕುತ್ತೀರಿ ನೋಡೋಣ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.
ಚನ್ನಪಟ್ಟಣದ ಅಮ್ಮಳ್ಳಿದೊಡ್ಡಿ ಗ್ರಾಮದಲ್ಲಿ ಮಾಧ್ಯಮ ಗಳ ಜತೆ ಮಾತನಾಡಿದ ಅವರು; ಜಿಲ್ಲೆಯ ಜನರಿಗೆ ಸೈಟ್ ಕೊಡಲಿ ಅದನ್ನ ಸ್ವಾಗತ ಮಾಡುತ್ತೇನೆ, ಕೇವಲ ಮಾತಾಗಿ ಉಳಿಯುವುದು ಬೇಡ ಅದು. ಕಡತಗಳಲ್ಲಿ ಮಾಡಲಿ, ಮಾತಿನಂತೆ ನಡೆದುಕೊಳ್ಳಲಿ ಅವರು ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಸದೃಢವಾಗಿದೆ. ಹಾಗಾಗಿ ನಮ್ಮ ಬಗ್ಗೆ ಮಾತನಾಡದೇ ಇನ್ಯಾರನ್ನೋ ದೂರುತ್ತಾರೆ. ಯಾವ ಕಾಲಘಟ್ಟದಲ್ಲಿ ಯಾವ ನಿರ್ಧಾರ ಮಾಡ್ಬೇಕೋ ಜನರು ಮಾಡ್ತಾರೆ. ದೇವೇಗೌಡರು, ಕುಮಾರಣ್ಣ ಜಿಲ್ಲೆಗೆ ಕೆಲಸ ಮಾಡಿದ್ದಾರೆ. ಅದು ಜನರಿಗೂ ಸಹ ಗೊತ್ತಿದೆ. ಕಾಲಚಕ್ರ ಉರುಳಲಿದೆ ಇದೇ ರೀತಿ ಇರಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಇನ್ನು 3 ವರ್ಷ ಅಷ್ಟೇ.. ಕೌಂಟ್ ಮಾಡಿಕೊಳ್ಳಿ. ಇವತ್ತು ಮೇಲಿದ್ದಾರೆ, ನಾಳೆ ಕೆಳಗೆ ಬರ್ತಾರೆ. ಕಾಲಚಕ್ರ ಹೀಗೆ ಇರಲ್ಲ, ಜನರು ತೋರಿಸುತ್ತಾರೆ.ಜಿಲ್ಲೆ ಬಿಟ್ಟು ನಾವು ಎಲ್ಲೂ ಹೋಗಿಲ್ಲ. ಇಲ್ಲಿಯೇ ಇದ್ದೇವೆ, ಅದಕ್ಕೆ ಬಂದಿರೋದು ಎಂದರು.