LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿ ಹನುಮಂತನಗರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಬಾಲಗಂಗಾಧರ್ ಅವರಿಗೆ ಅಭಿನಂದನೆ

ಬೆಂಗಳೂರು: ಅದೋಗತಿಗೆ ಹೋಗಿದ್ದ ದಿ ಹನುಮಂತನಗರ ಸಹಕಾರಿ ಬ್ಯಾಂಕ್ ಅನ್ನು ಹಲವರ ಪರಿಶ್ರಮದಿಂದ ಅಭಿವೃದ್ದಿಯತ್ತ ಕೊಂಡೊಯ್ದ ಹೆಗ್ಗಳಿಕೆ ಸಹಕಾರಿ ಅದಸ್ಯರಿಗೆ ಸಲ್ಲಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.


ಎನ್ ಆರ್ ಕಾಲೋನಿಯಲ್ಲಿರುನ ಅಶ್ವತ್ ಕಲಾಭವನದಲ್ಲಿ ದಿ ಹನುಮಂತನಗರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಹಾಗೂ 77ನೇ ಅಖಿಲ ಕರ್ನಾಟಕ ಸಹಕಾರಿ ಪ್ರಶಸ್ತಿ ಪುರಸ್ಕ್ರುತ  ಸಿವಿ ಬಾಲಗಂಗಾಧರ್ ಅವರ ಅಭಿನಂದನ ಸಮಾರಂಭದ ಕಾರ್ಯಕ್ರಮ ಉದ್ಘಾಟನೆ ಮಾಡಿ ಡಾ.ನಲ್ಲೂರು ಪ್ರಸಾದ್ ಮಾತನಾಡಿ, ಜನತೆಗೆ ದಿ ಹನುಮಂತನಗರ ಸಹಕಾರಿ ಬ್ಯಾಂಕ್ ಸಾಕಷ್ಟು ಸಹಾಯಗಳನ್ನು ಮಾಡಿಕೊಂಡು ಬರುತ್ತಿದೆ. ಸಹಕಾರಿ ಬ್ಯಾಂಕ್ ಗಳು ಕೇವಲ ಬ್ಯಾಂಕಾಗಿ ಅಲ್ಲ ಅವೆಲ್ಲಕ್ಕಿಂತ ಬ್ಯಾಂಕ್ ಕಷ್ಟ ಸುಖಗಳನ್ನು ಅರ್ಥಮಾಡಿಕೊಳ್ಳುವ ಸಂಸ್ಥೆಯಾಗಿದೆ. ಪ್ರಸ್ತುತ ಬ್ಯಾಂಕಿನ ಅಧ್ಯಕ್ಷರಾದ ಸಿವಿ ಬಾಲಗಂಗಾಧರ್ ಅವರು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದರು.


ನಾನು ಇದೇ ಬಡಾವಣೆಯಲ್ಲಿ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಬ್ಯಾಂಕನ್ನು ನಿತ್ಯ ನೋಡುತ್ತಿದ್ದೆ, ದಿ ಹನುಮಂತನಗರ ಸಹಕಾರಿ ಬ್ಯಾಂಕ್ ಕಡೆ ಒಲವಿತ್ತು, ಅದೇನೆಂದರೆ ಏನಾದರೂ ಮಾಡಿ ಸಾಲ ತೆಗದುಕೊಳ್ಳಬೇಕೆಂದು ಹಾಸ್ಯ ಚಟಾಕಿ ಸಿಡಿಸಿದರು. ಬ್ಯಾಂಕ್ ಜನತೆಗೆ ಸಾಲ ಸೌಲಭ್ಯದ ಜೊತೆ ಸಾಕಷ್ಟು ಜನೋಪಯೋಗಿ  ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಶ್ಲಾಗಿಸಿದರು.


ಪತ್ರಕರ್ತ ಪಿ ತ್ಯಾಗರಾಜ್ ಮಾತನಾಡಿ, ಹನುಮಂತನಗರ ಕೋಪರೇಟೀವ್ ಬ್ಯಾಂಕ್ ಹುಟ್ಟಿದಾಗ ನಾನು ಅದೇ ದಿನ ಹುಟ್ಟಿದ್ದೆ, ಬ್ಯಾಂಕ್ ನ ಏಳು ಬೀಳುಗಳನ್ನು ನೋಡಿದ್ದೇನೆ ಅಭಿವೃದ್ದಿಯನ್ನು ನೋಡಿದ್ದೇನೆ. ಅದೋಗತಿಗೆ ಹೋಗಿದ್ದ ಬ್ಯಾಂಕ್ ಬಗ್ಗೆ ಲೇಖನವನ್ನು ಸಹಾ ಅಂದು ಪತ್ರಿಕೆಯಲ್ಲಿದ್ದಾಗ ನಾನೇ ಬರೆದಿದ್ದೆ, ಇದೀಗ ಎಲ್ಲವೂ ಸರಿಯಾಗಿ ಉತ್ತಮವಾಗಿ ಎದ್ದು ನಿಲ್ಲುವಂತೆ ಮಾಡಿರುವುದು ಬ್ಯಾಂಕಿನ ಸಹಕಾರಿಗಳು ಮಾಡಿದ್ದಾರೆ. ಬ್ಯಾಂಕಿನ ಸದಸ್ಯರೆಲ್ಲರೂ  ಸೇರಿಕೊಂಡು ಬ್ಯಾಂಕ್ ಕಟ್ಟಿ ಬೆಳೆಸಿದ್ದಾರೆ. ಅಧ್ಯಕ್ಷ ಬಾಲಗಂಗಾಧರ್ ಅವರು 20-25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಬ್ಯಾಂಕ್  ಕೇವಲ ಲೇವಾದೇವಿಯಿಂದ ಅಳೆಯುವುದರ ಬದಲಿಗೆ ಠೇವಣಿ ಹಣ ಹೇಗುದೆ ಎಂಬುದು ಬಹಳ ಮುಖ್ಯ ಎಂದರು. ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.


ಸಹಕಾರ ಇಲಾಖೆಯ ಉಪ ನಿಬಂಧಕರಾದ ಸಲೀಂ ಮಾತನಾಡಿ, ಈ ಭಾರಿ ಸಹಕಾರ ಸಪ್ತಾಹ ಮಾಡುವಾಗ ನನಗೆ ಎರಡು ಆಯ್ಕೆಗಳು ಬಂದವು, ಅದರಲ್ಲಿ ಸಹಕಾರಿ ರಂಗದಲ್ಲಿ 28 ವರ್ಷಗಳ ಸುದೀರ್ಗ ಸೇವೆ ಸಲ್ಲಿಸಿದ ಬಾಲಗಂಗಾಧರ ಅವರನ್ನು ಉತ್ತಮ ಸಹಕಾರಿಗೆ ಶಿಫಾರಸ್ಸು  ಮಾಡಲಾಯಿತು. ಸಹಕಾರ ತತ್ವದ ಆದರದ ಮೇಲೆ ಸಹಕಾರಿ ಸಂಸ್ಥೆ ನಡೆಯಬೇಕು. ಅದು ಸಹಕಾರಿಯ ದ್ವೇಯೊದ್ದೇಶವಾಗಿದೆ. ಬ್ಯಾಂಕ್   ಕೋಟಿ ರೂಪಾಯಿಗಳಷ್ಟು ಠೇವಣಿ ಹೊಂದಿದೆ. ಬ್ಯಾಂಕ್ ಸದಸ್ಯರಿಗೆ ನಿಷ್ಟೆಯಿಂದ ಕೆಲಸ ಕಾರ್ಯ ಮಾಡುವ ಶಕ್ತಿ ನೀಡಲಿ ಎಂದು ಆಶಿಸಿದರು. ನಾವೆಲ್ಲರೂ ಸಹಕಾರಿ ತತ್ವದ ಅಡಿಯಲ್ಲಿ ಕೈಜೋಡಿಸುವುದು ಬಹಳ ಮುಖ್ಯವಾಗಿದೆ. ಅದನ್ನು ಮಾಡಿದಾಗ ಸಹಕಾರಿ ಬ್ಯಾಂಕ್ ಗಳು ಅಭಿವೃದ್ದಿಯಾಗುತ್ತದೆ ಎಂದು ತಿಳಿಸಿದರು.


ಅಭಿನಂದನೆ ಸ್ವೀಕರಿಸಿದ ಸಿವಿ ಬಾಲಗಂಗಾಧರ್ ಮಾತನಾಡಿ, ಬ್ಯಾಂಕ್ ನ ಸದಸ್ಯರಿಂದ ಯಾವುದೇ ಗೊಂದಲವಿಲ್ಲದೆ RBI ಸಲಹೆಗಳ ಮೇಲೆ ನಡೆದುಕೊಂಡು ಬಂದಿದ್ದೇವೆ. ಸದಸ್ಯರಿಗೆ, ಸಾರ್ವಜನಿಕರಿಗೆ  ಹಲವು ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಬೆಂಗಳೂರಿನಲ್ಲಿ 2-3 ಶಾಖೆ ತೆರೆಯುವ ಆಲೋಚನೆ ಇದೆ, ಅವುಗಳಿಗೆ ಅನುಮೋದನೆ ಸಿಗಬೇಕಿದೆ ಎಂದರು.


ಅದೇ ರೀತಿ ಬೆಂಗಳೂರು ಗ್ರಾಮಾಂತರ ಕನಕಪುರ, ರಾಮನಗರದಲ್ಲಿ ಬ್ಯಾಂಕ್ ಮಾಡಲು ಬ್ಯಾಂಕ್ ಉತ್ಸುಕವಾಗಿದೆ, RBI ಬ್ಯಾಂಕ್ ಅನುಮತಿ ಬೇಕಾಗಿದೆ ಅನುಮತಿ ಸಿಕ್ಕಿದ ಬಳಿಕ ಆಡಳಿತ ಮಂಡಲಿ ಜೊತೆ ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದರು. ಸಹಕಾರಿ ತತ್ವದ ಅಡಿಯಲ್ಲಿ ಎಲ್ಲರೂ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.


ಇದೇ ವೇಳೆ ಬಾಲಗಂಗಾಧರ್ ಅಭಿಮಾನಿಗಳು,ಬ್ಯಾಂಕ್ ಸದಸ್ಯರು ಅಭಿನಂದನೆ,ಶುಭಾಷಯ ಕೋರಿದರು.  ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಶ್ರಿನಿವಾಸ್ ಹುಚ್ಚಯ್ಯ, ರಾಷ್ಟಪ್ರಶಸ್ತಿ ವಿಜೇತ ಮಹೇಶ್ ಸುಖಧರೆ, ಹಾಲಿ ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರಾದ ಕೆ ಎಂ ನಾರಾಯಣ್ , ಪಾಲಿಕೆ ಮಾಜಿ ಪೌರರಾದ ಕಟ್ಟೆ ಸತ್ಯನಾರಾಯಣ, ಬ್ಯಾಂಕ್ ನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ