LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯೇಂದ್ರಗೆ ಪ್ರಿಯಾಂಕಾ ಕುಟುಂಬದ ಬಗ್ಗೆ ಅವಲತ್ತು ಭೌತಿಕ ದಿವಾಳಿಕೆ ಕಾರಣ!

ಬೆಂಗಳೂರು: ಕರ್ನಾಟಕ ಬಿಜೆಪಿ ಬಾಲ ಭವನದ ನಾಯಕ ವಿಜಯೇಂದ್ರರವರು ತನ್ನ ಪಟಾಲಾಂ ಜೊತೆ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಶ್ರೀ ಪ್ರಿಯಾಂಕ ಖರ್ಗೆ ಮತ್ತು ಅವರ ಕುಟುಂಬದ ಮೇಲೆ ಅವಲತ್ತುಕೊಂಡಿರುವುದು ಅವರ ಬೌದ್ಧಿಕ ದಿವಾಳಿತನದ ಸಾಕ್ಷಿಯಾಗಿರುತ್ತದೆ. ಕರ್ನಾಟಕದ ಬಿಜೆಪಿಗೆ ಮತ್ತು ಸಂಘ ಪರಿವಾರದವರಿಗೆ ತಮ್ಮ ಸಮರ್ಥನೆಗೆ ಇಂತಹ ಬಾಲಂಗೋಚಿ ನಾಯಕರ ಅವಶ್ಯಕತೆ ಬಂದಿರುವುದು ವ್ಯವಸ್ಥೆಯ ದೌರ್ಬಲ್ಯವಾಗಿರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರರವರು ಪ್ರಿಯಾಂಕ ಖರ್ಗೆರವರನ್ನು ಟೀಕಿಸಲು ಮಾಡಿರುವ ಆಲಾಪ ನಗೆ ಪಾಟಲಿನ ಪರಮಾವಧಿ ಆಗಿರುತ್ತದೆ. ತಮ್ಮ ರಾಜಕೀಯ ಅಧಿಕಾರ ಸ್ಥಾನವನ್ನು, ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪದೇ ಪದೇ ದೆಹಲಿಗೆ ದಂಡೆಯಾತ್ರೆ ಮಾಡುತ್ತಿರುವ ವಿಜಯೇಂದ್ರರವರಿಗೆ, ಆರ್.ಎಸ್.ಎಸ್ ಸಮರ್ಥಿಸುವ ಅನಿವಾರ್ಯತೆ ಸೃಷ್ಟಿ ಆಗಿರುವುದು ದೊಡ್ಡ ವಿಪರ್ಯಾಸ. ಮೊದಲು ಆರ್‌.ಎಸ್‌.ಎಸ್ ನವರು ಇವರ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಸಮರ್ಥಿಸಲಿ! ನಂತರ ಅವರು ಆರೆಸ್ಸೆಸ್ ಪರವಾದ ಹೇಳಿಕೆಯನ್ನು ನೀಡಲಿ.

ಪ್ರಿಯಾಂಕ ಖರ್ಗೆರವರು ಸೈದ್ಧಾಂತಿಕವಾಗಿ ಸಂಘ ಪರಿವಾರದ ಅಸ್ತಿತ್ವ, ನೋಂದಾವಣೆ ಕಾರ್ಯ ಮತ್ತು ಚಟುವಟಿಕೆಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆರವರು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ತಡ ಬಡಾಯಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ವತಃ ಮೋಹನ್ ಭಾಗವತ್ ರವರನ್ನು ಬೆಂಗಳೂರಿಗೆ ಕರೆತಂದು ಪ್ರಿಯಾಂಕಾ ಖರ್ಗೆರವರ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತದೆ.

ಇಲ್ಲಿಯವರೆಗೆ ಸಂಘ ಪರಿವಾರದ ನೊಂದಾವಣೆಯನ್ನು ಕುರಿತು ಸಮರ್ಪಕವಾದಂತ ಉತ್ತರವನ್ನು ಕೊಡಲು ಅವರಿಗೆ ಸಾಧ್ಯವಾಗಿಲ್ಲ. ಇಂತಹ ಕಟು ಸತ್ಯವನ್ನು ತಿಳಿಯದ ವಿಜಯೇಂದ್ರರವರು, ಬಿಜೆಪಿ ಅಧಿಕರಾದ ಅವಧಿಯಲ್ಲಿ ಅತ್ಯಂತ ಭ್ರಷ್ಟಾಚಾರದ ಆರೋಪವನ್ನು ಸ್ವಪಕ್ಷದಿಂದಲೇ ಎದುರಿಸಿ ಪಲಾಯನ ಗೈದಂತಹ ನಾಯಕ. ಕಳಂಕಿತ ನಾಯಕ ವಿಜಯೇಂದ್ರ ಸಂಘ ಪರಿವಾರದ ಪ್ರತಿಪಾದನೆಗೆ ಅಥವಾ ಸಮರ್ಥನೆಗೆ ನಿಲ್ಲುವ ಮೂಲಕ ಸಂಘ ಪರಿವಾರದ ಮತ್ತೊಂದು ಮುಖವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ!

ಈ ದೇಶದ ಕಾನೂನಿನ ಅನ್ವಯ ಯಾವುದೇ ಸಂಘ ಸಂಸ್ಥೆ ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೊಂದಾವಣೆ ಆಗದ ಸಂಘ ಸಂಸ್ಥೆಯ ಲೆಕ್ಕಪತ್ರಗಳನ್ನು ಅಥವಾ ಹಣಕಾಸು ವ್ಯವಹಾರಗಳನ್ನು ಅನುಮಾನದಿಂದ ನೋಡಲು ಅವಕಾಶವಾಗುತ್ತದೆ. ರಾಷ್ಟ್ರಸೇವೆಯೇ ತನ್ನ ಧ್ಯೇಯವೆಂದು ಸಾರುವ ಸಂಘ ಪರಿವಾರದವರು ಇಲ್ಲಿಯವರೆಗೆ ಶ್ರೀ ಪ್ರಿಯಾಂಕಾ ಖರ್ಗೆರವರ ಮೂಲಬೂತ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗಿಲ್ಲ. ಆದರೆ ವಿಜಯೇಂದ್ರರಂತಹ ಕಳಂಕಿತ ನಾಯಕರನ್ನು ಮುಂದೆ ಇಟ್ಟುಕೊಂಡು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುತ್ತಾರೆ. ಶ್ರೀ ಪ್ರಿಯಾಂಕ ಖರ್ಗೆ ಅವರನ್ನಾಗಲಿ ಅವರ ಕುಟುಂಬವನ್ನಾಗಲಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸುವ ಮೂಲಕ ಸಂಘ ಪರಿವಾರದವರು ತಮ್ಮ ಜವಾಬ್ದಾರಿಯಿಂದ ಪಲಾಯನ ಮಾಡಲು ಸಾಧ್ಯವಿಲ್ಲ.

ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಮಲ್ಲಿಕಾರ್ಜುನ ಖರ್ಗೆರವರು ಏಕಾಂಗಿ ಪ್ರಯತ್ನದ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ತಂದು ಕೊಟ್ಟಿರುತ್ತಾರೆ . ಅದರ ಜೊತೆಗೆ ಆ ಭಾಗದಲ್ಲಿ ಕಾರ್ಮಿಕ ಆಸ್ಪತ್ರೆ, ವಿಶೇಷವಾಗಿ ರೈಲ್ವೆ ಸಂಪರ್ಕಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಜನರಿಗೆ ಉದ್ಯೋಗಗಳ ಅವಕಾಶ ಮುಂತಾದ ಸಾರ್ವಜನಿಕ ಕೆಲಸಗಳಿಗೆ ಬುನಾದಿ ಹಾಕಿ ಇತರ ನಾಯಕರಿಗೆ ಆದರ್ಶಪ್ರಾಯ ರಾಗಿರುತ್ತಾರೆ. ಪ್ರಿಯಾಂಕ ಖರ್ಗೆರವರು ಐಟಿ ಬಿಟಿ ಇಲಾಖೆಯ ಮುಖಾಂತರ ಗ್ರಾಮೀಣಾಭಿವೃದ್ಧಿ ಖಾತೆಯ ಮುಖಾಂತರ ರಾಜ್ಯದ ಅಭಿವೃದ್ಧಿಗೆ ತಾವು ಮಾಡಿರುವ ಸಾಧನೆಯನ್ನು ವಿಧಾನಸಭೆಯ ಅಧಿವೇಶನದಲ್ಲಿ ಅಂಕಿ ಅಂಶಗಳ ಸಮೇತವಾಗಿ ತೆಗೆದಿಟ್ಟಿರುತ್ತಾರೆ.

ತಮ್ಮ ತಂದೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಹಿಯನ್ನು ನಕಲು ಮಾಡಿದ ಆರೋಪವನ್ನು ಹೊತ್ತಿರುವ ವಿಜಯೇಂದ್ರ ಅವರು ಇಂದಿಗೂ ಸಹ ಸಾರ್ವಜನಿಕವಾಗಿ ಉತ್ತರವನ್ನು ನೀಡಿರುವುದಿಲ್ಲ. ನೀರಾವರಿ ಇಲಾಖೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳ ಅವ್ಯವಹಾರ ಕುರಿತು ಅವರದೇ ಪಕ್ಷದ ಶಾಸಕರು ಆರೋಪಗಳನ್ನು ಮಾಡಿದಾಗ ಮನೆ ಸೇರಿದ ವ್ಯಕ್ತಿ ಇದೇ ವಿಜಯೇಂದ್ರರವರು. ವರ್ಗಾವಣೆ ದಂದೆ ಮತ್ತು ಅಕ್ರಮ ಟೆಂಡರ್ ಗಳ ಆರೋಪವನ್ನು ಹೊತ್ತಿದ್ದರು. ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಇವರ ಕುಟುಂಬ ಮಾಡಿರುವ ಆಸ್ತಿಯ ಕುರಿತು ಅವರದೇ ಪಕ್ಷದ ನಾಯಕರಾದ ಶ್ರೀ ಈಶ್ವರಪ್ಪನವರು ಆರೋಪ ಮಾಡಿರುತ್ತಾರೆ. ಕೇವಲ ತಂದೆಯ ಹೆಸರಿನಲ್ಲಿ ರಾಜಕೀಯ ಆಶ್ರಯವನ್ನು ಪಡೆದಿರುವ ವಿಜಯೇಂದ್ರ, ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪದೇಪದೇ ದೆಹಲಿಗೆ ದಂಡಯಾತ್ರೆ ಮಾಡುತ್ತಿದ್ದಾರೆ. ಇವರು ಅಧ್ಯಕ್ಷರಾದ ನಂತರ ಬಿಜೆಪಿಯ ಗುಂಪುಗಾರಿಕೆ ಮಿತಿಮೀರಿರುತ್ತದೆ. ವಿಜಯೇಂದ್ರರವರು ಪ್ರಿಯಾಂಕ ಖರ್ಗೆ ಅವರನ್ನಾಗಲಿ, ಖರ್ಗೆರವರ ಕುಟುಂಬವನ್ನಾಗಲಿ ಅವರ ಸಿದ್ಧಾಂತವನ್ನಾಗಲಿ ಅಥವಾ ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳನ್ನಾಗಲಿ ಪ್ರಶ್ನಿಸುವ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಇವರಿಂದ ನೈತಿಕತೆಯ ಪಾಠ, ಆದರ್ಶದ ಪಾಠ, ಸಿದ್ಧಾಂತದ ಪಾಠ ಹೇಳಿಸಿಕೊಳ್ಳುವ ಅನಿವಾರ್ಯತೆ ಅಥವಾ ಅವಶ್ಯಕತೆ ಖರ್ಗೆರವರ ಕುಟುಂಬಕ್ಕಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಆಗಲಿ ಅಥವಾ ಕರ್ನಾಟಕದ ಜನರಿಗಾಗಲಿ ಇರುವುದಿಲ್ಲ. ವಿಜಯೇಂದ್ರರವರ ಈ ವ್ಯರ್ಥ ಪ್ರಲಾಪವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಮತ್ತು ಸಂಘ ಪರಿವಾರ ಇಂತಹ ನಾಟಕಗಳಿಂದ ಸತ್ಯವನ್ನು ಮುಚ್ಚಲು ಸಾಧ್ಯವೇ ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷ ಹೇಳಲು ಬಯಸುತ್ತದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ