ಬೆಂಗಳೂರು: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪಟ್ಟಣದ ಮೆಹಬೂಬ ನಗರದ ನಿವಾಸಿ ಖಲೀಲುಲ್ಲಾ (38) ಎಂಬುವ ವ್ಯಕ್ತಿಯನ್ನು ಠಾಣೆಗೆ ಕರೆದು ಕೊಂಡು ಬಂದಿದ್ದ ವೇಳೆ ಪೊಲೀಸರ ದೈಹಿಕ ಹಿಂಸೆಯಿಂದ ಠಾಣೆಯಲ್ಲೇ ಮೃತಪಟ್ಟಿದ್ದು ಲಾಕಪ್ ಡೆತ್ ಎಂದು ಪತ್ರಿಕೆಯಲ್ಲಿ ವರದಿಯಾದ ನಿಮಿತ್ಯ ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ಸ್ವಯಂಪ್ರೇರಿತ (ಸುಮೊಟೋ) ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಸಮಗ್ರ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ವಿಜಯನಗರ ಎಸ್ಪಿ ರವರಿಗೆ ನೋಟೀಸ್ ನೀಡಲಾಗಿದೆ!
ಹಗರಿಬೊಮ್ಮನಹಳ್ಳಿಯಲ್ಲಿ ಲಾಕ್ ಅಪ್ ಡೆತ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಾಧಿಕಾರದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವರದಿ ನೀಡುವಂತೆ ಎಸ್ಪಿ ಅವರಿಗೆ ನೋಟೀಸ್ ನೀಡಲಾಗಿದ್ದು, ವರದಿ ಬಂದ ನಂತರ ನಿಯಮಾನುಸಾರ ಸೂಕ್ತ ವಿಚಾರಣೆ ಕೈಗೊಳ್ಳಲಾಗುವುದೆಂದು ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ತಿಳಿಸಿದರು!