LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತುಮಕೂರಿನಲ್ಲಿ ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆ

ತುಮಕೂರು: ಭಾರತದ ಪ್ರಮುಖ ಜನರ ಆಕರ್ಷಣೆಯಾಗಿರುವ, ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾದ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್ (SSKL) ಅಂಗ ಸಂಸ್ಥೆಯಾದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆಯನ್ನು ತುಮಕೂರಿನಲ್ಲಿ ಅನಾವರಣಗೋಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರಾಂಡ್ ವಿಸ್ತರಣೆ ಮಾಡಿದೆ.

ತುಮಕೂರಿನ ನಾಜ ಜ್ಯೋತಿ ಆರ್ಕೇಡ್, ಕೆ.ಆರ್ ಎಕ್ಸಟೆಂಷನ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆಯನ್ನು ಶ್ರೀ ಶ್ರೀ ಸಿದ್ದಗಂಗಾ ಮಠದ ಪೂಜ್ಯ ಗುರುಗಳಾದ ಶ್ರೀ ಶ್ರೀ ಸಿದ್ದಗಂಗಾ ಮಹಾಸ್ವಾಮೀಜಿಗಳು ಉದ್ಘಾಟನೆ ಮಾಡಿ ಮಾತನಾಡಿದವರು, ಕಲ್ಪತರು ನಾಡು ತುಮಕೂರು ನಗರದಲ್ಲಿ ಗುಣಮಟ್ಟದ ಕಾಂಚೀಪುರಂ ಸಿಲ್ಕ್ ನ ನೂತನ ಮಳಿಗೆ ತೆರೆಯಲಾಗಿದೆ, ನಾಡಿನ ಜನರು ಕಾಂಚೀಪುರಂ ಉಡುಪುಗಳನ್ನು ತೊಟ್ಟು ಅದರ ಅಂದವನ್ನು ಸವಿಯಬಹುದು. ಅಲ್ಲದೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ತನ್ನ ಪ್ರೀಮಿಯಂ-ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ತನ್ನದೇ ಆದ ವಿಶೇಷ ಮಗ್ಗಗಳು ಮತ್ತು ಆಂತರಿಕ ವಿನ್ಯಾಸಗಳೊಂದಿಗೆ ಉಡುಪುಗಳನ್ನು ತಯಾರಿಸಲಾಗುತ್ತದೆ, ನಮ್ಮ ಸಂಪ್ರದಾಯವನ್ನು ಎತ್ತಿ ತೋರಿಸುವ, ಬೆಳೆಸುವ ಕೆಲಸವನ್ನು ಮಾಡಬೇಕು, ಕಾಂಚೀಪುರಂ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ, ಅವರ ಉಡುಪುಗಳು ಜಗತ್ ಪ್ರಸಿದ್ಧ ಪಡೆದಿವೆ ಎಂದರು. ನಗರದ ಜನರಿಗೆ ಹೊಸ ಅನುಭವನ್ನು ನೀಡಲು ಹೊಸ ಮಳಿಗೆ ತೆರೆಯಲಾಗಿದೆ, ಮದುವೆ, ಶುಭ ಸಮಾರಂಭಗಳಿಗೆ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರು.

ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್‌ನ ನಿರ್ದೇಶಕ ದುರ್ಗಾರಾವ್ ಚಲವಾದಿ ಮಾತನಾಡಿ, ತುಮಕೂರಿನಲ್ಲಿ ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆ ಉದ್ಘಾಟನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರ್ಯಾಂಡ್ ವಿಸ್ತರಣೆ ಮುಂದುವರೆಸಿದೆ, ಹೊಸಸ್ವರೂಪದ ಅಡಿಯಲ್ಲಿ ತನ್ನ 68 ನೇ ಶೋ ರೂಂ ಅನ್ನು ಕರ್ನಾಟಕದಲ್ಲಿ 4 ನೇ ಶೋ ರೂಂ ನಗರದಲ್ಲಿ ಪ್ರಾರಂಭಿಸಿದೆ. ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ. ಇದರ ವ್ಯಾಪಕ ಸಂಗ್ರಹವು ಕಾಂಚೀಪುರಂ ರೇಷ್ಮೆ ಸೀರೆಗಳು, ಬನಾರಸಿ, ಪಟೋಲಾ, ಕೋಟಾ, ಪೈಥಾನಿ, ಆರ್ಗನ್ಜಾ, ಕುಪ್ಪಡಂ, ಇಕ್ಕತ್, ಬಂಧನಿ ಸೇರಿದಂತೆ ಹತ್ತು ಹಲವು ಒಳಗೊಂಡಿದೆ - ಮದುವೆಗಳು, ಹಬ್ಬದ ಸಂದರ್ಭಗಳು ಮತ್ತು ದೈನಂದಿನ ಸೊಬಗುಗಳನ್ನು ಪೂರೈಸುತ್ತದೆ. ಮಳಿಗೆಯಲ್ಲಿ ಒಂದು ಸಾವಿರದಿಂದ 3 ಲಕ್ಷದ ಬೆಲೆ ವರೆಗೆ ಸೀರೆ ಲಭ್ಯವಿದೆ. ಇವೆಲ್ಲವೂ ಸಹಾ SSKLನ ಒಂದೇ ಸೂರಿನಡಿ ಸಿಗುವುದು ಹೆಗ್ಗಳಿಕೆಯ ಸಂಗತಿಯಾಗಿದೆ.

ಕರ್ನಾಟಕದಲ್ಲಿ ಬಲವಾದ ಉಪಸ್ಥಿತಿಯೊಂದಿಗೆ, ಸಾಂಪ್ರದಾಯಿಕ ಮತ್ತು ಸಮಕಾಲೀನ ನೇಯ್ಗೆಗಳಲ್ಲಿ ಅತ್ಯುತ್ತಮವಾದದ್ದನ್ನು ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಸೀರೆ ಶಾಪಿಂಗ್ ಅನುಭವವನ್ನು ಗ್ರಾಹಕರು ಮರು ವ್ಯಾಖ್ಯಾನಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಕರ್ನಾಟಕದಲ್ಲಿ ತನ್ನ ನೆಲೆಯನ್ನು ಬಲಪಡಿಸಲು, SSKL ವಿನೂತನವಾದ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಸಾಂಪ್ರದಾಯಿಕ ಮಗ್ಗದ ಅನುಭವವನ್ನು ನೀಡಲಾಗುತ್ತದೆ. ಅದನ್ನು ಗ್ರಾಹಕರು ಪಡೆಯುವ ಮೂಲಕ ತಮ್ಮ ಅನುಭವವನ್ನು ಮರು ವ್ಯಾಖ್ಯಾನಿಸ ಬೇಕಾಗಿದೆ ಎಂದರು.

ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರು,ಬಂದುಗಳು, ಸ್ನೇಹಿತರು, ಗಣ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ