ಬೆಂಗಳೂರು: ಅಂಕುರ್ ಭಟ್ಟಾಚಾರ್ಯ ಮತ್ತು ಯಶಸ್ವಿನಿ ಘೋರ್ಪಡೆ ಅವರು UTT ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ ನ ಪುರುಷರ ಹಾಗೂ ಮಹಿಳೆಯರ ವಿಭಾಗ ಸಿಂಗಲ್ಸ್ ನಲ್ಲಿ ಕಿರೀಟ ಮೂಡಿಗೇರಿಸಿಕೊಂಡರು.
ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ 4ನೇ ದಿನವಾಗಿದ್ದು, 2ನೇ
ಶ್ರೇಯಾಂಕದ ಅಂಕುರ್ ಫೈನಲ್ ಹಣಾಹಣಿಯಲ್ಲಿ 11-9,16-6,11-5,11-9 ರಿಂದ 4ನೇ ಶ್ರೇಯಾಂಕದಮಾನವ ಠಕ್ಕರ್ ಅವರನ್ನು ಮಣಿಸಿದರು.
ಪೆಟ್ರೊಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ತಂಡದ ಅಂಕುರ್ ಕಳೆದ ಆವೃತ್ತಿಯಲ್ಲೂ ಫೈನಲ್ ಪ್ರವೇಶಿಸಿದ್ದರು. ಈ ಬಾರಿ ತಮ್ಮದೇ ತಂಡದ (ಪಿಎಸ್ಪಿಬಿ) ಒಲಿಂಪಿಯನ್ ಮಾನವ್ ಅವರನ್ನು ನೇರ ಗೇಮ್ಗಳಿಂದ ಸುಲಭವಾಗಿ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಸೆಮಿಫೈನಲ್ನಲ್ಲಿ ಅಂಕುರ್ 11-6, 11-9, 11-8, 11-8ರಿಂದ ರೈಲ್ವೆ ಕ್ರೀಡಾ ಅಭಿವೃದ್ಧಿ ಮಂಡಳಿಯ (ಆರ್ಎಸ್ಪಿಬಿ) ಆಕಾಶ್ ಪಾಲ್ ಅವರನ್ನು ಮಣಿಸಿದರೆ, ಠಕ್ಕರ್ 11-7805 ,11-4 ,11-8 ,11-9 ಅಮಲರಾಜ್ ಅವರನ್ನು ಸೋಲಿಸಿದರು.
ಹಾಲಿ ಚಾಂಪಿಯನ್ ಆಗಿರುವ ಹಾಗು ಅಗ್ರ ಶ್ರೇಯಾಂಕದ ಹಮೀತ್ ದೇಸಾಯಿ (ಪಿಎಸ್ಪಿಬಿ) ಕ್ವಾರ್ಟರ್ ಫೈನಲ್ ಹಂತದಲ್ಲಿ ಹೊರಬಿದ್ದರು. ಅವರು 1-3 ಗೇಮ್ ಗಳಿಂದ ಆ್ಯಂಟನಿ ಅವರಿಗೆ ಶರಣಾದರು. ಮೂರನೇ ಶ್ರೇಯಾಂಕದ ಪಯಸ್ ಜೈನ್ (ದೆಹಲಿ) 1-3ರಿಂದ ಆಕಾಶ್ ಅವರಿಗೆ ಎಂಟರ ಘಟ್ಟದ ಪಂದ್ಯದಲ್ಲಿ ಮಣಿದರು.
ಚಿತ್ರದಲ್ಲಿರುವ ಮೂವರು ಸಿಂಗಲ್ಸ್ ನಲ್ಲಿ ಮೊದಲ ಪ್ರಶಸ್ತಿ ಪಡೆದವರು:
ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ತಂಡದ ಸ್ವಸ್ತಿಕಾ ಘೋಷ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಯಶಸ್ವಿನಿ 11-13, 11-6, 6-11, 11-5, 11-9, 11-6ರಿಂದ ರೀತ್ ರಿಶ್ಯಾ (ಪಿಎಸ್ಪಿಬಿ) ಅವರನ್ನು; ಸ್ವಸ್ತಿಕಾ 11-5, 11-6, 11-5, 11-7ರಿಂದ ನಿಖತ್ ಬಾನು (ಆರ್ಬಿಐ) ಅವರನ್ನು ಸೋಲಿಸಿದರು.
ಅಂಕುರ್, ತನಿಶಾಗೆ ಯೂತ್ ಪ್ರಶಸ್ತಿ ಗರಿ: 19 ವರ್ಷದೊಳಗಿನವರ ಬಾಲಕರ ಟೇಬಲ್ ಟೆನ್ನಿಸ್ ನ ಸಿಂಗಲ್ಸ್ ಪ್ರಶಸ್ತಿಯನ್ನೂ ಅಂಕುರ್ ಭಟ್ಟಾಚಾರ್ಯ ಗೆದ್ದರು. ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಮಹಾರಾಷ್ಟ್ರದ ತನೀಶಾ ಕೋಟೆಚಾ ಅವರು ತಮ್ಮದಾಗಿಸಿಕೊಂಡರು.
11-6, 11-2, 13-11, 11-4005 ತಮಿಳುನಾಡಿನ ಪಿ.ಬಿ. ಅಭಿನಂದ್ ಅವರನ್ನು ಮಣಿಸಿದರು. ໖ 11-6, 10-12, 12-14, 11-9, 11-2, 9-11, 11-9ರಿಂದ ತಮ್ಮದೇ ರಾಜ್ಯದ ಪೃಥಾ ವರ್ತಿಕರ್ ಅವರನ್ನು ಸೋಲಿಸಿದರು.
ಪುರುಷರ ಹಾಗೂ ಮಹಿಳೆಯರ ಫೈನಲ್ಸ್ ಸಿಂಗಲ್ಸ್ ಪಂದ್ಯಾವಳಿಯ ರೋಚಕವಾಗಿ ನಡೆಯಿತು.ಅದರಲ್ಲಿ ಯಶಸ್ವಿನಿ, ತನೀಶಾ ಟ್ರೋಪಿಗೆ ಚುಂಬನ ಮಾಡಿದರು.
ಈ ವೇಳೆ ಟೇಬಲ್ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಪಂದ್ಯದಲ್ಲಿ ಗೆದ್ದವರಿಗೆ ಟ್ರೂಪಿ ನೀಡಿ ಮಾತನಾಡಿ, ಪಂದ್ಯಾವಳಿಯ 5 ದಿನಗಳ ಕಾಲ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈಗಾಗಲೇ ಪುರುಷ ಹಾಗು ಮಹಿಳೆಯರ ಸಿಂಗಲ್ಸ್ ನಲ್ಲಿ ಪಾರುಪತ್ಯ ಮಾಡಿದ್ದಾರೆ, ಅದರಲ್ಲಿ ಕರ್ನಾಟಕದ ಯಶಸ್ವಿನಿ ಮೊದಲ ಸ್ಥಾನ ಪಡೆದಿದ್ದಾರೆ. ಹೀಗೆ ಟೇಬಲ್ ಟೆನ್ನಿಸ್ ಗೆ ಹೆಚ್ಚು ಮಹತ್ವವನ್ನು ಕೊಡುವ ಕೆಲಸವಾಗಬೇಕು ಎಂದರು. ಕ್ರೀಡಾಳುಗಳಿಗೆ ಬೇಕಾಗುವ ಸಲಕರಣೆ, ಮೂಲಭೂತ ಸೌಕರ್ಯ ನೀಡಿದಾಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೊರಹುಮ್ಮಲು ಸಹಕಾರಿಯಾಗುತ್ತದೆ ಎಂದರು. 1700ಕ್ಕಿಂತ ಹೆಚ್ಚು ಕ್ರೀಡಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಕೆಲಸ ಮಾಡಲಾಗುತ್ತದೆ ಎಂದರು.