LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಹೊರತು ಸ್ಥಗಿತ ಇಲ್ಲ: ದಿನೇಶ್ ಗೂಳಿಗೌಡ

ಯೋಜನೆ ನಿಲ್ಲಿಸುವ ಉದ್ದೇಶ ಸರ್ಕಾರಕ್ಕಿಲ್ಲವೆಂದು ಸ್ಪಷ್ಟನೆ  - ಅರ್ಹ ಮಹಿಳಾ ಫಲಾನುಭವಿಗಳಿಗೆ ಯಾವುದೇ ನಷ್ಟವಿಲ್ಲ  - ದುರುಪಯೋಗ ತಡೆದು ಅರ್ಹರಿಗೆ ತಲುಪಿಸುವ ಉದ್ದೇಶ - ​ಲಕ್ಷಾಂತರ ಮೃತ ಯಜಮಾನಿಯರ ಖಾತೆಗೆ ಹಣ ಸಂದಾಯ ​- ​ವಿಪಕ್ಷಗಳಿಂದ ರಾಜಕೀಯ ಪ್ರೇರಿತ ಟೀಕೆ, ಅಪಪ್ರಚಾರ

​ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯನ್ನು ದುರುಪಯೋಗದಿಂದ ತಡೆದು, ಅರ್ಹರಿಗೆ ಮಾತ್ರ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಪರಿಷ್ಕರಣೆಗೆ ಆಗ್ರಹಿಸಲಾಗಿದೆಯೇ ಹೊರತು, ಯೋಜನೆಯನ್ನು ನಿಲ್ಲಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸ್ಪಷ್ಟಪಡಿಸಿದ್ದಾರೆ.news_1781200741_1_850.webp

​ವಿರೋಧ ಪಕ್ಷದ ವರು ಗೃಹಲಕ್ಷ್ಮಿ ಯೋಜನೆ ಕುರಿತು ಇಲ್ಲದ ಅಪಪ್ರಚಾರಗಳನ್ನು ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಜರೆದಿದ್ದಾರೆ.

 ರಾಜ್ಯದಲ್ಲಿ ಇದುವರೆಗೆ ಸುಮಾರು 1 ಕೋಟಿ 24 ಲಕ್ಷಕ್ಕೂ ಅಧಿಕ ಮಹಿಳಾ ಯಜಮಾನಿಯರಿಗೆ ಪ್ರತಿ ತಿಂಗಳು ತಲಾ 2,000 ರೂಪಾಯಿಗಳಂತೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಯೋಜನೆಯ ಫಲಾನುಭವಿಗಳಾಗಿದ್ದ ಸುಮಾರು 1 ಲಕ್ಷದ 95 ಸಾವಿರಕ್ಕೂ ಹೆಚ್ಚು ಕುಟುಂಬದ ಯಜಮಾನಿಯರು ಮರಣ ಹೊಂದಿದ್ದಾರೆ. ಆದಾಗ್ಯೂ, ತಾಂತ್ರಿಕ ಕಾರಣಗಳಿಂದಾಗಿ ಮೃತಪಟ್ಟವರ ಬ್ಯಾಂಕ್ ಖಾತೆಗಳಿಗೂ ಇನ್ನೂ ಹಣ ಸಂದಾಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ದುರುಪಯೋಗವನ್ನು ತಡೆಯುವ ಕೆಲಸವನ್ನು ಸರಕಾರದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

*​ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ:*
​"ಮೃತಪಟ್ಟವರ ಖಾತೆಗಳಿಗೆ ಸರ್ಕಾರದ ಹಣ ಪಾವತಿಯಾಗುತ್ತಿರುವುದನ್ನು ತಡೆಗಟ್ಟಲು ಮತ್ತು ಯೋಜನೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ನಾನು ಈ ಹಿಂದೆ ಲಿಖಿತ ಮನವಿಯೊಂದನ್ನು ಸಲ್ಲಿಸಿ, ಫಲಾನುಭವಿಗಳಿಗೆ 'ಜೀವಿತ ಪ್ರಮಾಣ ಪತ್ರ' (Life Certificate) ಕಡ್ಡಾಯಗೊಳಿಸುವಂತೆ ಕೋರಿದ್ದೆ. ಅದೇ ರೀತಿ, ಪ್ರಸ್ತುತ ಮುಖ್ಯಮಂತ್ರಿಗಳಾಗಿರುವ ಡಿ.ಕೆ. ಶಿವಕುಮಾರ್ ಅವರಿಗೂ ಸಹ ಈ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಮೃತಪಟ್ಟವರು ಹಾಗೂ ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು ಸಂಪೂರ್ಣವಾಗಿ ಪರಿಷ್ಕರಣೆ (Auditing/Verification) ಮಾಡಬೇಕೆಂದು ಮನವಿ ಮಾಡಿದ್ದೇನೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

*​ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ:*
​ಮುಖ್ಯಮಂತ್ರಿಗಳು ಈ ಮನವಿಯನ್ನು ಪುರಸ್ಕರಿಸಿ ಯೋಜನೆಯ ಪರಿಷ್ಕರಣೆಗೆ ಮುಂದಾಗಿದ್ದಾರೆ. ಈ ಪ್ರಕ್ರಿಯೆಯ ಮೂಲ ಉದ್ದೇಶ ಮೃತಪಟ್ಟ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ, ಸರ್ಕಾರದ ಹಣ ದುರುಪಯೋಗವಾಗುವುದನ್ನು ತಪ್ಪಿಸುವುದೇ ಆಗಿದೆ. ​ಯಾವುದೇ ಕಾರಣಕ್ಕೂ ಪ್ರಸ್ತುತ ಸೌಲಭ್ಯ ಪಡೆಯುತ್ತಿರುವ ಯಾವುದೇ ಒಬ್ಬನೇ ಒಬ್ಬ ಅರ್ಹ ಫಲಾನುಭವಿಗೆ ಈ ಯೋಜನೆಯಿಂದ ಯಾವುದೇ ರೀತಿಯ ತೊಂದರೆಯಾಗಲಿ ಅಥವಾ ನಷ್ಟವಾಗಲಿ ಸಂಭವಿಸುವುದಿಲ್ಲ. ವಿರೋಧ ಪಕ್ಷದವರು ರಾಜಕೀಯ ಪ್ರೇರಿತ ಅಪಪ್ರಚಾರಗಳನ್ನು ನಂಬಬಾರದು ಎಂದು ದಿನೇಶ್ ಗೂಳಿಗೌಡ  ತಿಳಿಸಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಘನತ್ಯಾಜ್ಯ ವಿಲೇವಾರಿ ಬಗ್ಗೆ ಆರ್ ಅಶೋಕ್ ಅಪಪ್ರಚಾರ:ಕೆಪಿಸಿಸಿ ವಕ್ತಾರರಾದ ಎಂ ಲಕ್ಷ್ಮಣ್ ಉತ್ತರ ನರಶಸ್ತ್ರಚಿಕಿತ್ಸಾ ದಲ್ಲಿ KIMS ಆಸ್ಪತ್ರೆಗಳೊಂದಿಗೆ ಬ್ರೈನ್‌ಲ್ಯಾಬ್ ಪಾಲುದಾರಿಕೆನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಮತದಾರರಿಗೆ, ಅರ್ಹ ಫಲಾನುಭವಿಗಳಿಗೆಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಹೊರತು ಸ್ಥಗಿತ ಇಲ್ಲ: ದಿನೇಶ್ ಗೂಳಿಗೌಡ ಹಿಂದುಳಿದ ವರ್ಗಗಳ ಸಂಘ - ಸಂಸ್ಥೆಗಳಿಗೆ ರೂ.71.85 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಪೂರ್ವಭಾವಿ ಮಂಜೂರಾತಿ ಸಮುದಾಯ ನಾಯಿಗಳ ಸಂಖ್ಯೆಯನ್ನು ಆಧರಿಸಿ ಹೆಚ್ಚುವರಿ ಆಹಾರ ತಾಣಗಳ ಗುರುತು: ಮಹೇಶ್ವರ್ ರಾವ್ಐತಿಹಾಸಿಕ ಕೆಂಪಾಂಬುಧಿ ಕೆರೆ ಅಭಿವೃದ್ಧಿಗೆ ಡಿಪಿಆರ್ ತಯಾರಿಸಿ: ಡಾ: ರಾಜೇಂದ್ರ ಕೆ. ವಿ ಪಾಲಿಕೆಯ ಪಿಯು ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು: ರಮೇಶ್ಜಿಬಿಎ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಜಿಐಎಸ್ ಮ್ಯಾಪಿಂಗ್ ಮೂಲಕ ಏಕೀಕರಣಗೊಳಿಸಿ: ಮಹೇಶ್ವರ್ ರಾವ್ಉಡಾನ್ ಯೋಜನೆಯಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗ ಸೇರಿಸಿ: ಕೇಂದ್ರಕ್ಕೆ ಎಂ ಬಿ ಪಾಟೀಲ ಪತ್ರ