ಬೆಂಗಳೂರು: ಮಹಿಳೆಯರಿಗೆ ಬೇರೆ ಬೇರೆ ಸಂಘಟನೆಗಳಿಂದ ಆಗುತ್ತಿರುವ ತೊಂದರೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸಲುವಾಗಿ ಪ್ರತಿಭಟನೆ ಮೂಲಕ ವ್ಯಕ್ತಪಡಿಸಿದರು.
ಮಹಿಳಾ ಹಕ್ಕು ಅರಿವು ಮೂಡಿಸುವ ಕಾರ್ಯಕ್ರಮವನ್ನು ನಗರದ ಫ್ರೀಡಂ ಪಾರ್ಕ್ ನಲ್ಲಿ ಆಯೋಜನೆ. ಹೆಣ್ಣು ಮಕ್ಕಳನ್ನೂ ಗೌರವಿಸಿ, ಹೆಣ್ಣು ಸಂತಾನ ಉಳಿಸಿ, ಸ್ವತಂತ್ರವಾಗಿ ಬದುಕಲು ಬಿಡಿ, ಹೆಣ್ಣಿಲ್ಲದೆ ಜಗತ್ತು ಶೂನ್ಯ ಎಂಬುದನ್ನು ಅರಿತು ಬಾಳಿ ಎನ್ನುವ ಧ್ಯೇಯ ವಾಕ್ಯವನ್ನು ತೋರಿಸುವ ತಮ್ಮ ಸಂಕಟವನ್ನು ಜನರಿಗೆ ಅರ್ಥ ಮಾಡಿಸಿದರು.
ಮಹಿಳೆ ಸಂಘಟನೆಯ ರಾಜ್ಯಾಧ್ಯಕೆ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಬರುತ್ತಿವೆ, ನೊಂದವರಿಗೆ ನ್ಯಾಯ ಕೊಡಿಸಲು ಹೋದಾಗ ಅವರಿಗೆ ಬೆದರಿಕೆ, ಹಲ್ಲೆ ಮಾಡುವ ಕೆಲಸವನ್ನು ಪುರುಷರು ಮಾಡುತ್ತಿದ್ದಾರೆ, ಇವರಿಗೆ ರಾಜ್ಯದ ಕಾನೂನು ಭಯವಿಲ್ಲವೇ? ಇಂತಹ ಪ್ರಕರಣಗಳು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹಲವು ಮಹಿಳಾ ಸಂಘಟನೆಗಳು ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಬೇಕಾಗುತ್ತದೆ ಎಂದರು.
ಸಮಾಜ ಸೇವಕಿ ಹಾಗೂ ಪತ್ರಕರ್ತೆ ಲೀಲಾವತಿ ಅವರು ಸಮಾಜದಲ್ಲಿ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಹೋದಾಗ ಬೀರೆ ಬೀರೆ ಸಂಘನೆಯವ್ರು, ನಮ್ಮ ಮೇಲೆ ದಬ್ಬಾಳಿಕೆ, ಹಲ್ಲೆ ನಡೆಸಿದ್ದಾರೆ, ಹಾಗಾದರೆ ಹೆಣ್ಣು ಮಕ್ಕಳು ಸ್ವಾತಂತ್ರ್ಯ ರಾಜ್ಯದಲ್ಲಿ ಬದುಕಲು ಹಕ್ಕಿಲ್ಲವೇ, ಇಂತಹ ದುರುಳರಿಗೆ ಕಾನೂನು ರಕ್ಷಣೆ ಇದೆಯಾ ಎಂಬುದು ಅನುಮಾನ ಬರುತ್ತಿದೆ.
ಮನೆಯೊಳಗೆ ನುಗ್ಗಿ ಹಕ್ಕೆ ಮಾಡುತ್ತಾರೆ ಎಂದರೆ ರಾಜ್ಯದ ಕಾನೂನು ಇವರಿಗೆ ಭಯವಿಲ್ಲ, ಬಡ ಹೆಣ್ಣು ಮಕ್ಕಳ ಬದುಕಲು ಅವಕಾದವಿಲ್ಲವೇ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಕೋವಿಡ್ ಸಮಯದಲ್ಲಿ ಜನ ಹೀಗೆಲ್ಲ ಕಷ್ಟವನ್ನು ಅನುಭವಿಸಿದ್ದರು ಎಂಬುದರ ಬಗ್ಗೆ ನಮಗೆ ಅರಿವಿದ್ದೂ ವಿವಿಧ ರೀತಿಯಲ್ಲಿ ಕಷ್ಟದಲ್ಲಿರುವ ಜನರಿಗೆ ತಮಗೆ ಕೈಲಾದ ಸಹಾಯ ಮಾಡುವ ಮೂಲಕ ಸಮಾಜಸೇವೆಯನ್ನು ಮಾಡಿದ್ದೇನೆ, ಜೀವದ ಹಂಗು ತೊರೆದು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದೇನೆ.
ನನಗೆ ಪತಿ ಅಕಾಲಿಕ ಮರಣ ಹೊಂದಿದರೆ, ಅವೆಲ್ಲವನ್ನೂ ಮೆಟ್ಟಿ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ ಸಮಾಜದಲ್ಲಿ ದುಷ್ಠ ಶಕ್ತಿಗಳಿಗೆ ಕಾನೂನು ಬಿಗಿಗೊಳಿಸಿ ಸೂಕ್ತ ಕ್ರಮ ಕೈಗೊಂಡು ಕಡಿವಾಣಹಾಕುವ ಮೂಲಕ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಬದುಕಲು ಅನುವು ಮಾಡಿಕೊಡಿ ಎಂದು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡರು.
ಮತ್ತೊಬ್ಬ ಸಮಾಜಸೇವಕಿ ಅಶ್ವಿನಿ ಅವರು ತಮಗೆ ಆಗಿರುವ ಮನದಾಳದ ನೋವನ್ನು ಹಂಚಿಕೊಂಡರು. ನಾವು ಬೇರೆ ಯಾವ ಸಹವಾಸಕ್ಕೂ ಹೋಗದ ನಮ್ಮನ್ನು ಸಮಾಜಘಾತುಕರು ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿರುವುದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಬೆದರಿಕೆ, ಹಲ್ಲೆ, ನಡೆಸುತ್ತಿರುವುದು ಯಾವ ನ್ಯಾಯ, ಅದಕ್ಕೆ ಅಧಿಕಾರ ಕೊಟ್ಟವರು ಯಾರು ಎಂಬುದು ನಮ್ಮ ಪ್ರಶ್ನೆಯಾಗಿದೆ.
ನೊಂದ ಮಹಿಳೆಯರಿಗೆ ಹಲವು ಮಹಿಳಾಪರ ಸಂಘಟನೆಗಳು ಸಾತ್ ನೀಡಿದರು, ಮಹಿಳೆಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ದ್ವನಿ ಎತ್ತಿದರು. ಪರ ಪುಷರು ಮಹಿಳೆಯರ ಮೇಲೆ ದಬ್ಬಾಳಿಕೆ, ಹಲ್ಲೆ ಮಾಡಲು ಮುಂದಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡರೂ.
ಲೀಲಾವತಿ, ಮಹೇಶ್ವರಿ, ಆಶಾ, ಶಿವಕುಮಾರ್, ಮಹಿಳಾ ಸಂಘಟನೆಗಳ ರಾಜ್ಯಾಧ್ಯಕ್ಷೆ ಜಯಂತಿ, ಸಮಾಜಸೇವಕ ಅಶ್ವಿನಿ, ಕಾಂಗ್ರೆಸ್ ಮುಖಂಡರಾದ ಉಮಾ, ಸೇರಿದಂತೆ ಮಹಿಳಾ ಹೋರಾಟಗಾರರ ಸಂಘಟನೆಯವರು ಭಾಗವಹಿಸಿದರು.