LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ಅಧಿಕಾರಿಗಳ ನಟ್ಟು ಮತ್ತು ಬೋಲ್ಟ್ರ್ ಮೊದಲು ಸರಿ ಮಾಡಿ - ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಭ್ರಷ್ಟ ಲೋಕಸೇವಾ ಆಯೋಗದ ಅಧಿಕಾರಿಗಳ ನಟ್ಟು ಮತ್ತು ಬೋಲ್ಟ್ ಗಳನ್ನು ಮೊದಲು ಸರಿ ಮಾಡಿ, ಇಲ್ಲದಿದ್ದಲ್ಲಿ ನಾವೆಲ್ಲರೂ ಸೇರಿ ಯಾರ ನಟ್ಟು , ಬೋಲ್ಟ್ ಸರಿ ಮಾಡಬೇಕೆಂದು ನಿರ್ಧರಿಸುತ್ತೇವೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹ ಮಾಡಿದರು.

ಲೋಪ ದೋಷದ ಆಯೋಗ, ಲೂಟಿಕೋರರ ಆಯೋಗ, ಅಯೋಗ್ಯರ ಆಯೋಗವಾಗಿ ಮಾರ್ಪಟ್ಟಿರುವ ಲೋಕಸೇವಾ ಆಯೋಗವನ್ನು ಕೂಡಲೇ ರದ್ದು ಮಾಡಬೇಕು. ನೂತನ ಆಯೋಗವನ್ನು ರಚಿಸಬೇಕು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು " ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡಕ್ಕೆ ಆದ್ಯತೆ ನೀಡದೆ ಭಾಷಾಂತರ ಮಾಡಿ, ಕೃಪಾಂಕ ನೀಡುವ ಮೂಲಕ ಜಾರಿಕೊಳ್ಳುತ್ತಿರುವ ಇಂತಹ ಅಧಿಕಾರಿಗಳಿಂದ ಪರೀಕ್ಷೆ ಬರೆಸಿದರು ಅವರು ಸಹ ನಾಲ್ಕೈದು ಬಾರಿ ಫೇಲ್ ಆಗುತ್ತಾರೆ. ಇಂತಹ ಅಯೋಗ್ಯದಿಂದಲೆ ಮತ್ತೆ ತಪ್ಪನ್ನು ಸರಿಪಡಿಸುವ ಮುಖ್ಯಮಂತ್ರಿಗಳ ಮಾತು ನಿಜಕ್ಕೂ ಹಾಸ್ಯಾಸ್ಪದ. ಈ ಕೂಡಲೇ ಅಮರಣಾಂತ ಉಪವಾಸ ಕೂತಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಜನಕಲ್ಯಾಣ ಯೋಜನೆಗಳ ಬಗ್ಗೆ ಬಿಜೆಪಿಯವರ ಸುಳ್ಳು ವದಂತಿ ಅಂಕಿ ಅಂಶಗಳ ಸತ್ಯವೇ ಬೇರೆ: ಸುರ್ಜೆವಾಲಬೆಂಗಳೂರು ರಿಯಲ್ ಎಸ್ಟೇಟ್ ಗೆ  ‘ಡೀಲ್‌ಕ್ಲೇವ್’ ನಾಯಕತ್ವ ವೇದಿಕೆ: ಪ್ರಥಮ ಆವೃತ್ತಿ ಯಶಸ್ವಿಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಪರಂಪರೆ ಎಂದೆಂದಿಗೂ ಶಾಶ್ವತ: ಕರಜಗಿಬೆಂಗಳೂರು ಉಳಿಸಿ" – ಹಸಿರು, ಸ್ವಚ್ಛ ಮತ್ತು ವಾಸಯೋಗ್ಯ ಬೆಂಗಳೂರಿಗಾಗಿ ಎಎಪಿ ಹಸಿರು ಕಾರ್ಯಸೂಚಿ  ಪ್ರಣಾಳಿಕೆ ಬಿಡುಗಡೆಖ್ಯಾತ ಸಿನಿತಾರೆ ಕರಣ್ ಕುಂದ್ರಾ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫೀನಿಕ್ಸ್ ಶಾಪಿಂಗ್ ಫೆಸ್ಟಿವಲ್ ಅದ್ಧೂರಿ ಚಾಲನೆಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಪದ್ಮನಾಭನಗರದಲ್ಲಿ ಗುರುಪಾದ ಪೂಜೆ, ಭಜನೆ ಹಾಗೂ ಧಾರ್ಮಿಕ ಜಾಗೃತಿ ಮೆರವಣಿಗೆ ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ : BO, ಎ.ಜೆ.ಕೃಷ್ಣೇಗೌಡ ಅಭಿನಂದನೆಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದಿಂದ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆಸಮಾನತೆ, ಸಾಮಾಜಿಕ ನ್ಯಾಯದ ಜಪ ಮಾಡುವ ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಗೊಂದು ಜ್ವಲಂತ ಸಾಕ್ಷಿ ಇಲ್ಲಿದೆ!