LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡಕ್ಕೆ ಹೋರಾಡಿದವರ ನೆನಪು ಮಾಡಿಕೊಂಡು ಕನ್ನಡಕ್ಕೆ ಪ್ರೋತ್ಸಾಹವೆಂದ ಕೆ.ಬಿ.ಕೊಟ್ರೇಶ್

ದಾವಣಗೆರೆ : ನವೆಂಬರ್ ಒಂದು ಅಂದ್ರೆ ಸಾಕು ಎಲ್ಲರೂ ಕೂಡ ಕನ್ನಡ ಬಾವುಟ, ರಾಷ್ಟ್ರಧ್ವಜವನ್ನು ಮುಗಿಲುತ್ತೇರಕ್ಕೆ ಧ್ವಜಾರೋಹಣ ಮಾಡುವುದನ್ನು ಎಲ್ಲರೂ ನೋಡಿದ್ದೇವೆ..ಆದರೆ ಕನ್ನಡಕ್ಕಾಗಿ ಹೋರಾಡಿ ಮಡಿದವರನ್ನು ಯಾರು ನೆನಸಿಕೊಳ್ಳುವುದಿಲ್ಲ.ಆದ್ರೆ ಇಲ್ಲೊಬ್ಬರು ನಾಡು, ನುಡಿ ರಕ್ಷಣೆಗಾಗಿ ಬಲಿದಾನ ನೀಡಿದವರನ್ನು ಮೇಣದ ಬತ್ತಿ ಹಚ್ಚುವ ಮೂಲಕ ಅವರನ್ನು ನೆನೆದರು.

ನಗರದ ಎಕೆ ಫೌಂಡೇಶನ್ ಅಧ್ಯಕ್ಷ, ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಹಾಗೂ ಕನ್ನಡ ಪರ ಸಂಘಟನೆಗಳು ಜಯದೇವ ವೃತ್ತದಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಕನ್ನಡಕ್ಕಾಗಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿದರು.

ನಂತರ ಮಾತನಾಡಿದ ಎ.ಕೆ.ಫೌಂಡೇಷನ್ ಅಧ್ಯಕ್ಷ ಕೆ.ಬಿ.ಕೊಟ್ರೇಶ್, ಕನ್ನಡಿಗರಿಗೆ ಸುಮ್ಮನೆ ಸ್ವಾತಂತ್ರ್ಯ ಸಿಕ್ಕಿಲ್ಲ, ಇದರ ಹಿಂದೆ ಸಾಕಷ್ಟು ಜನರ ಶ್ರಮವಿದೆ..ಕನ್ನಡ ಭಾಷೆ ಉಳಿವಿಗಾಗಿ ಗೋಕಾಕ್ ಚಳವಳಿ, ನಾಡು, ನುಡಿಗಾಗಿ ತ್ಯಾಗ, ಬಲಿದಾನ ನೀಡಿದ ಅನೇಕ ರಾಜ ಮಹಾರಾಜರನ್ನು ನೆನಸಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರ ರಾಜ ಮಹಾರಾಜರನ್ನು ಈಗಲೂ ನೆನಸಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಕೃಷ್ಣದೇವರಾಯ, ಅನಕೃ, ಕುವೆಂಪು, ಬೇಂದ್ರೆ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು ಅವರನ್ನು ನೆನೆಯುವುದಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

[video width="640" height="368" mp4="https://beestimes.com/wp-content/uploads/2023/11/VID-20231103-WA0022.mp4"][/video]

ಕನ್ನಡಿಗರ ವಿರುದ್ದ ಪರ ಭಾಷಿಗರು ಹೋರಾಟ ನಡೆಸಿದಾಗ ಕನ್ನಡ ಪರ ಸಂಘಟನೆಗಳು ವಿಭಿನ್ನ ಹೋರಾಟದಲ್ಲಿ ಧುಮುಕಿವೆ..ಇನ್ನೂ ನಾಡು, ನುಡಿಗಾಗಿ ಸೇವೆ ಸಲ್ಲಿಸಲು ಸದಾ ಸಿದ್ದನಿದ್ದೇನೆ. ಅಲ್ಲದೇ ಕನ್ನಡ ಶಾಲೆ ಉಳಿವಿಗಾಗಿ ನಿಮ್ಮೆಲ್ಲ ಸಹಕಾರ ಅಗತ್ಯ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದ ನಂತರ ಮಹಿಳೆಯರು ಸೇರಿದಂತೆ ಇತರರು ಮೇಣದಬತ್ತಿ ಹಚ್ಚುವ ಮೂಲಕ ಕನ್ನಡಕ್ಕಾಗಿ ಹೋರಾಡಿದವರು ಅಜರಾಮರು ಎಂದು ತೋರಿಸಿಕೊಟ್ಟರು.

ಈ ಸಂದರ್ಭದಲ್ಲಿ ಪ್ರಮುಖರಾದ ಅರುಣ್ ಕುಮಾರ್, ಗೋಪಾಲಗೌಡ, ಮಾರುತಿ ಸೇರಿದಂತೆ ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ