LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೃಪಾ ಆಳ್ವರಿಗೆ ಆರು ವರ್ಷ ಉಚ್ಚಾಟನೆ

ಬೆಂಗಳೂರು : “ಸಾರ್ವಜನಿಕ ಕ್ಷೇತ್ರದಲ್ಲಿ ನಾಯಕರಿಗೆ ಮುಜುಗರ ಉಂಟುಮಾಡುವ ಕೆಲಸದಿಂದ ಮಾಧ್ಯಮಗಳಲ್ಲಿ ಅಹಿತಕರ ಸುದ್ದಿಗಳು ಬಂದಿದ್ದವು. ಈ ವಿಚಾರವಾಗಿ ಕೃಪ ಆಳ್ವಾ ಅವರನ್ನು ಕಾರಣ ಕೇಳಿದಾಗ ಉತ್ತರ ಭಾರದ ಹಿನ್ನೆಲೆ  ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ತಿಳಿಸಿದ್ದಾರೆ.news_1793438302_0_613.webp

ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರ ಮಾಧ್ಯಮ ಪ್ರತಿಕ್ರಿಯೆ ನೀಡಿ, ಉತ್ತರ ನೀಡಲು 3 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅವರಿಂದ ಉತ್ತರ ಬಾರದ ಕಾರಣ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ” ಎಂದರು.

ಕೃಪಾ ಆಳ್ವಾ ಅವರಿಗೆ ನೋಟೀಸ್  ತಲುಪಿಲ್ಲವೇ ಎಂದು ಕೇಳಿದಾಗ, “ಅವರಿಗೆ ಕಳುಹಿಸಿದ ನೋಟೀಸ್ ವಾಪಸ್ ಬಂದಿದೆ. ಹೀಗಾಗಿ ಬೇರೆ ವಿಧಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದರು.

ಕೃಪ ಆಳ್ವಾ ಅವರು ವಿದೇಶಕ್ಕೆ ಹೋಗಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಮಹಾಮಾನವನ ಐಬಿ, ಸಿಬಿಐ ನೋಡಿಕೊಳ್ಳುತ್ತದೆ. ನಾನು ಅದರ ಬಗ್ಗೆ ನೋಡುವುದಿಲ್ಲ” ಎಂದರು.

ಇಷ್ಟು ತಡವಾಗಿ ಕ್ರಮ ಯಾಕೆ ಎಂಬ ಬಗ್ಗೆ ಕೇಳಿದಾಗ, “ನಾವು ದುಡುಕಿ ಹೆಜ್ಜೆ ಇಡುವ ಮುನ್ನ, ಅವರನ್ನು ಕೇಳಿ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದು ಅವಕಾಶ ನೀಡಬೇಕು. ಅವರು ಉತ್ತರ ನೀಡದೇ ಇದ್ದಾಗ ತೀರ್ಮಾನ ಕೈಗೊಂಡಿದ್ದೇವೆ” ಎಂದರು.

ಕೃಪ ಆಳ್ವಾ ಅವರ ಹಿಂದೆ ಬೇರೆ ಯಾರಾದರೂ ಇದ್ದಾರ ಎಂಬ ವಿಚಾರವಾಗಿ ಪಕ್ಷದಲ್ಲಿ ಆಂತರಿಕ ತನಿಖೆ ಮಾಡಿಸುತ್ತೀರಾ ಎಂದು ಕೇಳಿದಾಗ, “ಈ ವಿಚಾರವನ್ನು ಮಹಾಮಾನವನಿಗೆ ಬಿಟ್ಟಿದ್ದೇವೆ. ಕೃಪ ಆಳ್ವಾ ಅವರ ವಿರುದ್ಧ ನೇರ ಸಾಕ್ಷಿ ಇರುವ ಕಾರಣ ಉಚ್ಛಾಟಿಸಿದ್ದೇವೆ” ಎಂದರು.

ನಾಗ್ಪುರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಕೇಳಿದಾಗ, “ನಾಗ್ಪುರ ಎಂದರೆ ಕನ್ನಡದಲ್ಲಿ ಹಾವಿನಪುರ. ದೇಶದಲ್ಲಿ ದ್ವೇಷದ ವಿಷ ಕಾರುವ ಸಂಘಟನೆ ಕತ್ತಿಗೆ ಕೈ ಹಾಕಿ ಹಿಡಿದಿದ್ದೇವೆ. ಅಲ್ಲಿ ಆರಂಭವಾಗಿದ್ದು, ದೇಶದಲ್ಲಿ ಅವರನ್ನು ಮಣಿಸುವ ಸಂದೇಶ ರವಾನಿಸುತ್ತೇವೆ” ಎಂದರು.

ಕಾಂಗ್ರೆಸ್ ಪಕ್ಷವನ್ನು ಮಣಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಕಾಂಗ್ರೆಸ್ ಸೋಲಿಸಿದ್ದೇವೆ ಎಂದು ಹೇಳಿಕೊಂಡು ಹೋದರೆ ಆಗುವುದಿಲ್ಲ. ಮಹಾಮಾನವನ ಕ್ಷೇತ್ರ ವಾರಣಾಸಿಯಲ್ಲಿ ಬಹಳ ಕೆಟ್ಟದಾಗಿ ಸೋತಿದ್ದಾರೆ. ಬಿಜೆಪಿ ಅಧ್ಯಕ್ಷನ ಕ್ಷೇತ್ರ ಬಿಹಾರದಲ್ಲಿ, ನಿತೀನ್ ಗಡ್ಕರಿ ಅವರ ಕ್ಷೇತ್ರದಲ್ಲಿ, ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿ ಸೋತಿದ್ದಾರೆ” ಎಂದು ತಿಳಿಸಿದರು.

ದೇವೇಗೌಡರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿದ ಬಳಿಕ ಈ ಸರ್ಕಾರದ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಕೇಳಿದಾಗ, “ಆನೆ ನಡೆಯುವಾಗ ಏನಾದರೂ ಬೀಳಬಹುದು ಎಂದು ಅದರ ಹಿಂದೆ ತೋಳ ಮತ್ತು ನರಿ ನಡೆದುಕೊಂಡು ಹೋಗುತ್ತಿರುತ್ತದೆ. ಅದರಲ್ಲಿ ತಪ್ಪೇನಿಲ್ಲ” ಎಂದು ತಿರುಗೇಟು ನೀಡಿದರು.

ದೆಹಲಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ಹೋರಾಟಕ್ಕೆ ಕರೆ ನೀಡಿದ್ದಾರೆ. ಕರ್ನಾಟಕದಿಂದ ಹೋಗಲು ರೈಲ್ವೇಗೆ ಅನುಮತಿ ನೀಡಿರಲಿಲ್ಲ. ಆಮೂಲಕ ನಾವು ಭಾಗವಹಿಸಲು ತೊಂದರೆ ನೀಡಿದ್ದಾರೆ. ನಮ್ಮ ಕಾರ್ಯಕರ್ತರು ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ದೆಹಲಿ ತಲುಪಿದ್ದು, ರಾಮಲೀಲಾ ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗಾಗಿ ದೊಡ್ಡ ಹೋರಾಟ ನಡೆಯಲಿದೆ” ಎಂದು ತಿಳಿಸಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಲಹಂಕ, ಬೆಂಗಳೂರಿನಲ್ಲಿ ಹೊಸ ಶೋರೂಂ ಆರಂಭಿಸಿದ ಕಳಾಮಂದಿರ್  (SSKL) ನ 87ನೇ ಮಳಿಗೆಕೃಪಾ ಆಳ್ವರಿಗೆ ಆರು ವರ್ಷ ಉಚ್ಚಾಟನೆಅಪೋಲೊ ಸಂಸ್ಥೆಯ ಟೋಟಲ್ ಹೆಲ್ತ್ ಗ್ರಾಮೀಣ ಆರೋಗ್ಯಸೇವೆಯು ಬದುಕಿನಲ್ಲಿ ಪರಿಣಾಮ ತಂದ ವಿಶಿಷ್ಟ ಮಾದರಿ ಎಂಜಿ ವಿಂಡ್ಸರ್ ಇಂಡಲ್ಜ್ ಎಡಿಷನ್’ ಅನ್ನು ಬಿಡುಗಡೆಎಂಜಿ ವಿಂಡ್ಸರ್ ಇಂಡಲ್ಜ್ ಎಡಿಷನ್’ ಅನ್ನು ಬಿಡುಗಡೆಬಸವಣ್ಣನವರ ಸಮಾನತೆ ಆಶಯಗಳು ಸಂವಿಧಾನದಲ್ಲಿವೆ. ಪ್ರತಿಯೊಬ್ಬ ಭಾರತೀಯನೂ ಸಂವಿಧಾನ ಅರ್ಥಮಾಡಿಕೊಳ್ಳಬೇಕುಕನ್ನಡದ ಹಬ್ಬಕ್ಕೆ ಗುರಪ್ಪನ ಪಾಳ್ಯ ವಾರ್ಡ್ ನ ಸಮಾಜ ಸೇವಕ ಮಾಸ್ತಿ ಜಾಕಿರ್ ಅಲಿ ಖಾನ್ ಸಿದ್ದತೆ25ನೇ ಕೆವಿನ್‌ಕೇರ್ ಎಬಿಲಿಟಿ ಅವಾರ್ಡ್ಸ್ 2027ಕ್ಕೆ ಅರ್ಜಿ ಸಲ್ಲಿಸುವ ಗಡುವು ನವೆಂಬರ್ 1, 2026ರವರೆಗೆ ವಿಸ್ತರಣೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಅಕ್ಷರ ದಾನದ ಮೂಲಕ ವಿಶೇಷ ಕಾರ್ಯಕ್ರಮಪ್ರಧಾನಿ ತಂದೆಯನ್ನು ನಿಂದಿಸಿದ ಸೀನಿಯರ್ ಖರ್ಗೆಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ