ಬೆಂಗಳೂರು: ನಾಗಾವರದ ಮನೋ ಕನ್ವೆನ್ಸನ್ ಸೆಂಟರ್ (Manpho Convention Centre)ನಲ್ಲಿ ನವಂಬರ್ 30, ನಡೆಯಲಿರುವ ಸಂಜಿತ್ ಹೆಗ್ಡೆ ಅವರ ಅತ್ಯಂತ ನಿರೀಕ್ಷೆಯ ನೇರ ಪ್ರಸಾರ ಸಂಗೀತ ಕಚೇರಿಗಾಗಿ ಹೆಲ್ ಎನರ್ಜಿ ಡ್ರಿಂಕ್ ಸಿದ್ಧವಾಗುತ್ತಿದ್ದಂತೆಯೇ ತನ್ನ ಉತ್ಸಾಹವನ್ನು ಹೆಚ್ಚಿಸಿಕೊಳ್ಳಲು ಬೆಂಗಳೂರು ಸಜ್ಜಾಗುತ್ತಿದೆ.
ಪ್ರಾಯೋಜಕ ಮತ್ತು ವಿಶೇಷ ಎನರ್ಜಿ ಡ್ರಿಂಕ್ ಸಹಯೋಗಿ ಶಕ್ತಿಯಾಗಿ ಹೆಲ್ ಎನರ್ಜಿ ಡ್ರಿಂಕ್, ಕರ್ನಾಟಕದ ಸಂಗೀತ ಪರಿಸರದ ನೇರವಾಗಿ ತನ್ನ ಹೆಗ್ಗುರುತಿನ ಪಾನೀಯದಿಂದ ವಿದ್ಯುತ್ ಸಂಚಲನ ಉಂಟುಮಾಡುತ್ತಿದೆ .
ಈ ಸಹಭಾಗಿತ್ವವು ಕೇವಲ ಒಂದು ಪ್ರಾಯೋಜನವಲ್ಲ; ಇದೊಂದು ಹೇಳಿಕೆ ಸಹ ಆಗಿದೆ. ಸಂಗೀತ, ಸಂಸ್ಕೃತಿ ಹಾಗೂ ಸೃಜನಶೀಲತೆಯ ಮೇಲೆ ಬದುಕುವ ಯುವ, ಚುರುಕಿನ ಪ್ರೇಕ್ಷಕರ ಬೆಂಬಲದಿಂದ ಮುಂದುವರಿದಿರುವ ಕರ್ನಾಟಕವು, ಹೆಲ್ ಎನರ್ಜಿ ಡ್ರಿಂಕ್‌ನ ಅತ್ಯಂತ ಕೌತುಕಮಯವಾದ ಬೆಳವಣಿಗೆ ಮಾರುಕಟ್ಟೆಗಳ ಪೈಕಿ ಒಂದಾಗಿ ಬೆಳೆದಿದೆ. ಈ ಪ್ರದೇಶದ ಅತ್ಯಂತ ನೆಚ್ಚಿನ ಕಂಠಗಳ ಪೈಕಿ ಒಂದಾದ ಸಂಜಿತ್ ಹೆಗ್ಡೆ ಅವರೊಡನೆ ಸಹಯೋಗ ಏರ್ಪಡಿಸಿಕೊಳ್ಳುವ ಮೂಲಕ ಹೆಲ್ ಎನರ್ಜಿ ಡ್ರಿಂಕ್, ಸ್ಥಳೀಯ ಯುವಜನರೊಂದಿಗೆ ನೈಜ, ಸ್ಥಿರ ಮತ್ತು ನಿರ್ವಿವಾದವಾಗಿ ಹೆಚ್ಚಿನ ಚೈತನ್ಯದಿಂದ ಕೂಡಿರುವ ಅನುಭವಗಳ ಮೂಲಕ ಸಂಪರ್ಕಗೊಳ್ಳುವ ತನ್ನ ಧೈಯವನ್ನು ಇನ್ನಷ್ಟು ಬಲಪಡಿಸುತ್ತದೆ. ಸ್ಥಳದಾದ್ಯಂತ ಬ್ರಾಂಡ್ ಗೋಚರತೆ ಅಸ್ತಿತ್ವ ಮತ್ತು ಕಲಾವಿದ ಸಂಯೋಜನೆಯೊಂದಿಗೆ ಬ್ರಾಂಡ್, ತನ್ನ ಗ್ರಾಹಕರ ಮನಸ್ಸುಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಬಿಡುವ ಮೂಲಕ ಈ ಕಚೇರಿಯನ್ನು ವರ್ಧಿಸಲಿದೆ.
ಇದರ ಜೊತೆಗೆ, ಎಲ್ಲಾ ಕಾರ್ಯಕ್ರಮ ಬಾರ್ ಗಳಲ್ಲೂ ಹೆಲ್ ಎನರ್ಜಿ ಡ್ರಿಂಕ್ ಅಧಿಕೃತ ಎನರ್ಜಿ ಡ್ರಿಂಕ್ ಆಗಿ ಲಭ್ಯವಿರುವುದರಿಂದ, ರಾತ್ರಿಯುದ್ದಕ್ಕೂ ಅಭಿಮಾನಿಗಳು ಅನುಭವಿಸುವ ಪ್ರತಿಯೊಂದು ತಾಳ, ಕಂಪನ ಮತ್ತು ಕ್ಷಣದ ಭಾಗವಾಗಿರಲಿದೆ ಬ್ರಾಂಡ್. ಹೊಸ ಯುಗದ ಸಂಗೀತ ಚಲನೆಯ ಧ್ವನಿಯಾಗಿ ಹೊರಹೊಮ್ಮಿರುವ ಸಂಜಿತ್, ಹೆಲ್ ಎನರ್ಜಿ ಡ್ರಿಂಕ್ ತಾನು ಆಚರಿಸಲು ಬಯಸುವಂತಹ, ಹೆಚ್ಚಿನ ಕಂಪನ, ಉತ್ಕಟತೆ ಹಾಗೂ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾವಿದರ ಪ್ರಾದೇಶಿಕ ನಿಖರ ಪ್ರತಿಭೆಯ ಸಾಕಾರವಾಗಿದ್ದಾರೆ.
ಹೆಲ್ತ್ಬಡ್ರಿಂಕ್ಸ್ ಮೂಲಕ ಸಂಗೀತ ರಸದೌತಣ
ಹೆಲ್ ಎನರ್ಜಿ ಡ್ರಿಂಕ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೆಶಕ ಉನ್ನಿಕಣ್ಣನ್ ಗಂಗಾಧರನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, "ಹೆಲ್ ಎನರ್ಜಿ ಡ್ರಿಂಕ್‌ನಲ್ಲಿ ನಾವು ಯಾವಾಗಲೂ ಉತ್ಕಟತೆ, ಕಾರ್ಯಕ್ಷಮತೆ ಹಾಗೂ ಯುವ ಸಂಸ್ಕೃತಿಗೆ ಬೆಂಬಲ ನೀಡುತ್ತೇವೆ. ಕರ್ನಾಟಕವು ನಮಗೆ ಅಧಿಕ ಬೆಳವಣಿಗೆಯ ಮಾರುಕಟ್ಟೆಯಾಗಿದೆ. ಇಂದಿನ ಪ್ರಾದೇಶಿಕ ಯುವಜನರ ನಾಡಿಯನ್ನು ವಿವರಿಸುವ ಕಲಾವಿದರಾಗಿ ಸಂಜಿತ್, ನಾವು ನಮ್ಮ ಸಾಂಸ್ಕೃತಿಕ ಸಂಬಂಧವನ್ನು ಹೆಚ್ಚು ಅರ್ಥಪೂರ್ಣ ರೀತಿಯಲ್ಲಿ ಬೆಸೆಯುವಲ್ಲಿ ನೆರವಾಗಲಿದ್ದಾರೆ. ಸಂಗೀತ ಎಲ್ಲರನ್ನೂ ಒಗ್ಗೂಡಿಸುತ್ತದೆ ಮತ್ತು ಈ ಸಹಯೋಗವು, ನಮ್ಮ ಯುವ ಪ್ರೇಕ್ಷಕರೊಡನೆ ಅವರ ಜೀವನ ಶೈಲಿ ಹಾಗೂ ಶಕ್ತಿಯನ್ನು ನೈಜವಾಗಿ ಪ್ರತಿಬಿಂಬಿಸುವ ಅನುಭವದ ಮೂಲಕ ನಮ್ಮೊಂದಿಗೆ ತೊಡಗಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ." ಎಂದು ಹಂಚಿಕೊಂಡರು.
ಸಂಜಿತ್ ಹೆಗ್ಡೆ ಅವರು, "ಬೆಂಗಳೂರಿನಲ್ಲಿ ಪ್ರದರ್ಶನ ನೀಡುವುದೆಂದರೆ ಯಾವಾಗಲೂ ಮನಗೆ ಹಿಂದಿರುಗಿ ಬಂದಂತೆ. ಇಲ್ಲಿನ ಶಕ್ತಿಗೆ ಯಾವುದೂ ಸರಿಸಾಟಿ ಇಲ್ಲ ಮತ್ತು ಈ ನಗರದೊಡನೆ ನಾನು ಹಂಚಿಕೊಳ್ಳುವ ಸಂಬಂಧವು ನಿಜವಾಗಿಯೂ ವಿಶೇಷವಾದುದು. ಈ ಕಚೇರಿಗಾಗಿ ಹೆಲ್ ಎನರ್ಜಿ ಡ್ರಿಂಕ್‌ನೊಡನೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವ ಅನುಭವವನ್ನು ಬೇರೆಯೇ ಒಂದು ಹೊಸ ಮಟ್ಟಕ್ಕೆ ಕೊಂಡೊಯ್ಯಲಿದ್ದು, ಎಲ್ಲರೂ ನೆನಪಿಟ್ಟುಕೊಳ್ಳುವಂತಹ ರಾತ್ರಿಯೊಂದನ್ನು ಸೃಷ್ಟಿಸಲು ನಾವು ಸಿದ್ಧರಿದ್ದೇವೆ. ನನ್ನ ಜನರಿಗಾಗಿ ಪ್ರದರ್ಶನ ನೀಡುವುದನ್ನು ನಾನು ಕಾತರದಿಂದ ಎದುರುನೋಡುತ್ತಿದ್ದೇನೆ; ಅದನ್ನು ನಾವು ಅವಿಸ್ಮರಣೀಯಗೊಳಿಸೋಣ.” ಎಂದು ತಮ್ಮ ಮಾತುಗಳನ್ನು ಸೇರಿಸಿದರು.
ನೇರ ಕಚೇರಿಯು, ಶಕ್ತಿಶಾಲಿಯಾದ ಸಂಗೀತ ಮತ್ತು ಮನರಂಜನೆಯ ಅವಿಸ್ಮರಣೀಯ ಆಚರಣೆಯ ಭರವಸೆ ಒದಗಿಸುವ ಮೂಲಕ ಸಾವಿರಾರು ಅಭಿಮಾನಿಗಳನ್ನು ಒಟ್ಟಿಗೆ ತರಲಿದೆ. BookMyShow ದಲ್ಲಿ ಟಿಕೇಟುಗಳು ಲಭ್ಯವಿವೆ.