LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೆನ್'ಜಿಗಳು, ಯೂಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವಕೀಲರು, ನಾಗರಿಕರೊಂದಿಗೆ ಸಂವಾದ

ಬಿಡದಿ ಟೌನ್ ಶಿಪ್, ನೈಸ್ ಮತ್ತು ಕೆಪಿಎಸ್ಸಿ ಹಗರಣಗಳ ಬಗ್ಗೆ ಸಂವಾದ, ರಾಜ್ಯದ ಹಿತಕ್ಕೆ ಅನೇಕ ಒಳನೋಟಗಳನ್ನು ನೀಡಿದ ಸಂವಾದ; ಹೆಚ್ಡಿಕೆ ಸಂತಸ, Ask HDK ವೇದಿಕೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ *#AskHDK* ವೇದಿಕೆಯ ಮೂಲಕ ಜೆನ್'ಜಿಗಳು, ಯೂಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವಕೀಲರು ಮತ್ತು ನಾಗರಿಕರೊಂದಿಗೆ ಸಂವಾದ ನಡೆಸಿದರು. news_1788164443_0_127.webp

ಅತಿ ಮುಖ್ಯವಾಗಿ ಅಕ್ರಮಗಳ ಆಗರವಾಗಿರುವ ಬೆಂಗಳೂರು- ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಅಥವಾ ನೈಸ್ (NICE) ಯೋಜನೆ, ಬಿಡದಿ ಟೌನ್‌ಶಿಪ್ ಯೋಜನೆ ನೆಪದಲ್ಲಿ ರೈತರ ಭೂಮಿ ಲೂಟಿ ಹಾಗೂ ಕೆಪಿಎಸ್ಸಿ ಕರ್ಮಕಾಂಡದ ಬಗ್ಗೆ ಈ ಸಂವಾದ ಕೇಂದ್ರೀಕೃತವಾಗಿತ್ತು.

ಈ ಸಂದರ್ಭದಲ್ಲಿ ಇವರೆಲ್ಲರೂ ಕೇಳಿದ ಪ್ರಶ್ನೆಗಳಿಗೆ ವಿವರವಾಗಿ, ಸಮಗ್ರವಾಗಿ ದಾಖಲೆಗಳ ಸಮೇತ ಉತ್ತರ ಮತ್ತು ವಿವರಣೆ ನೀಡಿದ ಕೇಂದ್ರ ಸಚಿವರು; ಸಮೃದ್ಧವಾದ ಕರ್ನಾಟಕವನ್ನು ಕೊಳ್ಳೆ ಹೊಡೆಯುವ ದೊಡ್ಡ ಹುನ್ನಾರವನ್ನು ರಾಜ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಯೋಜನೆಗಳ ನೆಪದಲ್ಲಿ ರೈತರ ಭೂಮಿಯನ್ನು ಕಸಿದುಕೊಂಡು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಹಸ್ತಾಂತರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು. 

ನೈಸ್ ಯೋಜನೆ ಕೂಡ ರಾಜ್ಯದ ಜನರನ್ನು ಲೂಟಿ ಮಾಡಿದ ಯೋಜನೆಯಾಗಿದ್ದು, ಸಾವಿರಾರು ಎಕರೆ ರೈತರ ಭೂಮಿಯನ್ನು ಲಪಟಾಯಿಸಿದೆ. 111 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಬೇಕಾಗಿದ್ದ ನೈಸ್ ಕಂಪನಿ ಕೇವಲ 5 ಕಿ.ಮೀ ದೂರದ ರಸ್ತೆಯನ್ನಷ್ಟೇ ನಿರ್ಮಿಸಿ ವಾಹನ ಸವಾರರಿಂದ ಅಕ್ರಮವಾಗಿ ಸುಲಿಗೆ ಮಾಡುತ್ತಿದೆ. ಯೋಜನಾ ಚೌಕಟ್ಟು ಒಪ್ಪಂದ ಹಾಗೂ ಯೋಜನಾ ತಾಂತ್ರಿಕ ಒಪ್ಪಂದಗಳನ್ನು ಉಲ್ಲಂಘಿಸಿ ರಾಜ್ಯಕ್ಕೆ ರಾಜ್ಯಕ್ಕೆ ಮಹಾ ವಂಚನೆ ಯಾಸಗಿದೆ ಎಂದು ಸಚಿವರು ಜೆನ್ ಜೀ ಗಳಿಗೆ ಮನವರಿಕೆ ಮಾಡಿಕೊಟ್ಟರು. 

ಈ ಬಗ್ಗೆ ರಾಜ್ಯ ಹೈಕೋರ್ಟ್ ಹೇಳಿರುವ ಹೇಳಿರುವ ಅಭಿಪ್ರಾಯಗಳನ್ನು ಸಂವಾದದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟ ಕೇಂದ್ರ ಸಚಿವರು; ಯಾವುದೇ ಕಾರಣಕ್ಕೂ ರಾಜ್ಯದ ಜನರು ನೈಸ್ ರಸ್ತೆಯಲ್ಲಿ ಟೋಲ್ ಪಾವತಿ ಮಾಡಬಾರದು ಎನ್ನುವ ತಮ್ಮ ಅಭಿಪ್ರಾಯವನ್ನು ಪುನರುಚ್ಚರಿಸಿದರು. 

ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ಕೆಪಿಎಸ್ಸಿ ಬಹಳ ಮಹತ್ವವಾದ ಸಂಸ್ಥೆ. ಅನೇಕ ಮಹನೀಯರು ಕಟ್ಟಿ ಬೆಳೆಸಿದ ಈ ಸಂಸ್ಥೆ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಪ್ರತಿ ಹುದ್ದೆ ಆಯ್ಕೆ ಮತ್ತು ನೇಮಕಾತಿಯಲ್ಲಿ ಈ ಸಂಸ್ಥೆ ನಿರಂತರವಾಗಿ ಅಕ್ರಮ ಎಸಗುತ್ತಿದೆ. ಅಲ್ಲದೆ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರೇಡ್ 1 ಹುದ್ದೆಗಳ ನೇಮಕಾತಿ ಹಾಗೂ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಕೂಡ ಸರ್ಕಾರ ಮತ್ತು ಕೆಪಿಎಸ್ಸಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದರೂ ಈ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲದಿರುವುದು ನನಗೆ ಬೇಸರ ಉಂಟು ಮಾಡಿದೆ ಎಂದು ಸಚಿವರು ಹೇಳಿದರು. news_1788164443_1_956.webp

ರಾಜ್ಯದ ಭವಿಷ್ಯದ ದೃಷ್ಟಿಯಿಂದ ಕೆಪಿಎಸ್ಸಿ ಮಹತ್ವದ ಪಾತ್ರವನ್ನು ವಹಿಸಬೇಕು. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಡುವ ಗುರುತರ ಜವಾಬ್ದಾರಿ ಈ ಸಂಸ್ಥೆಗೆ ಇದೆ. ದುರುದೃಷ್ಟವಶಾತ್ ಕೆಪಿಎಸ್ಸಿ ದಾರಿ ತಪ್ಪಿದೆ ಎಂದು ಸಚಿವರು ನುಡಿದರು. 

ಈ ನಿಟ್ಟಿನಲ್ಲಿ ಯುವಕರು ಎಚ್ಚೆತ್ತು ತಮ್ಮ ಮುಂದಿನ ಭವಿಷ್ಯಕ್ಕಾಗಿ ಸರಿಯಾದ ಮಾರ್ಗದಲ್ಲಿ ಹೋರಾಟ ನಡೆಸಬೇಕಿದೆ. ಕೆಟ್ಟ ವ್ಯವಸ್ಥೆಯನ್ನು ಬದಲಿಸುವುದರ ಜೊತೆಗೆ ಜನಪರ ಮತ್ತು ಪ್ರಾಮಾಣಿಕವಾದ ಆಡಳಿತ ವ್ಯವಸ್ಥೆಯನ್ನು ತರುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು. 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶೀಘ್ರದಲ್ಲೇ ಮುಖ್ಯ ಗ್ರಂಥಪಾಲಕರ ಹುದ್ದೆ ಭರ್ತಿ: ಮಧು ಬಂಗಾರಪ್ಪಕೇಂದ್ರ ಸರ್ಕಾರ ಮಾಡುತ್ತಿರುವ ಲೂಟಿ ಬಗ್ಗೆ ಕೈ ಕಾರ್ಯಕರ್ತರ ಧರಣಿಸೆಪ್ಟಂಬರ್ 20ಕ್ಕೆ ಅರಸೀಕೆರೆ ಕೋರ್ಟ್‌ ಉದ್ಘಾಟನೆಗೆ ಸಚಿವರ ನಿರ್ದೇಶನನಾಗೇಶ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ: ಹೆಚ್‍ಡಿಕೆಜೆನ್'ಜಿಗಳು, ಯೂಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವಕೀಲರು, ನಾಗರಿಕರೊಂದಿಗೆ ಸಂವಾದಗ್ರೂಪ್‌ ಸಿಇಒ ಡಾ. ಎ.ರಮ್ಯಾ ರಮೇಶ್‌ ಅವರಿಗೆ ಪ್ರತಿಷ್ಠಿತ 'ದಿ ಗ್ರೇಟ್‌ ಡಾಟರ್‌ ಆಫ್‌ ಇಂಡಿಯಾ' ಪ್ರಶಸ್ತಿಪಾದಚಾರಿ ಮಾರ್ಗಗಳ ಒತ್ತುವರಿ, ರಸ್ತೆ ಗುಂಡಿ ಮುಕ್ತ ರಸ್ತೆಯನ್ನಾಗಿಸಲು ವಾರ್ಡ್ ಇಂಜಿನಿಯರ್ ಗಳಿಗೆ ಜವಾಬ್ದಾರಿ: ಜಗದೀಶ್.ಜಿಕಾರ್ಬನ್ ಮೂಲಕ OMR ಶೀಟ್ ತಿದ್ದುಪಡಿ, ಸಿಸಿ ದೃಶ್ಯ ಹಾಳು; ತನಿಖೆಯಲ್ಲಿ ಎಲ್ಲವೂ ಸಾಬೀತು: ಮಾಧ್ಯಮಗೋಷ್ಠಿಯಲ್ಲಿ ಮಹತ್ವದ ದಾಖಲೆ ಬಿಡುಗಡೆ ಮಾಡಿದ HDKಭೂಸ್ವಾಧೀನ ಹಾಗೂ ಟಿಡಿಆರ್ ಪ್ರಕ್ರಿಯೆಗಳು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಬಾರದು: ರಮೇಶ್ಸುಮಾರು 30 ಟನ್ ಕಟ್ಟಡ ತ್ಯಾಜ್ಯ ತೆರವು, 150 ಮೀಟರ್ ಗೋಡೆಗೆ ಬಣ್ಣ – ಪ್ರದೇಶಕ್ಕೆ ಹೊಸ ರೂಪ