ಬೆಂಗಳೂರು: ಸಮ್ಯಕ್ ಪ್ರತಿಷ್ಠಾನಮ್ ವತಿಯಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಲಕ್ಷ್ಮಿ ಭುವರಹ ಸ್ವಾಮಿ ಸಾಲಿಗ್ರಾಮ ಕ್ಷೇತ್ರದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶ್ರೀ ಮಹರ್ಷಿ ಆನಂದ ಗುರೂಜಿ ಅವರು ವಹಿಸಿದರು, ಇನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸಂಸ್ಕೃತ ಪ್ರಾಧ್ಯಾಪಕರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಸಿ ಶಿವಕುಮಾರ್ ಸ್ವಾಮೀ ಅವರು ವಹಿಸಿದರು, ಇನ್ನು ಪ್ರತಿಷ್ಠಾನಮ್ ನ ಅಧ್ಯಕ್ಷರಾದ ಸತೀಶ್ ಎಂಆರ್ ರವರು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಸಮ್ಯಕ್ ಪ್ರತಿಷ್ಠಾನಮ್ ವತಿಯಿಂದ ಪ್ರತಿವರ್ಷ ಕೂಡ ಮಾಡಲಾಗುವ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನವನ್ನು 15 ಜನರಿಗೆ ಆನಂದ ಗುರೂಜಿ ಅವರು ಪ್ರದಾನ ಮಾಡಿ ಮಾತನಾಡಿದ ಅವರು, ಹಲವು ಭಾಷೆ ಗಳಲ್ಲಿಯೇ ಸಂಸ್ಕೃತ ಭಾಷೆ ಸಾಕಷ್ಟು ಮನ್ನಣೆಯನ್ನು ಪಡೆದುಕೊಂಡಿದ್ದು, ಸಂಸ್ಕೃತ ಭಾಷೆಯನ್ನು ಮಾತನಾಡುವರ ಸಂಖ್ಯೆ ವಿರಳಾತಿ ವಿರಳವಾಗಿದ್ದು ಅದರಲ್ಲಿಯೂ ಸಹ ರಾಜ್ಯದ ಕೇವಲ ಒಂದು ಭಾಗದಲ್ಲಿ ಮಾತ್ರ ಸಂಸ್ಕೃತವನ್ನು ಮಾತನಾಡುತ್ತಿದ್ದಾರೆ. ಇಂತಹ ಶ್ರೇಷ್ಠವಾದಂತಹ ಕಾರ್ಯಕ್ರಮಕ್ಕೆ ನಾನು ಭಾಗಿಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯವೆಂದೇ ಭಾವಿಸಿದ್ದೇನೆ ಎಂದರು.
ಇಡೀ ಕಾರ್ಯಕ್ರಮದ ಉದ್ದಕ್ಕೂ ಪದಾಧಿಕಾರಿಗಳು ಹಾಗೂ ಸಾಧಕರು ಸಂಸ್ಕೃತ ಭಾಷೆಯನ್ನೇ ಮಾತನಾಡಿರುವುದು ಮತ್ತಷ್ಟು ಹೆಗ್ಗಳಿಕೆಯ ವಿಚಾರವಾಗಿದೆ, ಸಂಸ್ಕೃತ ಭಾಷೆಯ ಮೇಲಿರುವ ಪ್ರೀತಿ ವಿಶ್ವಾಸ ಎದ್ದು ತೋರಿಸುತ್ತದೆ ಎಂದರು.
ಸಂಸ್ಕೃತ ಭಾಷೆಯ ಮಹತ್ವದ ಬಗ್ಗೆ ಪುರಾಣ ಪುಣ್ಯಕಾಲದಿಂದಲೂ ಸಹ ಸಂಸ್ಕೃತ ಭಾಷೆಗೆ ಸಾಕಷ್ಟು ಮನ್ನಣೆಯನ್ನು ಕೊಡಲಾಗುತ್ತದೆ, ಸಂಸ್ಕೃತ ಭಾಷೆ ನನಗೂ ಸಹ ಇಷ್ಟವಾಗಿದೆ, ಕಲಿಯುವ ಹಂಬಲವೂ ಸಹ ಇದೆ, ಮುಂದಿನ ಕಾರ್ಯಕ್ರಮದಲ್ಲಿ ನಾನು ಸಂಸ್ಕೃತ ಭಾಷೆಯನ್ನು ಕಲಿಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸ್ಕೃತ ಭಾಷೆ ಅರ್ಥಗರ್ಭಿತವಾಗಿದ್ದು ಮಾತನಾಡುವುದೇ ಒಂದು ಪುಣ್ಯದ ಕೆಲಸ, ಭಾಷೆ ಕಲಿಯುವುದು ಸಾಮಾನ್ಯ ಆದರೆ ಸಂಸ್ಕೃತ ಭಾಷೆಯನ್ನು ಬಹಳಷ್ಟು ಮಂದಿ ಮಾತನ್ನು ಆಡುವುದು ಹಾಗೂ ಕಲಿಯದೇ ಇರುವುದು ದುರಂತದ ಸಂಗತಿ ಯಾಗಿದೆ. ವೇದ ಉಪನಿಷತ್ ಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಅಳವಡಿಸಲಾಗಿದೆ.
ಸಂಸ್ಕೃತ ಭಾಷೆ ಇತಿಹಾಸ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಸಮ್ಯಕ್ ಪ್ರತಿಷ್ಠಾನಮ್ ವತಿಯಿಂದ ಮಾಡಲಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ರಾಜ್ಯದ ಮೂಲೆ ಮೂಲೆಗಳಿಂದ ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಪಡೆದಿರುವವರನ್ನು ಗುರುತಿಸಿ ಪ್ರತಿಷ್ಠಾನಮ್ ವತಿಯಿಂದ ಪ್ರತಿ ವರ್ಷ ಕೊಡುತ್ತಿರುವ ಸಂಸ್ಕೃತಿ ಶ್ರೀ: ಪ್ರಶಸ್ತಿ ಸಾಕಷ್ಟು ಮುನ್ನಣೆ ಗಳಿಸಿದೆ ಎಂದರು. ಇಂತಹ ಪ್ರಶಸ್ತಿಗಳು ಸಾಧಕರಿಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದಂತಾಗಿದೆ.
ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಸ್ಕೃತ ಪ್ರಾಧ್ಯಾಪಕರು ಮತ್ತು ನಿವೃತ್ತ ಪ್ರಾಂಶುಪಾಲರಾದ ಡಾ. ಸಿ ಶಿವಕುಮಾರ್ ಸ್ವಾಮಿ ಅವರು ಮಾತನಾಡಿ, ಸಂಸ್ಕೃತ ಭಾಷೆಗೆ ತನ್ನದೇ ಆದಂತಹ ಹಿರಿಮೆ ಗರಿಮೆ ಇದೆ, ಕಾರ್ಯಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಕರೆದು ಪ್ರಶಸ್ತಿ ನೀಡಿ ಗೌರವಿಸಿರುವುದು ಮತ್ತಷ್ಟು ಗೌರವ ಕೊಟ್ಟಂತಾಗಿದೆ ಎಂದು ಭಾವಿಸಿದರು. ಸರ್ವೇಸಾಮಾನ್ಯವಾಗಿ ಸಂಸ್ಕೃತ ಭಾಷೆ ಹಾಗೂ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರಶಸ್ತಿಗಳು ಕಾರ್ಯಕ್ರಮಗಳು ನಡೆಯುವುದು ಬಹಳಷ್ಟು ವಿರುಳ. ಅದರಲ್ಲಿ ಸಂಸ್ಕೃತದಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರಶಸ್ತಿಗಳು ಕೊಡುತ್ತಿರುವುದು ಮತ್ತಷ್ಟು ಹೆಮ್ಮೆಯ ಸಂಗತಿಯಾಗಿದೆ . ಕಳೆದ ಬಾರಿ ವಾರಣಾಸಿಯಲ್ಲಿ ನಡೆದ ದಕ್ಷಿಣ ಭಾರತದ ಬೃಹತ್ ಸಂಸ್ಕೃತ ಸಮಾವೇಶದಲ್ಲಿ ನನಗೆ ಪ್ರಶಸ್ತಿ ಲಭಿಸಿರುವುದು ಅತಿಯಾದಂತಹ ಸಂತೋಷವಾಯಿತು.
ಸಮ್ಯಕ ಪ್ರತಿಷ್ಠಾನದಿಂದ ನನಗೆ ಜೀವಮಾನದಲ್ಲಿ ಎರಡನೇ ಪ್ರಶಸ್ತಿ ಬರುತ್ತಿರುವುದು ಮತ್ತಷ್ಟು ಹೆಗ್ಗಳಿಕೆಯ ಹಾಗೂ ಪ್ರಸಂಶೆಮಿಯ ವಿಚಾರವಾಗಿದೆ ಎಂದರು.
ಸಮ್ಯಕ್ ಪ್ರತಿಷ್ಠಾನಮ್ ವತಿಯಿಂದ ಪ್ರತಿ ವರ್ಷ ಸಂಸ್ಕೃತದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಮಹತ್ಕಾರ್ಯದ ಕೆಲಸವನ್ನು ಸಂಸ್ಥೆಯು ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು. ಸಂಸ್ಕೃತ ಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದರು.
ಸಂಸ್ಕೃತ ಭಾಷೆಯಲ್ಲಿ ಪ್ರಾವಿಣ್ಯತೆ ಪಡೆದ ಸುಮಾರು 15 ಜನರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರಧಾನವನ್ನು ಪ್ರತಿಷ್ಠಾನ ವತಿಯಿಂದ ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಪ್ರತಿಷ್ಠಾನಮ್ ನ ವೀರಭದ್ರ, ಬಸವರಾಜ್ ಕುಂಬಾರ, ಸದಾಶಿವ, ಅರುಣ ಕುಮಾರ್ ಕೃಷ್ಣಮೂರ್ತಿ, ನಿರಂಜನ್, ಬಸಪ್ಪ ಡೊಂಕಬಳ್ಳಿ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಸಂಸ್ಕೃತ ಅಧ್ಯಾಪಕರು ಹಿತೈಷಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.