LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಗೆ ದಢಾರ-ರುಬೆಲ್ಲಾ ವಿಶೇಷ ಪಾಕ್ಷಿಕ ಲಸಿಕಾ ಅಭಿಯಾನ -2026: ಆರ್. ರಾಮಚಂದ್ರನ್

ಬೆಂಗಳೂರು : ಲಸಿಕಾ ದಡಾರ-ರುಬೆಲ್ಲಾ ಖಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ, ಸಾರ್ವತ್ರಿಕ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ 9 ರಿಂದ 11 ತಿಂಗಳ ವಯಸ್ಸಿನಲ್ಲಿ ಮೊದಲನೇ ಡೋಸ್ ಹಾಗೂ 16 ರಿಂದ 24 ತಿಂಗಳ ವಯಸ್ಸಿನಲ್ಲಿ ಎರಡನೇ ಡೋಸ್ ದಢಾರ ರುಬೆಲ್ಲಾ ಲಸಿಕೆಯನ್ನು ನೀಡಲಾಗುತ್ತಿದೆ.

ಭಾರತ ಸರ್ಕಾರವು 2026ರ ಅಂತ್ಯದೊಳಗೆ ದಢಾರ-ರುಬೆಲ್ಲಾ ಮತ್ತು ರುಬೆಲ್ಲಾ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಬದ್ದವಾಗಿದ್ದು, ಈ ಮಹತ್ವದ ಗುರಿ ಸಾಧನೆಯಲ್ಲಿ ರಾಜ್ಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ದಢಾರ-ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಿಶೇಷ ಗಮನಹರಿಸಿದೆ.

*ಕಾರ್ಯಕ್ರಮದ ಗುರಿ:*


1. ದಢಾರ-ರುಬೆಲ್ಲಾ ಲಸಿಕೆಯ (MR-1, MR-2) 2 ಡೋಸ್ ಲಸಿಕಾ ಕರಣದ ಪ್ರಗತಿಯು ಶೇ.95 ಕ್ಕಿಂತ ಹೆಚ್ಚಿರಬೇಕು.

2. ದಢಾರ-ರುಬೆಲ್ಲಾ ಮೊದಲನೇ ಮತ್ತು ಎರಡನೇ ಡೋಸ್‌ಗಳ ಡ್ರಾಪ್ ಔಟ್ ರೇಟ್ ಶೂನ್ಯವಿರಬೇಕು.

3. Non-Measles, Non- Rubella discard rate 1 ಲಕ್ಷ ಜನಸಂಖ್ಯೆಗೆ 2 ಕ್ಕಿಂತ ಹೆಚ್ಚಿರಬೇಕು.

ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದಢಾರ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಮತ್ತು ಜನವರಿಯಿಂದ ಮಾರ್ಚ್ ವರೆಗೆ ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇರುವುದನ್ನು ಗಮನಿಸಿಸಲಾಗಿದೆ.

ಮುಂದುವರಿದು, ದಡಾರ-ರುಬೆಲ್ಲಾ ಪಾಕ್ಷಿಕ ಲಸಿಕಾ ಅಭಿಯಾನವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಐದು ಪಾಲಿಕೆಗಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಔಟರೀಚ್ ಪ್ರದೇಶಗಳಲ್ಲಿ *ದಿನಾಂಕ: 19-01-2026 ರಿಂದ 31-01-2026 ರವರೆಗೆ* ಸೆಷನ್‌ಗಳ ಮೂಲಕ ಹಮ್ಮಿಕೊಳ್ಳಲಾಗಿದೆ.

೦ ರಿಂದ 5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಗಳಿಂದ ಈವರೆಗೆ ಲಸಿಕೆ ಪಡೆಯಲು ವಿಳಂಬವಾಗಿದ್ದಲ್ಲಿ ಅಥವಾ ಲಸಿಕೆ ಪಡೆಯದೇ ಇದ್ದಲ್ಲಿ, ಪೋಷಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜಿ.ಬಿ.ಎ (ಆರೋಗ್ಯ ಇಲಾಖೆ) ಪ್ರಕಟಣೆ ಹೊರಡಿಸಿದೆ. ನಿಮ್ಮ ಮಕ್ಕಳಿಗೆ ಲಸಿಕೆ ಕೊಡಿಸಿ ಆರೋಗ್ಯವಂತರನ್ನಾಗಿಸಿ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಬರುವ 145 ಯೋಜನಾ ಘಟಕಗಳ ದಢಾರ-ರುಬೆಲ್ಲ್ಯಾ ಪಾಕ್ಷಿಕ ಲಸಿಕಾ ಕಾರ್ಯಕ್ರಮದ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ದಢಾರ-ರುಬೆಲ್ಲಾ ವಿಶೇಷ ಪಾಕ್ಷಿಕ ಲಸಿಕಾ ಅಭಿಯಾನದಲ್ಲಿ ಒಟ್ಟು 1,114 ಲಸಿಕಾ ಕೇಂದ್ರಗಳನ್ನು 3,005 ವಲಸೆ ತಾಣಗಳಲ್ಲಿ ಯೋಜಿಸಲಾಗಿದ್ದು, 267 ಮಕ್ಕಳಿಗೆ MR-1 ಲಸಿಕೆ ಮತ್ತು 246 ಮಕ್ಕಳಿಗೆ MR2 ಲಸಿಕೆ ಹಾಗೂ 178 ಮಕ್ಕಳಿಗೆ ಪೆಂಟಾ-1 ಲಸಿಕೆ ಮತ್ತು 183 ಮಕ್ಕಳಿಗೆ DPT 2 ನೇ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು.

ಈ ಅಭಿಯಾನದ ಅಂಗವಾಗಿ 1,040 ಹೆಚ್ಚಿನ ಅಪಾಯದ ಪ್ರದೇಶಗಳಾದ ಕೊಳೆಗೇರಿಗಳು ಮತ್ತು ದಡಾರ ಪ್ರಕರಣವಿರುವ ಪ್ರದೇಶಗಳನ್ನು ಒಳಗೊಂಡಿದ್ದು. 1,493 ಮಕ್ಕಳಿಗೆ MR1 ಲಸಿಕೆ ಮತ್ತು 1,512 ಮಕ್ಕಳಿಗೆ MR2 ಡೋಸ್ ಲಸಿಕೆ ನೀಡಲಾಗುತ್ತದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ