LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೀಘ್ರವೇ ಉರ್ದು ಸೇರಿದಂತೆ ಇತರ ವಿಷಯಗಳ ಶಿಕ್ಷಕರ ನೇಮಕ : ಸಚಿವ ಮಧು ಬಂಗಾರಪ್ಪ

ಬೆಂಗಳೂರು:  ಉರ್ದು ಭಾಷೆ ಸೇರಿದಂತೆ ಈಗ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಬಿಟ್ಟುಹೋಗಿರುವ ವಿಷಯಗಳ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ  ಇನ್ನೊಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪ್ರಕಟಿಸಿದ್ದಾರೆ.news_1787653131_0_996.webp

“ಉರ್ದು ಸೇರಿದಂತೆ, ಇನ್ನೂ ನೇಮಕವಾಗಬೇಕಾಗಿರುವ ವಿಷಯಗಳ ಶಿಕ್ಷಕರ ನೇಮಕಾತಿಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಅನುಮತಿಗಾಗಿ ಕಳುಹಿಸಲಾಗಿದ್ದು, ಆರ್ಥಿಕ ಇಲಾಖೆಯ ಅನುಮತಿ ದೊರೆತ  ಕೂಡಲೇ, ಸಚಿವ ಸಂಪುಟದ ಒಪ್ಪಿಗೆ ಪಡೆದು ಅಧಿಸೂಚನೆ ಹೊರಡಿಸಲಾಗುವುದು,” ಎಂದು ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ  15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಉರ್ದು ಮಾಧ್ಯಮದ ಭಾಷಾ ಸೇರಿದಂತೆ ಬಿಟ್ಟು ಹೋದ ಬೇರೆ ಬೇರೆ ವಿಷಯಗಳ ಶಿಕ್ಷಕರನ್ನು ಹೊರತುಪಡಿಸಿರುವ ಕುರಿತು ವಿಧಾನ ಪರಿಷತ್ ಸದಸ್ಯರಾದ ಬಲ್ಕೀಷ್ ಬಾನು, ಎಂ. ನಾಗರಾಜು, ಶಿವಕುಮಾರ್ ಕೆ. ಹಾಗೂ ಡಿ.ಟಿ. ಶ್ರೀನಿವಾಸಗೌಡ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಮಾನ್ಯ ಸಚಿವರು, ಈ ಎಲ್ಲಾ ಶಿಕ್ಷಕರ ನೇಮಕಾತಿಗೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಿವರಿಸಿದರು.

“ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾನ್ಯ ಸಭಾಪತಿಗಳಾದ ಶ್ರೀ ಸಲೀಂ ಅಹಮದ್ ಅವರ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿದ್ದೇವೆ. ಉರ್ದು ಹಾಗೂ ಬಿಟ್ಟುಹೋಗಿರುವ ಇತರೆ ವಿಷಯಗಳ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ,” ಎಂದು ಸಚಿವರು ಸ್ಪಷ್ಟಪಡಿಸಿದರು.

ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಈ ಕುರಿತು ಸಚಿವ ಸಂಪುಟದಲ್ಲಿಯೂ ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉರ್ದು ಸೇರಿದಂತೆ ಬಿಟ್ಟುಹೋಗಿರುವ ವಿಷಯಗಳ ಶಿಕ್ಷಕರ ನೇಮಕಾತಿಗೆ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಸಚಿವರ ಉತ್ತರಕ್ಕೆ ಸಂತಸ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಉರ್ದು ಸೇರಿದಂತೆ ಬಿಟ್ಟುಹೋಗಿರುವ ವಿಷಯಗಳ ಶಿಕ್ಷಕರ ನೇಮಕಾತಿಗೆ ಸ್ಪಂದಿಸಿ ಸ್ಪಷ್ಟ ಭರವಸೆ ನೀಡಿದ ಸಚಿವ ಮಧು ಬಂಗಾರಪ್ಪ ಅವರಿಗೆ ಸದನದಲ್ಲಿ ಕೃತಜ್ಞತೆ ಸಲ್ಲಿಸಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಧಿಕಾರ ಇರಲಿ, ಇಲ್ಲದಿರಲಿ ಒಳ ಮೀಸಲಾತಿ ಪರ, ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಮಂಗಳೂರಿನ ಫಳ್ನೀರ್ ‌ನ ಎಂಎಫ್‌ಸಿ ರೆಸ್ಟೋರೆಂಟ್‌ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಪರಿಶೀಲನೆಶೀಘ್ರವೇ ಉರ್ದು ಸೇರಿದಂತೆ ಇತರ ವಿಷಯಗಳ ಶಿಕ್ಷಕರ ನೇಮಕ : ಸಚಿವ ಮಧು ಬಂಗಾರಪ್ಪಇದು ನಿಮ್ಮ ಮನೆ… ನಾನು ನಿಮ್ಮ ಸೇವಕ ಅಷ್ಟೇ’: ಸೊರಬ ಕ್ಷೇತ್ರದ ಜನರೊಂದಿಗೆ ಸಚಿವ ಮಧು ಬಂಗಾರಪ್ಪರ ಆತ್ಮೀಯ ಕ್ಷಣಇಂ. ರೆಕಾರ್ಡ್ ಗೆ 3 ವರ್ಷದ ಕಂಪ್ಲಿ ತನವ್ ನ ದಾಖಲೆಯ 600ಮೀ ಓಟಪೋಲೀಸರ ಸಭೆಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಅಸಮಾನತೆ ಪ್ರದರ್ಶನ ಸಹಿಸಲಾಗದು -ಮೋಹನ್ ಕುಮಾರ್ ದಾನಪ್ಪಜನರ ಪ್ರಶ್ನೆಗಳಿಂದ ಕಾಂಗ್ರೆಸ್ ಪಲಾಯನ; ಪ್ರಶ್ನಿಸುವ ಕರ್ತವ್ಯ ಮರೆತ ಬಿಜೆಪಿ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ: ವಿಜಯೇಂದ್ರನೃತ್ಯ ನಿಕುಂಜದಿಂದ 'ಅಭಿವ್ಯಕ್ತಿ' 9ನೇ ವಾರ್ಷಿಕ ಕಥಕ್ ನೃತ್ಯೋತ್ಸವ: ಲಯ, ಮಳೆಯ ಅದ್ಬುತ ಜುಗಲ್‌ಬಂದಿಹೆಲ್ಮೆಟ್ ಜಾಗೃತಿ ಅಭಿಯಾನ:   ಸ್ಟೀಲ್‌ಬರ್ಡ್ ಕಂಪನಿಯಿಂದ 500 ಫುಲ್‌ಫೇಸ್ ಹೆಲ್ಮೆಟ್‌ಗಳ ಉಚಿತ  ವಿತರಣೆ