LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೂರು ದಿನಗಳಲ್ಲಿ ಕೆಐಎಡಿಬಿ ಸಂಪೂರ್ಣ ಡಿಜಿಟಲೀಕರಣ: ಎಂ ಬಿ ಪಾಟೀಲ ಕಟ್ಟುನಿಟ್ಟಿನ ಗಡುವು

* ಒಟ್ಟು ಕೈಗಾರಿಕಾ ಪ್ರದೇಶಗಳು 224 * ಅಭಿವೃದ್ಧಿಪಡಿಸಿದ ಜಮೀನು: 92,824 ಎಕರೆ * ಹಂಚಿಕೆ ಮಾಡಬಹುದಾದ ಜಮೀನು: 63,225 ಎಕರೆ * ಹಂಚಿಕೆ ಮಾಡಿದ್ದು: 41,314 ಎಕರೆ * ನಿವೇಶನ ಪಡೆದ ಸಂಸ್ಥೆಗಳು: 25,422

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯ (ಕೆಐಎಡಿಬಿ) ಮೂಲಕ ನಡೆಯುವ ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಯವರೆಗಿನ ಪ್ರತಿಯೊಂದು ಪ್ರಕ್ರಿಯೆಯೂ ಇನ್ನು ಮುಂದೆ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಇದರಿಂದ ರೈತರು ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಈ ಸಂಬಂಧದ ಕೆಲಸಗಳನ್ನು ಮುಂದಿನ ನೂರು ದಿನಗಳಲ್ಲಿ ಮುಗಿಸಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.news_1781106252_0_992.webp

ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರು ಖನಿಜ ಭವನದಲ್ಲಿ ಬುಧವಾರ ತಮ್ಮ ಇಲಾಖೆಯ ಎರಡನೇ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಅವರು ನೂರು ದಿನಗಳಲ್ಲಿ ಮಾಡಬೇಕಾದ ಕೆಲಸಗಳೇನೇನು ಎಂದು ಸ್ಪಷ್ಟಪಡಿಸಿದರು.

ಸಭೆಯ ಬಗ್ಗೆ ಮಾತನಾಡಿದ ಅವರು, ಸರಕಾರದ ಇ-ಗವರ್ನೆನ್ಸ್ ಇಲಾಖೆಯು ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಇದರ ಅಡಿಯಲ್ಲೇ ಈಗ ರಾಜ್ಯದ ಹಳೆಯ ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಪ್ರತಿಯೊಂದು ವಿವರವನ್ನೂ ಡಿಜಿಟಲೀಕರಣ ಮಾಡಲಾಗುವುದು. ಇದರಲ್ಲಿ ಪ್ರತೀ ನಿವೇಶನಕ್ಕೆ ಸಂಬಂಧಿಸಿದಂತೆಯೂ ಒಟ್ಟು 77 ಕಾಲಂಗಳಲ್ಲಿ ಮಾಹಿತಿ ಇರಲಿದೆ ಎಂದಿದ್ದಾರೆ.

ಕೈಗಾರಿಕಾ ನಿವೇಶನದ ಮಂಜೂರಾತಿ, ಅದರ ಸ್ಥಿತಿಗತಿ, ಅಲ್ಲಿರುವ ಕೈಗಾರಿಕೆ, ಮಾಡಿರುವ ಹೂಡಿಕೆ, ಆಗಿರುವ ಉದ್ಯೋಗಸೃಷ್ಟಿ, ಸಂತ್ರಸ್ತ ರೈತರಿಗೆ ಕೊಟ್ಟಿರುವ ಪರಿಹಾರ, ಕೋರ್ಟ್ ಕೇಸಿನ ವಿವರಗಳು, ಹೂಡಿಕೆದಾರರಿಗೆ ಕೊಟ್ಟಿರುವ ಕಾಲಾವಕಾಶ ಮುಂತಾದ ವಿವರಗಳು ಡಿಜಿಟಲೀಕರಣದಿಂದ ಕ್ಷಣಾರ್ಧದಲ್ಲಿ ಸಿಗಲಿವೆ. ಬಹಳ ಹಿಂದಿನ ದಾಖಲೆಗಳನ್ನು ಕಾಪಾಡುವ ಕಷ್ಟವೂ ಇದರಿಂದ ತಪ್ಪಲಿದ್ದು, ಪ್ರತಿಯೊಂದು ಮಾಹಿತಿಯೂ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ವಿವರಿಸಿದ್ದಾರೆ.

ಹಿಂದೆ ಎಷ್ಟೋ ಪ್ರಕರಣಗಳಲ್ಲಿ ದಾಖಲೆಗಳು ಸರಿಯಾಗಿಲ್ಲದೆ ಒಂದೊಂದೇ ಜಮೀನಿಗೆ ಎರಡೆರಡು ಬಾರಿ ಪರಿಹಾರ ಕೊಟ್ಟಿರುವ ಪ್ರಕರಣಗಳು ಕೂಡ ಸಂಭವಿಸಿವೆ. ಹೊಸ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬರಲಿದ್ದು, ಹೂಡಿಕೆದಾರರು ತಾವು ಇರುವಲ್ಲಿಂದಲೇ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಈಗ 224 ಕೈಗಾರಿಕಾ ಪ್ರದೇಶಗಳಿವೆ. ಇಲ್ಲಿರುವ ಸಾವಿರಾರು ನಿವೇಶನಗಳ ಸ್ಥಿತಿಗತಿ ಎಲ್ಲವೂ ಸದ್ಯದಲ್ಲೇ ಸ್ಕ್ಯಾನ್ ಆಗಿ, ಸುರಕ್ಷಿತವಾಗಲಿದೆ. ಕೈಗಾರಿಕಾ ಇಲಾಖೆಯಲ್ಲಿ ಜನಸ್ನೇಹಿ ಸುಧಾರಣೆಗಳನ್ನು ತರಬೇಕು ಎನ್ನುವ ಉದ್ದೇಶದಿಂದ ಡಿಜಿಟಲೀಕರಣವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪಾಟೀಲ ಹೇಳಿದ್ದಾರೆ.news_1781106252_2_570.webp

ಹಳೇ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಹಂಚಿಕೆ ಮಾಹಿತಿಯನ್ನು ಸ್ಕ್ಯಾನ್ ಮಾಡುವ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಮಾಡಬೇಕು. ಬಳಿಕ ಆ ದತ್ತಾಂಶವನ್ನು ಇ- ಆಡಳಿತ ಇಲಾಖೆ ಜತೆ ಹಂಚಿಕೊಂಡು ಕೆಐಎಡಿಬಿಗೆ ಬೇಕಾಗುವ ಹಾಗೆ ಸಾಪ್ಟ್ ವೇರ್ ಅಭಿವೃದ್ಧಿಪಡಿಸಲಾಗುವುದು. ಬಳಿಕ ಅದನ್ಜು ಗ್ರಾಮೀಣಾಭಿವೃದ್ಧಿ ಇಲಾಖೆ ಇ- ಸ್ವತ್ತು ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ಆ ಮೂಲಕ ಇ- ಖಾತಾ ಕೊಡುವುದು ಸೇರಿದಂತೆ ಇತರ ಪ್ರಕ್ರಿಯೆಗಳಿಗೂ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮುಂತಾದವರು ಇದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
    ‘TCS’ ಮತ್ತು ‘SBI’ ನಂತರ ‘ವಿಪ್ರೋ’ದಲ್ಲೂ ‘ಕಾರ್ಪೊರೇಟ್ ಜಿಹಾದ್ ಪ್ರೊ. ಕೆ. ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ : HJSಆಳಂದ ಶಿವಲಿಂಗ ಅಪವಿತ್ರಗೊಳಿಸಿದ ಗಲಭೆಕೋರರು: ಕೇಸ್ ವಾಪಸ್ ಆದೇಶ ತಕ್ಷಣ ರದ್ದುಗೊಳಿಸಲು ಆಗ್ರಹನಾಯಿಕಡಿತ ಪ್ರಕರಣಗಳನ್ನು ಶೂನ್ಯವಾಗಿಸಿ ಮಾದರಿ ವಾರ್ಡ್ ನಿರ್ಮಾಣ ಮಾಡಿ: ಡಾ. ರಾಜೇಂದ್ರ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಿ:  ಕವಿತಾ ರಾಜಾರಾಂಕೆ.ಆರ್. ಮಾರುಕಟ್ಟೆ  ಹಾಗೂ ಸುತ್ತಲಿನ ಪ್ರದೇಶ ಸ್ವಚ್ಛತೆ ಕೈಗೊಳ್ಳಿ: ವೆಂಕಟಾಚಲಪತಿರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ, ಅದರ ಬಗ್ಗೆ ನಾನು ಬೇಡಿಕೆ ಇಟ್ಟಿರಲಿಲ್ಲಪ್ರಧಾನಿಗಳ ಮಹತ್ವಾಕಾಂಕ್ಷೆಯ ವಿಕಸಿತ ಭಾರತ ಕನಸು ಸಾಕಾರಕ್ಕೆ ಬದ್ಧತೆಯಿಂದ ದುಡಿಯುತ್ತೇವೆ: HDKನೂರು ದಿನಗಳಲ್ಲಿ ಕೆಐಎಡಿಬಿ ಸಂಪೂರ್ಣ ಡಿಜಿಟಲೀಕರಣ: ಎಂ ಬಿ ಪಾಟೀಲ ಕಟ್ಟುನಿಟ್ಟಿನ ಗಡುವುಪ್ರಜಾಪ್ರಭುತ್ವ ಹಾಳು ಗೆಡುವ ಮೂಲಕ ಪ್ರಧಾನಿಯಾಗಿ ಮೋದಿ ಮುಂದೆ ಮುರಿಯುತ್ತಿದ್ದಾರೆ