LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಯಾರಿಕಾ ಘಟಕ ನಿರ್ಮಾಣಕ್ಕೆ ಲಿಂಡ್ ಕಂಪನಿ ಅಸಕ್ತಿ: ಎಂ ಬಿ ಪಾಟೀಲ

ಬೆಂಗಳೂರು: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬಳಸುವ ಸ್ಪಟರಿಂಗ್ ಟಾರ್ಗೆಟ್ಸ್ ತಯಾರಿಕೆಗೆ ಹೆಸರಾಗಿರುವ ಅಮೆರಿಕ ಮೂಲದ ಲಿಂಡ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಟೆಕ್ನಾಲಜಿ ಕಂಪನಿಯು ರಾಜ್ಯದಲ್ಲಿ ತನ್ನದೇ ಆದ ತಯಾರಿಕಾ ಸ್ಥಾವರದ ಅಭಿವೃದ್ಧಿಗೆ ಬಂಡವಾಳ ಹೂಡಲು ಮುಂದೆ ಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.news_1795370818_1_363.webp

 ತಮ್ಮನ್ನು ಇಲ್ಲಿ ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗದ ಜತೆ ಅವರು ಹೂಡಿಕೆ ಮತ್ತು ಇದಕ್ಕೆ ಪೂರಕವಾದ ಸೌಕರ್ಯಗಳ ಬಗ್ಗೆ ಚರ್ಚಿಸಿದರು.

ಬಳಿಕ ಮಾತನಾಡಿದ ಅವರು, ಲಿಂಡ್ ಲಂಪನಿಯು ಉತ್ತರ ಅಮೆರಿಕ, ಯೂರೋಪ್ ಮತ್ತು ಏಷ್ಯಾದ 12 ದೇಶಗಳ 35 ಕಡೆಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಇದು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್, ಸರ್ಫೇಸ್ ಎಂಜಿನಿಯರಿಂಗ್ ಮತ್ತು ಅಡ್ವಾನ್ಸ್ಡ್ ಕೋಟಿಂಗ್ ತಂತ್ರಜ್ಞಾನಗಳಲ್ಲಿ ಕೂಡ ಮುಂಚೂಣಿಯಲ್ಲಿದೆ. ಇಂತಹ ಕಂಪನಿಯ ಹೂಡಿಕೆಗೆ ನಮ್ಮ ಸ್ವಾಗತವಿದೆ ಎಂದು ಅವರು ಹೇಳಿದ್ದಾರೆ.

ಲಿಂಡ್ ಕಂಪನಿಯು ವಿಶೇಷವಾಗಿ ಹೈಪ್ಯೂರಿಟಿ ಮೆಟೀರಿಯಲ್ಸ್ ಮತ್ತು ಪಿವಿಡಿ (ಫಿಸಿಕಲ್ ವೇಪರ್ ಡಿಪೊಸಿಷನ್) ತಯಾರಿಕೆಗೆ ಹೆಸರುವಾಸಿಯಾಗಿದೆ. ಇದರಿಂದ ಸೆಮಿಕಂಡಕ್ಟರ್, ಏರೋಸ್ಪೇಸ್ ಮತ್ತು ಆಟೋಮೋಟಿವ್ ಉದ್ಯಮಗಳ ಪೂರೈಕೆ ಸರಪಳಿಯ ಬಲವರ್ಧನೆ ಆಗಲಿದೆ. ಸ್ಥಳೀಯವಾಗಿಯೇ ಎಲ್ಲವೂ ತಯಾರಾಗಬೇಕು ಎನ್ನುವುದು ಸರಕಾರದ ಗುರಿಯಾಗಿದೆ. ಹೀಗಾಗಿ ಕಂಪನಿಗೆ ಬೇಕಾಗಿರುವ ಭೂಮಿ, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಕಂಪನಿಯ ನಿಯೋಗದಲ್ಲಿ ಅಧ್ಯಕ್ಷ ಫ್ರಾಂಕ್ ಡಿ ಕರ್ಮಾನ್ಟ್ರೆಂಡ್, ಉಪಾಧ್ಯಕ್ಷ ಜಾನ್ ಸಿರ್ಮನ್, ಸಹ‌ನಿರ್ದೇಶಕರುಗಳಾದ ಸಾಹಿರ್ ಖಾನ್ ಮತ್ತು ಆದಿತ್ಯ ಬೋಡೇಪುಡಿ ಹಾಗೂ ಆದಿತ್ಯ ವಾಸನ್ ಸಿಂಗ್ಲಾ ಉಪಸ್ಥಿತರಿದ್ದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಖುಷ್ಬು ಗೋಯಲ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಣ್ಯಭೂಮಿ ತೆರವು ನೆಪದಲ್ಲಿ ರೈತರಿಗೆ ಕಿರುಕುಳ; ಕೇಂದ್ರದ ಬಳಿಗೆ ಕೊಡಗು ನಿಯೋಗಸಾಹಿತ್ಯ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಲಿ, ವಿಭಜಿಸುವ ಸಾಧನವಾಗದಿರಲಿದಕ್ಷಿಣ ಕೊರಿಯಾ ಕೈಗಾರಿಕಾ ಟೌನ್ ಶಿಪ್ ಕುರಿತು ಕೌನ್ಸಲ್ ಜನರಲ್ ಜತೆ ಚರ್ಚೆ: ಎಂ ಬಿ ಪಾಟೀಲತಯಾರಿಕಾ ಘಟಕ ನಿರ್ಮಾಣಕ್ಕೆ ಲಿಂಡ್ ಕಂಪನಿ ಅಸಕ್ತಿ: ಎಂ ಬಿ ಪಾಟೀಲಜಪಾನ್ ಪ್ರವಾಸದಲ್ಲಿ ಸಿಎಂ ಡಿಕೆ ಶಿವಕುಮಾರ್ ಎಂ ಬಿ ಪಾಟೀಲ ಬಸವಣ್ಣನವರ ಬಗ್ಗೆ ಹಗುರವಾದ ಮಾತುಗಳನ್ನಾಡುವುದು ಸಲ್ಲ, ಮಹಾತ್ಮರ ಅವಹೇಳನಕ್ಕೆ ಪಂಚಪೀಠಾಧೀಶರ ಖಂಡನೆಹಿಂದೂಗಳು ಎಲ್ಲರು ಒಂದೇ, ಸತ್ಯಪಾಲನೆ, ಹಿಂದೂ ಧರ್ಮ ಪಾಲನೆ ಮಾಡುವವರು ಹಿಂದೂಗಳುಭಾಷಣ ಮಾಡೋಲ್ಲ, ಜನರ ಅಹವಾಲು ಆಲಿಸೋಣ ಎಂದ ಸಚಿವ ಮಧು ಬಂಗಾರಪ್ಪಸೊರಬ ಕ್ಷೇತ್ರದಲ್ಲಿ 2 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಚಾಲನೆರಸ್ತೆ ಕಾಮಗಾರಿಗಳ ಸುರಕ್ಷತಾ ಕ್ರಮಗಳೊಂದಿಗೆ, ಸಂಚಾರಕ್ಕೆ ತೊಂದರೆಯಾಗದಂತೆ ಕೈಗೊಳ್ಳಿ – ಜಗದೀಶ್.ಜಿ