LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಂಥ ಕೇವಲ ಪುಸ್ತಕವಲ್ಲ ರೌಡಿಸಂ ಆದಾರಿತಕಥೆ

ಶಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗೋಕಾಕ್ ಮೂಲದವರಾದ ಹರಿಪ್ರಿಯ ರವಿಕೊಪ್ಪ್ ಬಂಡವಾಳ* ಹೂಡುತ್ತಿರುವ ’ಗ್ರಂಥ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ.ಶ್ರೀ.ಮುರುಗ ರಾಜೇಂದ್ರ ಸ್ವಾಮಿಗಳು, ಶೂನ್ಯ ಸಂಪಾದನ ಮಠ, ಗೋಕಾಕ್ ಆಗಮಿಸಿ ಇಡೀ ಸಿನಿಮಾ ತಂಡಕ್ಕೆ ಶುಭ ಹಾರೈಸಿದರೆ, ನಟ ಅನಿರುದ್ದ್ ಜಟ್ಕರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಸಂಜೀವ್ ಗವಂಡಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ’ಭೂಲೋಕದ ಅಧಿಪತಿ’ ಎಂಬ ಕ್ಯಾಚಿ ಅಡಿಬರಹ ಇದೆ.news_1792067557_1_651.webp

      ನಾಯಕನಾಗಿ ಯುವ. ಉಳಿದಂತೆ ಹಿರಿಯ ನಟ ಅಭಿಜಿತ್, ಕಾಕ್ರೋಚ್ ಸುಧಿ, ರವಿಕಾಳೆ, ಶಯ್ಯಾಜಿರಾವ್ ಶಿಂದೆ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಅಂಜನ್ ಪೂಜಾರಿ, ಛಾಯಾಗ್ರಹಣ ವೀರೇಶ್.ಎನ್.ಟಿ.ಎ, ಸಂಕಲನ ಸತೀಶ್ ಚಂದ್ರಯ್ಯ, ಸಾಹಸ ಡಾ.ಥ್ರಿಲ್ಲರ್ ಮಂಜು, ನೃತ್ಯ ವಿ.ನಾಗೇಶ್-ಭೂಷಣ್-ವಿ.ಮುರಳಿ ಅವಾಗಿದೆ.
 ನಂತರ ಮಾತನಾಡಿದ ನಿರ್ದೇಶಕರು, ಈ ಸಿನಿಮಾ ಮೂರು ವರ್ಷದ ಕನಸು. ಪದೇ ಪದೇ ಬದಲಾವಣೆ ಮಾಡಿಕೊಳ್ಳುತ್ತಾ, ಒಂದು ಹಂತದಲ್ಲಿ ಒಂದೊಳ್ಳೆ ರೂಪಕೊಡಲಾಗಿದೆ. 90ರ ಕಾಲಘಟ್ಟದ ಕೆಲ ತುಣುಕುಗಳನ್ನು ಬಳಸಿಕೊಳ್ಳಾಗಿದೆ. ಕರ್ನಾಟಕ ಅಲ್ಲದೆ ಬೇರೆ ರಾಜ್ಯದಲ್ಲಿ ರೌಡಿಸಂ ಹೇಗಿರುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಆತ ತನ್ನದೆ ಗೃಂಥ ಸೃಷ್ಟಿ ಮಾಡಲು ಚಿಂತಿಸಿರುತ್ತಾನೆ. ಅವನದೇ ಆದ ಸೃಜನಾತ್ಮಕ ವಿಷಯಗಳನ್ನು ಅದರಲ್ಲಿ ಬರೆದು ಮುಂದಿನ ಪೀಳಿಗೆಗೆ ಭೂಗತ ಲೋಕ ಯಾವ ರೀತಿ ಇರುತ್ತದೆ ಎಂಬುದನ್ನು ಹೇಳಲು ಹೊರಟಿರುತ್ತಾನೆ. ಇದನ್ನು ಓದಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಗ್ರಂಥ ಶೀರ್ಷಿಕೆ ಇಡಲಾಗಿದೆ. ಕಾಲ್ಪನಿಕ ಕಥೆಯಾದರೂ, ಒಂದಷ್ಟು ನೈಜ ಅಂಶಗಳನ್ನು ಬಳಸಲಾಗುತ್ತಿದೆ. ಖ್ಯಾತ ನಾಯಕ ನಟಿ ಸಿನೆಮಾದಲ್ಲಿ ಇದ್ದಾರೆ, ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ. ಬೆಂಗಳೂರು, ಮಂಗಳೂರು, ಬಾಂಬೆ, ಉತ್ತರ ಕರ್ನಾಟಕ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂದು ಸಂಜೀವ್ ಗವಂಡಿ ಮಾಹಿತಿ ನೀಡಿದರು.

 ದೂರದ ಊರಿನಿಂದ ಬಂದು ಚಿತ್ರ ಮಾಡುತ್ತಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಹಿರಿಯ ನಟರನ್ನು ನೋಡಿ ನನಗೆ ಸಂತೋಷವಾಯಿತು, ಒಂದೊಳ್ಳೆ ಸಿನೆಮಾ ಮಾಡಲು ಹೊರಟಿದ್ದಾರೆ ನಮ್ಮ ನಿರ್ದೇಶಕರು, ತಾವೆಲ್ಲರೂ ಇಡೀ ಸಿನೆಮಾ ತಂಡಕ್ಕೆ ಹರಸಬೇಕೆಂದು ನಿರ್ಮಾಪಕಿ ಹರಿಪ್ರಿಯ ರವಿಕೊಪ್ಪ್ ಮಾಧ್ಯಮದವರನ್ನು ಕೋರಿಕೊಂಡರು.

      ’ಭಾಯ್’ ಚಿತ್ರದಲ್ಲಿ ನಟಿಸಿದ್ದ ಕಾರಣ ಯುವ ಭಾಯ್ ಅಂತ ಕರೆಯುತ್ತಿದ್ದರು. ಇದು ನನಗೆ ಎರಡನೇ ಚಿತ್ರ. ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದೆ. ಮನಷ್ಯ ಸತ್ತ ಮೇಲೂ ನೆನಪು ಮಾಡಿಕೊಳ್ಳುವುದು ಪೆನ್ನು, ಗ್ರಂಥ. ಅದೇ ಲಾಂಗ್ ಸಾಯೋವರೆಗೂ ನೆನಪಿನಲ್ಲಿ ಇರುತ್ತದೆ. ಅದಕ್ಕಿರುವ ಶಕ್ತಿ ಅಂದರೆ ರೌಡಿಸಂ ಎಂದು ನಾಯಕ ಯುವ ಪಾತ್ರದ ಪರಿಚಯ ಮಾಡಿಕೊಂಡರು. ಒಂದು ವಿಶೇಷವಾದಂತಹ ಸಿನೆಮಾ ಮಾಡಲು ಹೊರಟಿದ್ದೇವೆ, ಭೂಗತ ಲೋಕ ಹಾಗೂ ಲೇಖನಿ ಬಗ್ಗೆ ಹೊಂದಾಣಿಕೆ ಮಾಡಿ ಹೇಳಿದ್ರು.

ನನ್ನ ಪಾತ್ರ ನಾನು ಹೇಳಿದರೆ ಸರಿಯಾಗಿರಲ್ಲ ನಿರ್ದೇಶಕರು ಹೇಳಬೇಕು ಆದರೂ ಕೆಲವೊಂದು ಕ್ಲೂ ಕೊಟ್ಟರು, ನೆಗೆಟೀವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತೇನೆಂದು ಅಭಿಜಿತ್ ಪಾತ್ರದ ಗೌಪ್ಯತೆ ಕಾಪಾಡಿಕೊಂಡರು. ಇಲ್ಲಿಯವರೆಗೂ ಸಿಕ್ಕಿದಂತಹ ರೋಲ್ ನಲ್ಲಿ ಇರುತ್ತೇನೆಂದು ಕಾಕ್ರೋಚ್ ಸುಧಿ ನಕ್ಕರು.news_1792067557_0_901.webp

     ಇಲ್ಲಿನ ಐದು ಸಾವಿರ ಅಲ್ಲಿನ ಜನಕ್ಕೆ ಇಪ್ಪತ್ತು ಸಾವಿರ ಇದ್ದಂತೆ. ಡಿಲಿವರಿ ಬಾಯ್ ಆಗಿದ್ದ ಸಂಜೀವ್, ನಿರ್ದೇಶಕರಾಗಿರುವುದು ಸಂತಸ ತಂದಿದೆ. ನಮ್ಮವರು ಬದುಕು ಹರಸಿಕೊಂಡು ಇಲ್ಲಿಗೆ ಬಂದು ನಂತರ ಸಿನಿಮಾರಂಗಕ್ಕೆ ಬರುತ್ತಾರೆ. ಇವರೆಲ್ಲರೂ ಆ ಭಾಗದವರಾಗಿದ್ದು, ಎಲ್ಲರಿಗೂ ಒಳ್ಳೆಯದಾಗಲೆಂದು ಅತಿಥಿಯಾಗಿ ಬಂದಿದ್ದ ನಟ ನವೀನ್ ಶಂಕರ್ ಹೇಳಿದರು.

ಸಿನೆಮಾ ಉದ್ಘಾಟನಾ ಸಮಾರಂಭಕ್ಕೆ ಇಡೀ ಗೋಕಾಕ್ ನ ಕೊಪ್ಪದ್ ಮಂದಿ ಆಗಮಿಸಿ ಚಿತ್ರ ತಂಡಕ್ಕೆ ಶುಭಾಷಯ ತಿಳಿಸಿ ಅಭಿನಂದಿಸಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆಸಚಿವ ಮಧು ಬಂಗಾರಪ್ಪರನ್ನು ಭೇಟಿಯಾದ ನಟ ಆರ್. ದೇವರಾಜ್ ಕುಟುಂಭರಾಜ್ಯದಲ್ಲಿ 4,500 ಕೋಟಿ ವೆಚ್ಚದಲ್ಲಿ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ  ಸಿದ್ದ: ಮಧುಬಂಗಾರಪ್ಪಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಜನರು ಬೆಲೆ ತೆರಬೇಕೇ? –ಜಗದೀಶ್ ವಿ. ಸದಂಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳಿಂದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಡಿಜಿಪಿಗೆ ಪತ್ರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಎಸ್‌ಐಆರ್ ರದ್ದತಿ, ಮತದಾರರ ಮರುಸೇರ್ಪಡೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಗ್ರಂಥ ಕೇವಲ ಪುಸ್ತಕವಲ್ಲ ರೌಡಿಸಂ ಆದಾರಿತಕಥೆಮ್ಯಾಗ್ನೆಟ್ ಹಾಸ್ಪಿಟಲ್ ನಿಂದ ದಾದಿಯರ ದಿನ, ಗೋಲ್ಡನ್ ಅವರ್ ರೆಕಗ್ನಿಷನ್ ಅಭಿಯಾನಕ್ಕೆ ಚಾಲನೆಸಿದ್ದು ಕೋಟೆಗೆ ಜಮೀರ್ ಎಂಟ್ರಿಯಾದರು!