LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಕ್ಷಿಣ ಕೊರಿಯಾ ಕೈಗಾರಿಕಾ ಟೌನ್ ಶಿಪ್ ಕುರಿತು ಕೌನ್ಸಲ್ ಜನರಲ್ ಜತೆ ಚರ್ಚೆ: ಎಂ ಬಿ ಪಾಟೀಲ

ಬೆಂಗಳೂರು: ರಾಜ್ಯದಲ್ಲಿ ದಕ್ಷಿಣ ಕೊರಿಯಾದ ಕೈಗಾರಿಕಾ ಟೌನ್ ಶಿಪ್ ರಚನೆಗೆ ಮತ್ತು ಅಲ್ಲಿ ಆ ದೇಶದ ಅಗ್ರಮಾನ್ಯ ಕಂಪನಿಗಳು ಹೂಡಿಕೆ ಮಾಡಲು ಅವಕಾಶಗಳಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.news_1795370942_1_625.webp

ದಕ್ಷಿಣ ಭಾರತದ ದಕ್ಷಿಣ ಕೊರಿಯಾ ಕೌನ್ಸಲ್ ಜನರಲ್ ಹೇ ರಾನ್ ಚುನ್ ಅವರು ರಾಜ್ಯದಲ್ಲಿ ಯಾವ್ಯಾವ ಕೈಗಾರಿಕಾ ವಲಯಗಳಲ್ಲಿ ಹೂಡಿಕೆಗೆ ಅವಕಾಶವಿದೆ ಎಂಬುದನ್ನು ಕುರಿತು ಸಚಿವರ ಜತೆ ಶುಕ್ರವಾರ ಚರ್ಚಿಸಿದ್ದಾರೆ.

ಸೆಕ್ಟರ್ ವಾರು ಹಾಗೂ ದೇಶವಾರು ಪ್ರತ್ಯೇಕ ಕೈಗಾರಿಕಾ ವಸಾಹತು ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ‌ನಿಮ್ಮ ದೇಶದ ಯಾವುದೇ ಕಂಪನಿ ಹೂಡಿಕೆ ಮಾಡಲು ಮುಂದೆ ಬಂದರೂ ಅದಕ್ಕೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವರು ನಿಯೋಗಕ್ಕೆ ಭರವಸೆ ನೀಡಿದರು. 

ಈ ಬಗ್ಗೆ ಮಾತನಾಡಿರುವ ಸಚಿವರು, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್, ಹುಂಡೈ ಮೊದಲಾದ ಕಂಪನಿಗಳ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಬೆಂಗಳೂರಿನಲ್ಲಿ ಆರಂಭವಾಗಿವೆ. ಇದರ ಜತೆಗೆ ಎಲ್.ಜಿ, ಕಿಯಾ, ಡಿಎನ್ ಸೊಲ್ಯೂಷನ್ಸ್, ಎಸ್ ಕೆ ಹೈನಿಕ್ಸ್, ಹ್ಯುಂಡೈ ಮೊಬೀಸ್ ಮುಂತಾದ ಹತ್ತಾರು ಕಂಪನಿಗಳು ನಮ್ಮಲ್ಲಿವೆ. ಈಗ ಕೊರಿಯಾದ ಕಂಪನಿಗಳು ಸಾಂಪ್ರದಾಯಿಕ ಕ್ಷೇತ್ರಗಳನ್ನು ಬಿಟ್ಟು ಸೆಮಿಕಂಡಕ್ಟರ್, ಏರೋಸ್ಪೇಸ್ ತರಹದ ಆಧುನಿಕ ವಲಯಗಳಲ್ಲಿ ಹೂಡಿಕೆ ಮಾಡಬೇಕು ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ.

ಡಿಎನ್ ಸೊಲ್ಯೂಷನ್ಸ್ ಕಂಪನಿಯು ಬೆಂಗಳೂರು ಸಮೀಪ ಅಭಿವೃದ್ಧಿ ಪಡಿಸಿರುವ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಕ್ಕೆ 600 ಕೋಟಿ ರೂಪಾಯಿ ವಿನಿಯೋಗಿಸಿದೆ. ಹುಂಡೈ ಮೊಬಿಸ್ ಕಂಪನಿಯ ಸಾಫ್ಟ್‌ವೇರ್ ಆರ್ & ಡಿ ಕೇಂದ್ರವು ನಮ್ಮಲ್ಲಿ ಹೋದ ವರ್ಷದ ಡಿಸೆಂಬರ್ ತಿಂಗಳಿಂದ ಕಾರ್ಯಾರಂಭ ಮಾಡಿದೆ. ಕೊರಿಯಾದ ಕಂಪನಿಗಳ ಹೂಡಿಕೆಗೆ ಸರಕಾರದ ಸಂಪೂರ್ಣ ಸಹಕಾರವಿದೆ ಎಂದು ಅವರು ಭರವಸೆ ನೀಡಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಣ್ಯಭೂಮಿ ತೆರವು ನೆಪದಲ್ಲಿ ರೈತರಿಗೆ ಕಿರುಕುಳ; ಕೇಂದ್ರದ ಬಳಿಗೆ ಕೊಡಗು ನಿಯೋಗಸಾಹಿತ್ಯ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಲಿ, ವಿಭಜಿಸುವ ಸಾಧನವಾಗದಿರಲಿದಕ್ಷಿಣ ಕೊರಿಯಾ ಕೈಗಾರಿಕಾ ಟೌನ್ ಶಿಪ್ ಕುರಿತು ಕೌನ್ಸಲ್ ಜನರಲ್ ಜತೆ ಚರ್ಚೆ: ಎಂ ಬಿ ಪಾಟೀಲತಯಾರಿಕಾ ಘಟಕ ನಿರ್ಮಾಣಕ್ಕೆ ಲಿಂಡ್ ಕಂಪನಿ ಅಸಕ್ತಿ: ಎಂ ಬಿ ಪಾಟೀಲಜಪಾನ್ ಪ್ರವಾಸದಲ್ಲಿ ಸಿಎಂ ಡಿಕೆ ಶಿವಕುಮಾರ್ ಎಂ ಬಿ ಪಾಟೀಲ ಬಸವಣ್ಣನವರ ಬಗ್ಗೆ ಹಗುರವಾದ ಮಾತುಗಳನ್ನಾಡುವುದು ಸಲ್ಲ, ಮಹಾತ್ಮರ ಅವಹೇಳನಕ್ಕೆ ಪಂಚಪೀಠಾಧೀಶರ ಖಂಡನೆಹಿಂದೂಗಳು ಎಲ್ಲರು ಒಂದೇ, ಸತ್ಯಪಾಲನೆ, ಹಿಂದೂ ಧರ್ಮ ಪಾಲನೆ ಮಾಡುವವರು ಹಿಂದೂಗಳುಭಾಷಣ ಮಾಡೋಲ್ಲ, ಜನರ ಅಹವಾಲು ಆಲಿಸೋಣ ಎಂದ ಸಚಿವ ಮಧು ಬಂಗಾರಪ್ಪಸೊರಬ ಕ್ಷೇತ್ರದಲ್ಲಿ 2 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಚಾಲನೆರಸ್ತೆ ಕಾಮಗಾರಿಗಳ ಸುರಕ್ಷತಾ ಕ್ರಮಗಳೊಂದಿಗೆ, ಸಂಚಾರಕ್ಕೆ ತೊಂದರೆಯಾಗದಂತೆ ಕೈಗೊಳ್ಳಿ – ಜಗದೀಶ್.ಜಿ