LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚೆನ್ನಮ್ಮ ಮಾತೃಶಕ್ತಿಯ ಸಂಕೇತವಾಗಿದ್ದರು: ಎಂ ಬಿ ಪಾಟೀಲ ಕಂಬನಿ

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರ ನಿಧನದಿಂದ ಮಾತೃಶಕ್ತಿಯ ಆಧಾರ ಸ್ತಂಭವೊಂದು ಕಳಚಿ ಬಿದ್ದಂತಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಕಂಬನಿ ಮಿಡಿದಿದ್ದಾರೆ.news_1784547130_0_391.webp

ತುಂಬುಬಾಳ್ವೆ ನಡೆಸಿದ ಚೆನ್ನಮ್ಮನವರು ದೇವೇಗೌಡರ ರಾಜಕೀಯದ ಏಳುಬೀಳುಗಳಲ್ಲಿ ಅವರಿಗೆ ಹೆಗಲು ಕೊಟ್ಟಿದ್ದರು. ಜೊತೆಗೆ  ತುಂಬುಕುಟುಂಬದ ಸಾಂಸಾರಿಕ ನಿರ್ವಹಣೆಯನ್ನು ತಾವೇ ಹೊತ್ತುಕೊಂಡು, ಇತರರಿಗೆ ಆದರ್ಶವಾಗಿದ್ದರು. ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದ ಅವರ ಬದುಕು ತ್ಯಾಗ, ಜವಾಬ್ದಾರಿ ಮತ್ತು ಸಹನೆಗಳಿಗೆ ಒಂದು ಸಂಕೇತವಾಗಿತ್ತು ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ತಮ್ಮ‌ ಪತಿ ದೇವೇಗೌಡರು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಅವರು ಸಂತೋಷವನ್ನು ಕಂಡಿದ್ದರು. ತಮ್ಮ ಮುಗ್ಧತೆ ಮತ್ತು ಸರಳತೆಯನ್ನು ಜೀವನದ ಉದ್ದಕ್ಕೂ ಬಿಟ್ಟುಕೊಡದ ಚೆನ್ನಮ್ಮನವರ ವ್ಯಕ್ತಿತ್ವವು ಮಹಿಳಾಶಕ್ತಿಯನ್ನು ಪ್ರತಿಫಲಿಸುತ್ತಿತ್ತು. ಅವರ ಜೀವನವು ಇಡೀ ಸ್ತ್ರೀ ಸಂಕುಲಕ್ಕೆ ಆದರ್ಶದ ಪರಂಪರೆಯನ್ನು ಬಿಟ್ಟು ಹೋಗಿದೆ ಎಂದು ಅವರು ದುಃಖಿಸಿದ್ದಾರೆ.

ಚೆನ್ನಮ್ಮನವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ದೇವೇಗೌಡರಿಗೂ ಅವರ ಮಕ್ಕಳಿಗೂ ಅಭಿಮಾನಿಗಳಿಗೂ ಕೊಡಲಿ ಮತ್ತು ಚೆನ್ನಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾಟೀಲ ಪ್ರಾರ್ಥಿಸಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಖೋಪೋಲಿಯಲ್ಲಿ ಅಕ್ಟೋಬರ್ 30 ರಿಂದ ಭಾರತೀಯ ಶಾಲೆಗಳ ಶಿಕ್ಷಣ ಶೃಂಗಸಭೆಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದಿಂದ ದೇಸಿ ಕ್ವೋಶೆಂಟ್‌ಗೆ ಚಾಲನೆಏಸರ್‌ನಿಂದ CSR ನ ಅಡಿಯಲ್ಲಿ  ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭಕಲೀಲಾ ಚಿತ್ರದ ಮುಹೂರ್ತ ಪಂಚಮುಖಿ ಗಣೇಶ ದೇವಾಲಯದಲ್ಲಿ ಚಾಲನೆವಿದ್ಯಾರ್ಥಿಗಳು ವೃತ್ತಿ ಜೊತೆಗೆ ಪ್ರವೃತ್ತಿಯಲ್ಲೂ ಹೆಚ್ಚು ಗಮನ ಹರಿಸಬೇಕು: ಡಾ. ಚಂದ್ರ ಮೌಳಿ ಗಡ್ಡ ಮನಗೂನಗರದ ರಸ್ತೆ ಸಮಸ್ಯೆಗಳ ಪತ್ತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ : ಆಯುಕ್ತ ಕೆ. ಎನ್. ರಮೇಶ್ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪ