ಬೆಂಗಳೂರು: ಮಹಿಳಾ ದಿನಾಚರಣೆ ಕೇವಲ ಒಂದು ದಿನ ಅಥವಾ ಕ್ಯಾಲೆಂಡರ್ ಗೆ ಸೀಮಿತವಾಗದೆ ನಿತ್ಯ ಆಚರಿಸುವ ಕೆಲಸವಾಗಬೇಕು ಎಂದು ಕರ್ನಾಟಿಕ್ ಶಾಸ್ತ್ರಿಯ ಸಂಗೀತದ ಪ್ರಸಿದ್ಧ ಗಾಯಕಿ ಮಾನಸಿ ಪ್ರಸಾದ್ ತಿಳಿಸಿದರು.
ಬೆಂಗಳೂರಿನ ಗಾಂಧಿನಗರದ ಗುಂಡೂರಾವ್ ಆಟದ ಮೈದಾನದಲ್ಲಿ ಯೂನಿಯನ್ ಬ್ಯಾಂಕ್ ವಲಯ ಕಾರ್ಯಾಲಯದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಇದರಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಿಂದೂಸ್ಥಾನಿ ಗಾಯಕಿ ಮಾನಸಿ ಪ್ರಸಾದ್ ಆಗಮಿಸಿ ಮಾತನಾಡಿ, ಮಹಿಳೆಯರು ಯಾವುದಾದರು ಒಂದು ಮಾಧ್ಯಮದ ಮೂಲಕವೂ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಬಹುದು, ಅದರಲ್ಲಿ ಯಾವುದೇ ಅಂಜಿಕೆ ಬೇಡ, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ, ಮೀರಭಾಯಿ, ಅಕ್ಕಮಹಾದೇವಿ, ಸಾವಿತ್ರಿ ಬಾ ಪುಲೆ, ಮೈತ್ರಿ, ಗಾರ್ಗಿ, ಸೇರಿದಂತೆ ಹಲವು ಮಹಿಳೆಯರ ಸಾಧನೆಗಳ ಬಗ್ಗೆ ಪ್ರಸ್ತಾಪಪಡಿಸಿದರು. ಮಹಿಳೆಯರು ಯಾವೆಲ್ಲಾ ಕ್ಷೇತ್ರದಲ್ಲಿ ಹೇಗೆಲ್ಲ ಸಾಧನೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿಸಿದರು.
ಅಲ್ಲದೆ ಪ್ರಸಾದ್ ಅವರು ಕಾರ್ಯಕ್ರಮದಲ್ಲಿ ತಮ್ಮ ತಂದೆಯನ್ನು ನೆನೆದು ಭಾವುಕರಾದರು, ತಂದೆ,ತಾಯಿ ಮಾಡಿದ ಕಾರ್ಯವನ್ನು ನೆನಸಿಕೊಂಡರು. ಮಹಿಳೆಯರೆಲ್ಲರೂ ಧೈರ್ಯ, ಶಕ್ತಿಯುತವಾಗಿ ಪ್ರತಿಯೊಂದನ್ನೂ ಎದುರಿಸಬೇಕು,
ಮಹಿಳಾ ದಿನಾಚರಣೆ ಕೇವಲ ಒಂದು ದಿನ ಅಥವಾ ಕ್ಯಾಲೆಂಡರ್ ಗೆ ಸೀಮಿತವಾಗದೆ ನಿತ್ಯ ಆಚರಿಸುವ ದಿನವಾಗಬೇಕು, ಮಹಿಳೆಯ ಜೊತೆಗೆ ಪುರುಷರು ಜೊತೆ ಜೊತೆಯಾಗಿ ಕೈಜೋಡಿಸ ಬೇಕು ಆಗಮಾತ್ರ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಮತ್ತೆ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಎಲ್ಲಾ ಕ್ಷೆತ್ರದಲ್ಲಿ ಮಹಿಳೆಯರು ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬೇಕು ಎಂದರು.
ಬೆಂಗಳೂರು ಉತ್ತರ ವಲಯದ ಮುಖ್ಯಸ್ಥ ರಾಜೇಂದ್ರ ಕುಮಾರ್ ಮಾತನಾಡಿ, ಅಮೆರಿಕದಲ್ಲಿ ಮಹಿಳೆಯರೆಲ್ಲ 1980ರಲ್ಲಿ ಬೃಹತ್ ಧರಣಿ ಮಾಡಿದ ಹಿನ್ನೆಲೆ ಮಹಿಳಾ ದಿನಾಚರಣೆ ಆಚರಿಸಲಾಯಿತು, ಅಂದಿನಿಂದ ಇಂದಿನ ತನಕ ಪರಂಪರೆಯಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿಕೊಂಡು, ರಾಜ್ಯ ದೇಶದೆಲ್ಲೆಡೆ ಹಬ್ಬವಾಗಿ ಆಚರಿಸಲಾಗುತ್ತದೆ. ಯೂನಿಯನ್ ಬ್ಯಾಂಕ್ ನಗರದಲ್ಲಿ 680 ಶಾಖೆಗಳಿವೆ, 5 ಸಾವಿರ ಉದ್ಯೋಗಿಗಳು ಇದ್ದಾರೆ, ಅದರಲ್ಲಿ ಹೆಚ್ಚಿನದಾಗಿ ಮಹಿಳೆಯರೇ ಇರುವುದು ಮತ್ತೊಂದು ವಿಶೇಷವಾಗಿದೆ ಎಂದರು. ಮಹಿಳೆಯರನ್ನು ಗುರುತಿಸುವ ಸಲುವಾಗಿ ಮಹಿಳೆಯರಿಗಾಗಿಯೇ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಿಕ್ ಶಾಸ್ತ್ರಿಯ ಸಂಗೀತದ ಪ್ರಸಿದ್ಧ ಗಾಯಕಿ ಮಾನಸಿ ಪ್ರಸಾದ್ ಭಾಗಿ, ಯೂನಿಯನ್ ಬ್ಯಾಂಕ್ ನ ಡಿಜಿಟಲ್ ವಿಭಾಗದ ಮುಖ್ಯಸ್ಥೆ cmd ವಿಶ್ವ ಲತಾ, ಬೆಂಗಳೂರು ವಲಯ ಮುಖ್ಯಸ್ಥ ನವನೀತ್ ಕುಮಾರ್, ಡಿಸಿಎಂ ರವೀಶ್ ನಾಯಕ, ಬ್ಯಾಂಕ್ ನ ಬೆಂಗಳೂರು ಉತ್ತರ ವಲಯದ ಮುಖ್ಯಸ್ಥ ರಾಜೇಂದ್ರ ಕುಮಾರ್, ಜೊತೆಗೆ ಯೂನಿಯನ್ ಬ್ಯಾಂಕ್ ನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ನಲ್ಲಿ ಬೆಂಗಳೂರಿನ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ವಿವಿಧ ಬ್ರಾಂಚ್ ನಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 100ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.