LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು: ಸುನೀಲ್ ಕುಮಾರ್ ಎನ್ ಒತ್ತಾಯ

ಬೆಂಗಳೂರು: ಉಪ್ಪಾರ ಸಮಾಜದ ಏಕೈಕ ಶಾಸಕ ಸಿ. ಪುಟ್ಟರಂಗಶೆಟ್ಟಿ  ಅವರಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಈ ಬಾರಿಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಬೆಂಗಳೂರು ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮತ್ತು ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಎನ್ ಅವರು ಒತ್ತಾಯಿಸಿದರು.news_1780473003_1_858.webp
 ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ಜನನಾಯಕ ಹಾಗೂ ಮುಖಂಡ ಪುಟ್ಟರಂಗಶೆಟ್ಟಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದ ಪ್ರಮುಖ ಸಮುದಾಯವಾದ ಉಪ್ಪಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಅವರು ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರೂ ಕೂಡ ಆಗಿದ್ದು, ಇದನ್ನು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಕಳೆದ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಪುಟ್ಟರಂಗ ಶೆಟ್ಟಿ ಅವರಿಗೆ ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವ ಸ್ಥಾನಮಾನವನ್ನು ನೀಡಬೇಕೆಂದು ಉಪ್ಪಾರ ಸಮಾಜದಿಂದ ಒತ್ತಾಯವನ್ನು ಮಾಡಲಾಯಿತು.news_1780473003_0_637.webp
ಪುಟ್ಟರಂಗಶೆಟ್ಟಿ ಅವರ ಕಾಯಕ ನಿಷ್ಠೆ!
ಶಾಸಕ ಪುಟ್ಟರಂಗಶೆಟ್ಟಿ ದೀರ್ಘಕಾಲದಿಂದ ಜನಸೇವೆ, ಪಕ್ಷ ಸಂಘಟನೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಜನರಿಂದ ಆಶೀರ್ವಾದ ಪಡೆದಿರುವುದು ಅವರ ಅಪಾರ ಜನಸೇವೆಗೆ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಹಿಂದುಳಿದ ವರ್ಗದ ನಾಯಕರಾಗಿ ಸಮಾಜದ ಪರವಾಗಿ ಸದಾ ಧ್ವನಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಮಾನ ನೀಡುವುದರಿಂದ ಸಾಮಾಜಿಕ ನ್ಯಾಯ ಹಾಗೂ ಸಮಾನ ಪ್ರಾತಿನಿಧಿತ್ವಕ್ಕೆ ಬಲ ಸಿಗಲಿದೆ ಎಂದು ಹೇಳಿದರು. 
ಚಾಮರಾಜನಗರ ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರದಲ್ಲಿ ಪ್ರಬಲ ನಾಯಕರ ಮುಂದೆ ನಿಂತು ಚುನಾವಣೆಗೆ ನಿಂತು ಸಾಕಷ್ಟು ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಉಪ್ಪಾರ ಸಮಾಜ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆಯಲು ವೇದಿಕೆ ಕಲ್ಪಿಸಿದಂತೆ ಆಗುತ್ತದೆ. ನಮ್ಮ ಸಮಾಜದವನ್ನು ಪರಿಶಿಷ್ಟ ವರ್ಗ ಮತ್ತು ಪಂಗಡಗಳ ಮೀಸಲಾತಿಯ ಅಡಿಯಲ್ಲಿ ಪರಿಗಣಿಸಬೇಕು ಎನ್ನುವ ಬೇಡಿಕೆ ಸಹ ಇದ್ದು,ಆದ್ದರಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪ್ಪಾರ ಸಮಾಜದ ಜನ ಸಂಖ್ಯೆ ಬಲ
ರಾಜ್ಯದಲ್ಲಿ ಸುಮಾರು 25 ಲಕ್ಷದಷ್ಟು ಜನಸಂಖ್ಯೆ ಉಪ್ಪಾರ ಸಮಾಜದ್ದಾಗಿದ್ದು, ಕೂಲಿ ಕಾರ್ಮಿಕರಾಗಿ, ಮನೆ ಕಟ್ಟುವ ಕಾರ್ಮಿಕರಾಗಿ, ಬೀದಿ ಬದಿ ವ್ಯಾಪಾರಿಗಳಾಗಿ ಅತಿ ಸಂಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಎಸ್.ಎಸ್.ಎಲ್.ಸಿ ತನಕ ಓದುದವರು ಸಹ ಕಡಿಮೆಯಿದ್ದಾರೆ.
news_1780472931_0_340.webp
ಚಾಮರಾಜನಗರ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವವರು ಹೆಚ್ಚಾಗಿದ್ದಾರೆ. ಇಂತಹ ಅತೀ ಹಿಂದುಳಿದ ಸಮುದಾಯ ನಾಯಕನಾಗಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಿದರೆ ಇಡೀ ಸಮಾಜ ಮುನ್ನೆಲೆಗೆ ಬರಲು ಸಹಕಾರಿ ಯಾಗುತ್ತದೆ  ಎಂದು ಸುನೀಲ್ ಕುಮಾರ್ ಎನ್ ಇಡೀ ಸಮಾಜದ ಪರವಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ರಾಜ್ಯ ಖಜಾಂಚಿಯಾದ ಮಹಾದೇವ್, ಮಹಿಳಾ ಮುಖಂಡರಾದ ಡಾ ಗೀತಾ ಸೈದಾಪುರ ಸೇರಿದಂತೆ ಸಂಘದ ಪದಾಧಿಕಾರಿಗಳು ಸಂಬಂಧಿದ ಮುಖಂಡರು ಸಮುದಾಯದವರು ಇದೆ ವೇಳೆ ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು: ಸುನೀಲ್ ಕುಮಾರ್ ಎನ್ ಒತ್ತಾಯಕಾಂಗ್ರೆಸ್ ಸಮಿತಿ ಸದಸ್ಯರಾಗಿರುವ ಸಿದ್ದರಾಮಯ್ಯರಿಗೆ ರಣದೀಪ್ ಸಿಂಗ್ ಸುರ್ಜೇವಾಲ ಅಭಿನಂದನೆನೂತನ ಸರ್ಕಾರದಲ್ಲಿ ಸಂತೋಷ್ ಲಾಡ್ ಅವರಿಗೆ ಡಿಸಿಎಂ ನೀಡುವಂತೆ ಒತ್ತಾಯಯುವ ವಕೀಲ ಮುತ್ತು ಕಾಳೆ ಅವರ ಹುಟ್ಟುಹಬ್ಬ ಆಚರಣೆBMTC ಸಿಬ್ಬಂದಿ ವರ್ಗದವರಿಗೆ ಆರೋಗ್ಯ ತಪಾಸಣಾ ಶಿಬಿರಕಿರ್ಗಿಜ್ ಗಣರಾಜ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಸಚಿವ ಸ್ಥಾನಕ್ಕೆ ಒತ್ತಾಯಮೈಸೂರು ವಾರಿಯರ್ಸ್ ಪ್ರತಿಭಾನ್ವೇಷಣೆ 213 ಯುವ ಕ್ರಿಕೆಟಿಗರ ಸತ್ವಪರೀಕ್ಷೆಸಿಎಂ ಅಧಿಕಾರ ಹಸ್ತಾಂತರ ವಿಚಾರ ಅಂತಿಮ ಘಟ್ಟ, ಬೆಂಗಳೂರಿನಲ್ಲಿ ಚರ್ಚೆಗಳ ಮಹಾಪೂರಕೇಂದ್ರ ಬಿಜೆಪಿ ಸರ್ಕಾರ ಜನಸಾಮಾನ್ಯರ ಲೂಟಿ ಮಾಡಲು ಹೊರಟಿದೆ :ಸುರ್ಜೆವಾಲಾ