ಬೆಂಗಳೂರು: ಬ್ಯಾರಿಸ್ ಸೆಂಟ್ರಲ್ ಕಮಿಟಿಯಿಂದ ಫೆ.1, 2026ರಂದು 'ಬ್ಯಾರಿ ಕೂಟ' 10 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ, ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಿದ್ದೇವೆ ಎಂದು BCCಯ ಅಧ್ಯಕ್ಷ ಶಬೀರ್ ಬ್ರಿಗೇಡ್ ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು,"ಕರಾವಳಿ ಭಾಗದಿಂದ ಉದ್ಯೋಗ, ವ್ಯಾಪಾರ, ಶಿಕ್ಷಣ ಸೇರಿದಂತೆ ಹಲವು ಕಾರಣಕ್ಕಾಗಿ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಾರೆ. ಬ್ಯಾರಿ ಸಮುದಾಯದ ಎಲ್ಲರನ್ನೂ ಒಂದೇ ವೇದಿಕೆಯಡಿ ಒಟ್ಟುಗೂಡಿಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳ ಪ್ರಯತ್ನದ ಭಾಗವಾಗಿ 'ಬ್ಯಾರಿಸ್ ಸೆಂಟ್ರಲ್ ಕಮಿಟಿ' ಎಂಬ ಸಂಸ್ಥೆಯನ್ನು ಯುವಕರೇ ಹುಟ್ಟು ಹಾಕಿದ್ದು, ಸಮುದಾಯದ ನೋವು-ನಲಿವುಗಳಿಗೆ ಸ್ಪಂದಿಸುತ್ತಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲ ಬ್ಯಾರಿ ಸಮುದಾಯದ ಜನರನ್ನು ಒಂದುಗೂಡಿಸಿ ಪ್ರತಿ ವರ್ಷ 'ಬ್ಯಾರಿ ಕೂಟ'ವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. 2026ರ ಬ್ಯಾರಿ ಕೂಟವನ್ನು 2026ರ ಫೆಬ್ರವರಿ 1ರಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 8ರಲ್ಲಿರ ಶೃಂಗಾರ್ ಪ್ಯಾಲೇಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ" ಎಂದು ತಿಳಿಸಿದ್ದಾರೆ.
ಬ್ಯಾರಿ ಕೂಟದ ಭಾಗವಾಗಿ 10 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ, ಆಂಬ್ಯುಲೆನ್ಸ್ ಲೋಕಾರ್ಪಣೆ ನಡೆಯಲಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಮಕ್ಕಳು, ಮಹಿಳೆಯರು, ಯುವಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಕಳೆದ ವರ್ಷವೂ ಕೂಡ ಬೆಂಗಳೂರಿನಲ್ಲಿ 'ಬ್ಯಾರಿ ಕೂಟ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ಮಂದಿ ಆಗಮಿಸುವ ಮೂಲಕ ಯಶಸ್ವಿಗೊಳಿಸಿದ್ದರು. ಈ ಬಾರಿಯ ಬ್ಯಾರಿ ಕೂಟದ ವಿಶೇಷತೆಯಾಗಿ ಇಂಪೀರಿಯೋ ಗ್ರೂಪ್ ಆಫ್ ಹೋಟೆಲ್ ಸಂಸ್ಥೆಯ ಮಾಲೀಕರಾದ ಇಬ್ರಾಹೀಂ ಖಲೀಲ್ ಹಾಗೂ ರಶೀದ್ ಇವರ ಸಹಕಾರದೊಂದಿಗೆ ಒಂದು ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಿದ್ದೇವೆ.
ಜೊತೆಗೆ ದಾನಿಗಳಾದ ಉದ್ಯಮಿ, ಭಾರತ್ ಕನ್ಸ್ ಕ್ಸನ್ ಇದರ ಮಾಲೀಕರಾದ ಮುಸ್ತಫಾ ಅವರ ಸಹಕಾರದಿಂದ ಸುಮಾರು ಬ್ಯಾರಿ ಸಮುದಾಯದ ಪ್ರೊಫೆಶನಲ್ ಕೋರ್ಸ್ ಕಲಿಯುತ್ತಿರುವ ಬಡ ಹಾಗೂ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು. ಅದರ ಜೊತೆಗೆ, ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ನೂತನ ವೆಬ್ ಸೈಟ್ ಅನ್ನು ಕೂಡ ಬ್ಯಾರಿ ಕೂಟದಲ್ಲಿ ಲೋಕಾರ್ಪಣೆ ಮಾಡುವುದಕ್ಕೆ ಉದ್ದೇಶಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು:
ನಮ್ಮ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು ಹೆಚ್, ಶಾಸಕರಾದ ರಿಝಾನ್ ಅರ್ಷದ್, ಸಚಿವರಾದ ಜಮೀರ್ ಅಹ್ಮದ್ ಖಾನ್, ಬ್ಯಾರಿ ಸಮುದಾಯದ ವಿವಿಧ ಉದ್ಯಮಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸಿದ್ದೇವೆ. ಎಲ್ಲರೂ ಆಗಮಿಸುವುದಾಗಿ ತಿಳಿಸಿದರು.
ಬ್ಯಾರಿ ಸಮುದಾಯದವರಿಗೆ ವಿಶೇಷ ಕಾರ್ಯಕ್ರಮ:
"ಬ್ಯಾರಿ ಕೂಟ ಭಾಗವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಮಹಿಳೆಯರು, ಯುವಕ-ಯುವತಿಯರು, ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಜೊತೆಗೆ ಬ್ಯಾರಿ ಕವಿಗೋಷ್ಠಿ ಸೇರಿದಂತೆ ಬ್ಯಾರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬ್ಯಾರಿ ಒಪ್ಪನೆ ಪಾಟ್, ಬ್ಯಾರಿ ಕಲೆ ಬಿಂಬಿಸುವ ಎಕ್ಸ್‌ಪೋ, ಕರಾವಳಿಯ ತಿಂಡಿ-ತಿನಿಸುಗಳ ಆಹಾರ ಮಳಿಗೆ ಕೂಡ ಇರಲಿದೆ. ಜೊತೆಗೆ, ಯುವ ಉದ್ಯಮಿಗಳಿಗಾಗಿ ಯಶಸ್ವಿ ಉದ್ಯಮಿಗಳಿಂದ ತರಬೇತಿ ನೀಡುವ ಉದ್ದೇಶದಿಂದ ಬಿಝ್ ಟೆಕ್ ಸಮಾವೇಶ, ಮಹಿಳೆಯರಿಗೆ ಮದರಂಗಿ ಸ್ಪರ್ಧೆ, ಕುಕ್ಕಿಂಗ್ ವಿದೌಡ್ ಫೈಯರ್, ಕ್ಯಾಲಿಗ್ರಫಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮಕ್ಕಳಿಗೆ ಛದ್ಮವೇಷ(ಫ್ಯಾನ್ಸಿ ಡ್ರೆಸ್) ಸ್ಪರ್ಧೆ, ಶಾರ್ಟ್ ಫಿಲ್ಸ್, ಈ ಮಾಡೆಲಿಂಗ್, ಲಿಟಲ್ ಸ್ಟಾರ್ಸ್ ಎಂಜಿನಿಯರಿಂಗ್ ಮೈಂಡ್ಸ್ ಎಂಬ ವಿಶೇಷ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದವು. ಈಗಾಗಲೇ ಬ್ಯಾರಿ ಸಮುದಾಯದ ಹಲವು ಮಂದಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಾಸಿರ್ ಕೆಂಪಿ, ಪ್ರಧಾನ ಕಾರ್ಯದರ್ಶಿ, ಬಿಸಿಸಿ, ಗಫೂರ್, ಉಪಾಧ್ಯಕ್ಷರು, ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು, ಸಲೀಂ ಸಿಎಂ, ಉಪಾಧ್ಯಕ್ಷರು, ಬಿಸಿಸಿ, ಬೆಂಗಳೂರು, ರಿಫಾಯಿ, ಕೋಶಾಧಿಕಾರಿ, ಬಿಸಿಸಿ, ಬಶೀರ್ ಅಡ್ಯನಡ್ಕ, ಮಾಧ್ಯಮ ಕಾರ್ಯದರ್ಶಿ, ಅಡ್ವಕೇಟ್ ಅಥಾವುಲ್ಲ ಪೂಂಜಾಲಕಟ್ಟೆ, ಸಂಘಟನಾ ಕಾರ್ಯದರ್ಶಿ, ಸಮದ್ ಮದೃಡ್ಕ,, ಸಂಚಾಲಕರು, ಬ್ಯಾರಿ ಕೂಟ,ಇರ್ಷಾದ್ ವೇಣೂರು ಸೇರಿ ಹಲವರು ಉಪಸ್ಥಿತಿ.