LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೇ.70ರಷ್ಟು ಭಾರತೀಯರು ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ: ವರದಿಯಲ್ಲಿ ಬಹಿರಂಗ

ಬೆಂಗಳೂರು: ಆಶೀರ್ವಾದ್‌ ಹ್ಯಾಪಿ ಟಮ್ಮಿ ವೇದಿಕೆಯು ವಿಶ್ವ ಜೀರ್ಣಕ್ರಿಯೆ ದಿನದ ಪ್ರಯುಕ್ತ ಜೀರ್ಣಕ್ರಿಯೆ ಆರೋಗ್ಯದ ಕುರಿತು ಸಮೀಕ್ಷೆ ನಡೆಸಿದ್ದು, ಶೇ.70ರಷ್ಟು ಜನರು ದೈನಂದಿನ ಆಹಾರದಲ್ಲಿ ಫೈಬರ್‌ ಕೊರತೆ ಎದುರಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಐಟಿಸಿ ಫುಡ್ಸ್ – ಸ್ಟೇಪಲ್ಸ್ ಅಂಡ್ ಅಡ್ಜಸೆನ್ಸೀಸ್ ಚೀಫ್ ಆಪರೇಟಿಂಗ್ ಆಫೀಸರ್ ಅನುಜ್ ರುಸ್ತಗಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಸಾಕಷ್ಟು ಜನರು ಸೂಕ್ತ ಆಹಾರವನ್ನೇ ಸೇವಿಸುತ್ತಿಲ್ಲ. ನಾವು ನಡೆಸಿದ ಆಶೀರ್ವಾದ್ ಹ್ಯಾಪಿ ಟಮ್ಮಿ ವೇದಿಕೆಯಡಿ 8 ಲಕ್ಷಕ್ಕಿಂತ ಹೆಚ್ಚಿನ ಜನರ ಸಮೀಕ್ಷೆ ನಡೆಸಿದ್ದೇವೆ. ಈ ವರದಿಯ ಪ್ರಕಾರ 1.27 ಲಕ್ಷಕ್ಕಿಂತ ಹೆಚ್ಚು ಜನರು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಇನ್ನು, ಶೇ.70 ರಷ್ಟು ಜನರು ಸೇವಿಸುವ ಆಹಾರದಲ್ಲಿ ನಾರಿನಾಂಶವೇ ಇರುವುದಿಲ್ಲ. ಪ್ರಮುಖವಾಗಿ ಈ ಕೊರತೆಯು ಮಹಿಳೆಯರಲ್ಲಿ ಜಾಸ್ತಿಯಿದೆ. ಶೇ. 74ರಷ್ಟು ಮಹಿಳೆಯರು ದೇಹಕ್ಕೆ ಬೇಕಾಗುವಷ್ಟು ನಾರಿನಂಶ ಸೇವಿಸುತ್ತಿಲ್ಲ. ಕಡಿಮೆ ನಾರಿನಂಶ ಸೇವಿಸುತ್ತಿರುವುದರಿಂದ ಮಲಬದ್ಧತೆಯಂತಹ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ, ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಗಳು ತಿಳಿಸಿವೆ.

ಇದಷ್ಟೇ ಅಲ್ಲದೆ, 78% ಜನರಿಗೆ ದಿನನಿತ್ಯ ಎಷ್ಟು ನಾರಿನಂಶ ಸೇವಿಸಬೇಕೆಂಬ ಅರಿವೇ ಇಲ್ಲ, ಶೇ. 74ರಷ್ಟು ಜನರು ನಿತ್ಯ ಬಹುಧಾನ್ಯಗಳನ್ನು ಸೇವಿಸುತ್ತಿಲ್ಲ. ಶೇ.69ರಷ್ಟು ಜನರು ದಿನವೊಂದಕ್ಕೆ 8 ಲೋಟಗಳಿಗಿಂತಲೂ ಕಡಿಮೆ ನೀರು ಕುಡಿಯುತ್ತಿದ್ದಾರೆ, ಶೇ. 46ರಷ್ಟು ಜನರು ದಿನಕ್ಕೆ 6 ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುತ್ತಿದ್ದಾರೆ. ಶೇ. 60ರಷ್ಟು ಜನರು ನಿತ್ಯ ದೈಹಿಕ ಚಟುವಟಿಕೆಗಳಲ್ಲಿ ಕೊರತೆ ಅನುಭವಿಸುತ್ತಿದ್ದಾರೆ ಎಂಬುದು ವರದಿಯಲ್ಲಿ ತಿಳಿದುಬಂದಿದೆ ಎಂದು ವಿವರಿಸಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನತಮಿಳುನಾಡಿಗೆ ಬಿಡುವಷ್ಟು  ಕಾವೇರಿ‌ ನೀರಿಲ್ಲ: ಎಂ ಬಿ ಪಾಟೀಲಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲಬೆಳ್ಳಂದೂರು ಎಸ್‌ಟಿಪಿಯ ಸಮಗ್ರ ತನಿಖೆ ಮುಂದುವರಿಕೆ; ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಿ  2 ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ ಸರ್ಕಾರಿ ಶಿಕ್ಷಣ ಸಂಸ್ಥೆಯ ಜಾಗ ಕಬಳಿಸಲು ಕೇಂದ್ರ ಸಚಿವರ ಉನ್ನಾರಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭ