ಬೆಂಗಳೂರು: ಚೆನ್ನಗಿರಿ ತಾಲ್ಲೂಕನ್ನ ಮಾದರಿ ಕ್ಷೇತ್ರವನ್ನಾಗಿ ಮಾಡಲು, ಮಾಜಿ ಸಿಎಂ ಜೆ ಹೆಚ್ ಪಟೇಲ್ ರೀತಿ ಆಡಳಿತ ಮಾಡಲು ಈಗಿನವರು ಸದಾ ಸಿದ್ಧರಾಗಿರಬೇಕು ಎಂದು ಗುರುಬಸವ ಸ್ವಾಮಿಗಳು ಜನರಿಗೆ ಕಿವಿ ಮಾತು ಹೇಳಿದರು.
ಚೆನ್ನಗಿರಿ ತಾಲ್ಲೂಕಿನ ಬೆಂಗಳೂರು ನಿವಾಸಿಗಳು ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಗುರುಬಸವ ಸ್ವಾಮಿಗಳು ಮಾತನಾಡಿ,ರಾಜಕೀಯ ಶಕ್ತಿ ಪಡೆದಿರುವವರು ಜೆ ಹೆಚ್ ಪಟೇಲ್, ಚೆನ್ನಗಿರಿ ತಾಲ್ಲೂಕನ್ನು ಹಿಮ್ಮಡಿ ಗೊಳಿಸುವುದು, ಅಲ್ಲದೆ ಸಾಂಸ್ಕೃತಿಕವಾಗಿ ತಾಲೂಕು ಹೆಚ್ಚು ಪ್ರಸಿದ್ಧಿ ಪಡೆದಿದೆ, ಅದನ್ನು ಉಳಿಸಿಕೊಂಡು ಹೋಗಬೇಕು, ಸಂಘದಿಂದ ಸಂಘರ್ಷ ನಿರ್ಮಾಣ ವಾಗಬಾರದು, ಎಲ್ಲಿ ನಿಧಿ ಇರುತ್ತದೆಯೋ ಅಲ್ಲಿ ವಿಧಿ ಇರುತ್ತದೆ ಎಂದರು.
ಸಂಘವು ಬೇಕಾಗಿರುವುದನ್ನು ಹಿಡಿಯಬೇಕು ಬೇಡವಾದದ್ದನ್ನು ಬಿಡಬೇಕು, ಸಂಘದಲ್ಲಿ ಯಾವ ವೈಮನಸ್ಸು ಇರಬಾರದು, ಜಾತಿ ವಿಷ ಬೀಜ ಬಿತ್ತಬಾರದು ಮತ್ತು ಇರಬಾರದು, ಸಂಘದಲ್ಲಿ ಸೇವಾ ಮನೋಭಾವನೆ ಇರಬೇಕು, ಆದರೆ ಸ್ವಾರ್ಥ ಮನೋಭಾವ ಇದ್ದಾಗ ಸಂಘ ಬೆಳೆಯಲು ಸಾಧ್ಯವಾಗಲ್ಲ ಎಂದು ಸಂಘದ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಸವರಾಜ ಶಿವಗಂಗಾ ಮಾತನಾಡಿ, ಸಂಘ ಸೇವಾ ಮನೋಭಾವದಿಂದ ಮುನ್ನೆಡಿಸಿಕೊಂಡು ಹೋಗಬೇಕು, ಮಾಜಿ ಸಿಎಂ ಜೆ ಹೆಕ್ ಪಟೀಲ್ ತರ ಹೆಸರು ಮಾಡಬೇಕು, ಮಕ್ಕಳಿಗೆ ಉದ್ಯೋಗ ನೀಡುವ, ಕೆಲಸ ಕಾರ್ಯಗಳಿಗೆ , ರೈತರಿಗೆ ಹಾಗುವ ತೊಂದರೆ, ಜನಸಾಮಾನ್ಯರಿಗೆ ಆಗುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ.
ಚೆನ್ನಗಿರಿ ತಾಲೂಕಿನ ಹಳ್ಳಿಯಲ್ಲಿ ಹುಟ್ಟಿ ನಾನು ಕಷ್ಟಪಟ್ಟು ಪ್ರಯತ್ನದ ಫಲವಾಗಿ ನನ್ನನು ಶಾಸಕರನನ್ನಾಗಿ ಮಾಡಿರುವ ನಿಮ್ಮೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಚೆನ್ನಗಿರಿ ನಿವಾಸಿಗಳು ಬೆಂಗಳೂರಿನಲ್ಲಿ ನೆಲೆಸಿರುವರು ಸೇರಿಕೊಂಡು ನೂತನ ಸಂಘ ಮಾಡಿಕೊಂಡು ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ ಅವರಿಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು.
ಮಾಜಿ ಶಾಸಕರಾದ ಮಹಿಮಾ ಜೇ ಪಾಟೀಲ್ ಮಾತನಾಡಿ, ಕೇವಲ ಚೆನ್ನಗಿರಿ ಗಷ್ಟೇ ಅಲ್ಲದೆ ಚೆನ್ನಗಿರಿ ಒಗ್ಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋಗುವುದು ಬಹಳ ಮುಖ್ಯ, ಸಮಾಜವಾದದ ಆಲೋಚನೆ ಮಾಡಿಕೊಂಡು, ಅಭಿವೃದ್ದಿ ಮಾಡಿಕೊಂಡು ಹೋಗುವುದು ಮುಖ್ಯ, ಆಸ್ಪತ್ರೆ, ಪೊಲೀಸ್ ಠಾಣೆ, ಹೆಚ್ಚಾದರೆ ಅಭಿವೃದ್ಧಿಯಲ್ಲ, ಕಡಿಮೆ ಮಾಡಿಕೊಂಡು ತಾಲೂಕನ್ನು ಅಭಿವೃದ್ಧಿಯತ್ತ ಬೆಳೆಸಬೇಕು ಎಂದರು. ನಮ್ಮ ನಮ್ಮ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ತಾಲೂಕನ್ನು ಅಭಿವೃದ್ದಿ ಮಾಡಬೇಕು, ಅದನ್ನು ಬೆಂಗಳೂರಿನಲ್ಲಿ ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ಬಹಳ ಮುಖ್ಯ ಎಂದರು.
ಎಲ್ಲರನ್ನೂ ಒಳಗೊಂಡಂತೆ ಆಲೋಚನೆ ಮಾಡಿಕೊಂಡು ಚೆನ್ನಗಿರಿ ಅಭಿವೃದ್ದಿ, ಬೆಂಗಳೂರು, ಕರ್ನಾಟಕವನ್ನು ಬೆಳೆಸಬೇಕು, ಶಾಸಕರು ಎಂದರೆ ಅವರಿಗೆ ಜವಾಬ್ದಾರಿ ಇರುತ್ತದೆ, ಅದನ್ನು ಜನರು ಉಪಯೋಗಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಚೆನ್ನಗಿರಿ ತಾಲಿಕಿನವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾದಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಇನ್ನು ಇದೇ ವೇಳೆ ಸಂಘದ ನೂತನ ಲಾಂಛನ ಬಿಡುಗಡೆ, ಸಹಾಯವಾಣಿ ಬಿಡುಗಡೆ, ವೆಬ್ ಸೈಟ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಟರಾಜ, ಆರ್ ಎಂ ರವಿ, ಹರೀಶ್ ನಾಯಕ್,
ಮಾಯಕೊಂಡ ಕ್ಷೇತ್ರದ ಶಾಸಕ,ಕೆ ಎಸ್ ಬಸವರಾಜ್, ಸಂಘದ ಪ್ರದಾನ ಕಾರ್ಯದರ್ಶಿ ಚಿನ್ಮಯಾನಂದ, ಮಹಿಮಾ ಜೇ ಪಾತೀಲ, ಮಾಜಿ ಶಾಸಕರು,ಹರೀಶ್ ನಾಯಕ್, ಸಂಘದ ಅಧ್ಯಕ್ಷ
ವಡ್ನಾಲ್ ರಾಜಣ್ಣ, ಮೆಹಬೂಬ್ ,ಶಶಾಂಕ್ ಪಾಟೀಲ್, ಉಪಾಧ್ಯಕ್ಷ, ಸೇರಿದಂತೆ ಅನೇಕರು, ತಾಲೂಕಿನ ಜನರು ಉಪಸ್ಥಿತರಿದ್ದರು.