LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿ.ಜಿ.ಪಿ  ರಾಮಚಂದ್ರ ರಾವ್  ಅಮಾನತ್ತು ಸರಿಯಲ್ಲ: ದಲಿತ ಪರ ಸಂಘಟನೆ ಆಕ್ರೋಷ

ಬೆಂಗಳೂರು: ಮಹಿಳೆಯ ಜೊತೆ ಆಶ್ಲೀಲವಾಗಿ ಡಿ.ಸಿ.ಆರ್ ವಿಭಾಗ DGP ಕೆ. ರಾಮಚಂದ್ರ ರಾವ್,  ವರ್ತಿಸಿದ್ದಾರೆಂಬ ಕಾರಣದಿಂದ ಸರ್ಕಾರವು ಯಾವುದೇ ತನಿಖೆ ನಡೆಸದೆ ಅಮಾನತ್ತು ಮಾಡಿರುವುದು ಸರಿಯಲ್ಲ ಅವರನ್ನು ಪುನಃ ಹುದ್ದೆಗೆ ತೆಗೆದುಕೊಳ್ಳಬೇಕಾಗಿ ಎಂದು ಹಲವು ದಲಿತಪರ ಸಂಘಟನೆಗಳ ಮುಖಂಡರು ಒತ್ತಾಯ ಮಾಡಿದರು.


ಈ ಸಂಭಂದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕರ್ನಾಟಕ ರಕ್ಷಣ ಸಮಿತಿ ಅಧ್ಯಕ್ಷ ಕೆ ಕಿರಣ್ ಕುಮಾರ್, ಜ.19 ರಂದು ಮದ್ಯಾಹ್ನ ಸುಮಾರು 1-00 ಘಂಟೆಗೆ  ಡಿ.ಜಿ.ಪಿ. ಡಿ.ಸಿ.ಆರ್ ವಿಭಾಗ  ರಾಮಚಂದ್ರ ರಾವ್ ಅವರ ಬಗ್ಗೆ ನಕಲಿ ಚಿತ್ರೀಕರಣವು ಕೆಲವು ಮಾದ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದಿರುವುದನ್ನು ತಿಳಿದು ಸರ್ಕಾರವು ಅವರನ್ನು ಸರಿಸುಮಾರು ಸಂಜೆ 5-00 ಘಂಟೆಗೆ ಅಮಾನತ್ತುಗೊಳಿಸಿರುವ ಪತ್ರವನ್ನು ರವಾನೆ ಮಾಡಿರುತ್ತಾರೆ.


ರಾಜ್ಯ ಸರ್ಕಾರವು ಯಾವುದೇ ಸತ್ಯವನ್ನು ಪತ್ತೆಹಚ್ಚಲು ಕನಿಷ್ಠ ಪ್ರಯತ್ನವನ್ನೂ ಮಾಡದೇ, ಹಿರಿಯ ಹಾಗೂ ಅತ್ಯಂತ ಗೌರವಾನ್ವಿತ ಪೊಲೀಸ್ ಅಧಿಕಾರಿಯಾದ ಕೆ. ರಾಮಚಂದ್ರ ರಾವ್ ಅವರನ್ನು ಅತೀವ ಅತುರ ಮತ್ತು ಅಸಹನೀಯ ತ್ವರಿತದಲ್ಲಿ ಅಮಾನತು ಮಾಡಿರುವ ರೀತಿಯ ಬಗ್ಗೆ ದಲಿತ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


 ಈ ವಿಷಯ ಬೆಳಕಿಗೆ ಬಂದ ಅದೇ ದಿನ ತೆಗೆದುಕೊಳ್ಳಲಾದ ಈ ನಿರ್ಧಾರದ ವೇಗ ನಮ್ಮನ್ನು ತೀವ್ರವಾಗಿ ನೋಯಿಸಿದೆ ಮತ್ತು ಕಳವಳಗೊಳಿಸಿದೆ. ಈ ವೇಗದೇ ಎಲ್ಲವನ್ನೂ ಹೇಳುತ್ತದೆ. ಇದರಲ್ಲಿ ಯಾವುದೇ ಸತ್ಯಾಂಶ, ಪರಿಶೀಲನೆ ಇಲ್ಲ. ಸತ್ಯವನ್ನು ತಿಳಿದುಕೊಳ್ಳುವ ಯಾವುದೇ ಪ್ರಯತ್ನವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಆತುರ ಕ್ರಮಗಳು ಜವಾಬ್ದಾರಿಯುತ ಆಡಳಿತವನ್ನೂ ಪರಿಪಕ್ವತೆಯನ್ನೂ ತೋರಿಸುವುದಿಲ್ಲ. ಬದಲಾಗಿ ಇದು ಭೀತಿಯನ್ನೂ ಮತ್ತು ಸಾಧ್ಯವಾದಷ್ಟು ಬೇಗ ವಿಷಯವನ್ನು ಮುಚ್ಚಿಹಾಕುವ ಉದ್ದೇಶವನ್ನೇ ತೋರಿಸುತ್ತದೆ ಎಂದರು.


ಮಾದ್ಯಮದಲ್ಲಿ ಸುದ್ದಿ ಪ್ರಸಾರವಾಗುದ್ದೇ ತಡಾ ಯಾವುದೇ ತನಿಖೆ ನಡೆಸದೆ, ಪರಿಶೀಲನೆ ಇಲ್ಲ. ಯಾವುದೇ ಮೂಲಭೂತ ಪ್ರಶ್ನೆ ಇಲ್ಲ. ಅಮಾನತು ಆದೇಶವನ್ನೇ ನೋಡಿದರೆ ಅದು ಸಂಪೂರ್ಣವಾಗಿ ಮಾಧ್ಯಮ ವರದಿಗಳ ಆಧಾರದ ಮೇಲೆ ಹೊರಡಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಸಾಮಾನ್ಯ ನಾಗರಿಕರನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.


ಸಾಮಾನ್ಯ ಬುದ್ದಿಯಿರುವ ಯಾರಿಗೂ ಈ ವೀಡಿಯೊಗಳು ಸಂಪಾದಿಸಲ್ಪಟ್ಟಿರುವಂತೆ ಮತ್ತು ಜೋಡಿಸಲ್ಪಟ್ಟಿರುವಂತೆ ಕಾಣುತ್ತವೆ. ಈ ವೀಡಿಯೊಗಳು ಕೃತಕವಾಗಿ ತಿದ್ದಲ್ಪಟ್ಟಿರಬಹುದು. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಮ್ಯಾನಿಪ್ಯುಲೇಟ್ ಮಾಡಿರಬಹುದು. ಸರ್ಕಾರ ವೀಡಿಯೊಗಳು ನಿಜವೋ ಸುಳ್ಳೋ ಎಂಬುದನ್ನು ಪರಿಶೀಲಿಸಲು ಒಂದು ಕ್ಷಣವೂ ತಡೆದುಕೊಳ್ಳಲಿಲ್ಲ. ಯಾವುದೆ ಪರೀಕ್ಷೆಗಳಿಗೂ ಕಳಿಸದೆ ಆತುರದ ನಿರ್ಧಾರ ಕೈಗೊಂಡು ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದರು.


ಡಿ.ಜಿ.ಪಿ ಶ್ರೀ ರಾಮಚಂದ್ರ ರಾವ್ ಅವರಂತಹ ಅಧಿಕಾರಿಗೆ ಈ ರೀತಿಯ ಅನ್ಯಾಯ ಸಂಭವಿಸಿದಾಗ, ಸರ್ಕಾರದ ಉದ್ದೇಶಗಳನ್ನೇ ನಾವು ಪ್ರಶ್ನಿಸಬೇಕಾಗುತ್ತದೆ. 'ನಾವು ಕ್ರಮ ತೆಗೆದುಕೊಂಡಿದ್ದೇವೆ, ನಾವು ಅವರನ್ನು ಅಮಾನತು ಮಾಡಿದ್ದೇವೆ" ಎಂದು ಹೇಳಿ ಜವಾಬ್ದಾರಿಯಿಂದ ಕೈತೊಳೆದುಕೊಳ್ಳಲು ಸರ್ಕಾರ ಬಯಸಿದಂತೆ ಸ್ಪಷ್ಟವಾಗಿ ಕಾಣುತ್ತದೆ


ಸುದ್ದಿ ಗೊಷ್ಟಿಯಲ್ಲಿ ಜೈ ಭೀಮ್ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ ವಿಜಯ್,  ಭೀಮ್ ರಾವ್ ಆಂಬೇಡ್ಕರ್ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜಗದೀಶ್,ಎನ್ ಎಂ ವಿಜಯ್ ಕುಮಾರ್ ಸೇರಿದಂತೆ ಅನೇಕ ದಲಿತ ಪರ ಸಂಘಟನೆಯ ಮುಖ್ಯಸ್ಥರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ