LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಸಚಿವ ಸ್ಥಾನಕ್ಕೆ ಒತ್ತಾಯ

ಕಾಂಗ್ರೆಸ್ನ ವಿವಿಧ ಉಪಯೋಗಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದು ಸಕ್ರಿಯ ರಾಜಕಾರಣಿಯಾಗಿ ದಶಕಗಳ ಕಾಲ ಪಕ್ಷ ಸಂಘಟನೆ ಮಾಡಲಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಎಲ್ಲಾ ವಲಯದಲ್ಲೂ ಸಾಕಷ್ಟು ಅಭಿವೃದ್ಧಿಗಳನ್ನು ವಿಜಯಾನಂದ ಕಾಶಪ್ಪ ಮಾಡಿದ್ದಾರೆ, ಅವರಿಗೆ ಸಚಿವ ಸ್ಥಾನ ಕೊಡದೇ ಹೋದರೆ ಹುನಗುಂದ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ರಾಜೀನಾಮೆದ ಎಚ್ಚರಿಕೆ‌

ಬೆಂಗಳೂರು:  ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹುನಗುಂದ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.news_1780419164_2_812.webp
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಇಲಕಲ್, ಹುನಗುಂದ ಮತಕ್ಷೇತ್ರ, ಬಾಗಲಕೋಟೆ ಜಿಲ್ಲೆ  ವತಿಯಿಂದ ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯಾನಂದ್ ಎಸ್.ಕಾಶಪ್ಪನವರ್ ನೂತನ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು.
ಅಬ್ದುಲ್ ರಜಾಕ್ ತಟಗಾರರವರು ಮಾತನಾಡಿ, ವಿಜಯಾನಂದ್ ಎಸ್.ಕಾಶಪ್ಪನವರ್ ಅವರ ಕುಟುಂಬ ಕಳೆದ 50ವರ್ಷಗಳಿಂದ ಮನೆತನ  ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕುಟುಂಬ ಎಂಬ ಕೀರ್ತಿ, ಹೆಗ್ಗಳಿಕೆ ಪಡೆದಿದೆ. ಯುವ ನಾಯಕ, ಕ್ರಿಯಾಶೀಲರಾಗಿರುವ ಮತ್ತು ಕಾಂಗ್ರೆಸ್ ಪಕ್ಷ ಉತ್ತಮ ಸಂಘಟಕರಾಗಿರುವ ಶಾಸಕರಾದ ವಿಜಯಾನಂದ್ ಕಾಶಪ್ಪನವರ್ ರವರನ್ನು ನೂತನ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು.
ಕಾಶಪ್ಪನವರ ಕೊಡುಗೆ:
ಕೃಷ್ಣ ನದೀ ನೀರು ಯೋಜನೆ ಜಾರಿಗೆ ತಂದಿದ್ದು , 60ಸಾವಿರ ಎಕರೆ ಇಸ್ರೇಲ್ ಮಾದರಿ ನೀರಾವರಿ ಯೋಜನೆ,  ಶಿಕ್ಷಣಕ್ಕೆ ಒತ್ತು ಸ್ಮಾರ್ಟ್ ಕ್ಲಾಸ್ ಬೋರ್ಡ್ ಒದಗಿಸಿದರು. ಸರ್ಕಾರಿ ಶಾಲೆಗಳನ್ನು ಉನ್ನತಿಕರಿಸಿದರು.
ಹುನಗಂದ್-ಇಲಕಲ್ ಅವಳಿ ನಗರದಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣ, ಸಮುದಾಯ ಭವನ ಹಾಗೂ ಉತ್ತಮ ರಸ್ತೆಗಳ ನಿರ್ಮಾಣ, ಮರೋಳ್ ನಲ್ಲಿ ಏತಾ ನೀರಾವರಿ, ನಂದವಡಗಿ ಏತ ನೀರಾವರಿ, ಹನಿ ನೀರಾವರಿಗೆ ಒತ್ತು ನೀಡಿ ರೈತರ ಬಾಳಿಗೆ ಬೆಳಕಾದರು.news_1780419163_0_190.webp
ತಾಲೂಕುನಲ್ಲಿ ಕ್ರೀಡೆಗಳಿಗೆ ಒತ್ತು ನೀಡಿ ಒಳಾಂಗಣ, ಹೊರಂಗಣ ಮತ್ತು ಈಜುಕೊಳ ನಿರ್ಮಾಣ ಮಾಡಿದ್ದಾರೆ. 2339 ನಿವೇಶನಗಳನ್ನು ವಸತಿ ರಹಿತರಿಗೆ  ಮತ್ತು ವಸತಿ ಹಕ್ಕು ಪತ್ರ ನೀಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ 60ಕ್ಕೂ ಹೆಚ್ಚು ಜಾತಿ ಸಮುದಾಯದವರು ಇದ್ದಾರೆ ಎಲ್ಲರನ್ನ ಸಹೋದರತ್ವದಲ್ಲಿ ಬಾಳುತ್ತಿದ್ದೇವೆ.
ಶಾಸಕರಾಗಿ ವಿಜಯಾನಂದ್ ಎಸ್.ಕಾಶಪ್ಪನವರ್ ರವರು ಯುವ ಕಾಂಗ್ರೆಸ್ , ಜಿಲ್ಲಾ ಕಾಂಗ್ರೆಸ್, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಯಲ್ಲಿ ಉತ್ತಮ ಸಂಘಟಕರಾಗಿ ಶ್ರಮಿಸಿದ್ದಾರೆ. 
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆರವರು, ಕಾಂಗ್ರೆಸ್ ಪಕ್ಷದ ಸೋನಿಯಗಾಂಧಿರವರು, ರಾಹುಲ್ ಗಾಂಧಿರವರು, ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್ ರವರಲ್ಲಿ ನಮ್ಮ ಮನವಿ ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಜನಪ್ರಿಯ ಶಾಸಕರಾದ ವಿಜಯಾನಂದ್ ಎಸ್.ಕಾಶಪ್ಪನವರ್ ರವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಇದ್ದರಿಂದ ಮುಂಬರುವ ವಿಧಾನಸಭಾ ಕ್ಷೇತ್ರದಲ್ಲಿ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ.
ನಿಷ್ಟಾವಂತ ಕಾರ್ಯಕರ್ತ, ಶಾಸಕರಾದ ವಿಜಯಾನಂದ್ ಕಾಶಪ್ಪನವರ್ ರವರಿಗೆ ಮಂತ್ರಿ ಸ್ಥಾನ ಕೊಡದೇ ಹೋದರೆ ಹುನಗುಂದ ಮತಕ್ಷೇತ್ರ ಎಲ್ಲ ವಿಭಾಗದ ಅಧ್ಯಕ್ಷರು, ಪದಾಧಿಕಾರಿಗಳು ರಾಜೀನಾಮೆ ನೀಡಲಾಗುವುದು ಎಂದು ಹೇಳಿದರು.
ಇಲಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ತಟಗಾರ , ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಿಶ್ವನಾಥಪಾಟೀಲ್, ಮಲ್ಲಣ್ಣ ಎಲೆಗಾರ , ಅಮರೇಶ್ ನಾಗೂರ್, , ಮುತ್ತಣ್ಣ ಕಲಗುಡಿ, ಮಹಾಂತೇಶ್ ನರಗುಂದ, ರವಿ ಹುಚ್ಚನೂರು, ಶಾಂತಣ್ಣರಾಘವೇಂದ್ರ ಧಾರವಾಡ, ಮೌನೇಶ್ ಬಂಡಿವಡ್ಡರ್, ನೀಲಪ್ಪ ಅಸೋಲಿ, ವಿಠ್ಠಲ್ ಜಕ್ಕ, ಸಿದ್ದ ಭಧ್ರಶೆಟ್ಟಿ,   ಮನು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು. 
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು: ಸುನೀಲ್ ಕುಮಾರ್ ಎನ್ ಒತ್ತಾಯಕಾಂಗ್ರೆಸ್ ಸಮಿತಿ ಸದಸ್ಯರಾಗಿರುವ ಸಿದ್ದರಾಮಯ್ಯರಿಗೆ ರಣದೀಪ್ ಸಿಂಗ್ ಸುರ್ಜೇವಾಲ ಅಭಿನಂದನೆನೂತನ ಸರ್ಕಾರದಲ್ಲಿ ಸಂತೋಷ್ ಲಾಡ್ ಅವರಿಗೆ ಡಿಸಿಎಂ ನೀಡುವಂತೆ ಒತ್ತಾಯಯುವ ವಕೀಲ ಮುತ್ತು ಕಾಳೆ ಅವರ ಹುಟ್ಟುಹಬ್ಬ ಆಚರಣೆBMTC ಸಿಬ್ಬಂದಿ ವರ್ಗದವರಿಗೆ ಆರೋಗ್ಯ ತಪಾಸಣಾ ಶಿಬಿರಕಿರ್ಗಿಜ್ ಗಣರಾಜ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಸಚಿವ ಸ್ಥಾನಕ್ಕೆ ಒತ್ತಾಯಮೈಸೂರು ವಾರಿಯರ್ಸ್ ಪ್ರತಿಭಾನ್ವೇಷಣೆ 213 ಯುವ ಕ್ರಿಕೆಟಿಗರ ಸತ್ವಪರೀಕ್ಷೆಸಿಎಂ ಅಧಿಕಾರ ಹಸ್ತಾಂತರ ವಿಚಾರ ಅಂತಿಮ ಘಟ್ಟ, ಬೆಂಗಳೂರಿನಲ್ಲಿ ಚರ್ಚೆಗಳ ಮಹಾಪೂರಕೇಂದ್ರ ಬಿಜೆಪಿ ಸರ್ಕಾರ ಜನಸಾಮಾನ್ಯರ ಲೂಟಿ ಮಾಡಲು ಹೊರಟಿದೆ :ಸುರ್ಜೆವಾಲಾ