
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ಮಾಡಲಿದ್ದಾರೆ ಮತ್ತು ದಿವ್ಯಸಾನಿಧ್ಯ ರಂಭಾಪುರಿ ಶಾಖ ಹಿರೇಮಠದ ಪೂಜ್ಯ ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ., ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ, ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಅಧ್ಯಕ್ಷತೆ ಶಾಸಕರಾದ ಉದಯ್ ಗರುಡಚಾರ್ ರವರು ಉಪಸ್ಥಿತಂದಿರಲಿದ್ದಾರೆ.
ನಂತರ ಮಾತನಾಡಿದವರು ಜಗದ್ಗುರು ಶ್ರೀ ರೇಣುಕಾಚಾರ್ಯ ಆದರ್ಶ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಸಮುದಾಯ ಪಾಲಿಸಬೇಕು ಆಗ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ. ರೇಣುಕಾಚಾರ್ಯರು ಮಾನ್ ಶರಣರು ಗುರು ಶ್ರೇಷ್ಠರು ಕನ್ನಡ ಭಾಷೆಯಲ್ಲಿ ಬದುಕು ಮತ್ತು ಪುರಾಣ ಮತ್ತು ಸಿದ್ದಾಂತಗಳ ಹಲವು ಪುರಾಣ ಗ್ರಂಥಗಳು ಇವೆ ಹರಜು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ವಿಶೇಷವಾಗಿ ಎರಡು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಸಂತೋಷದ ಕರ ಸಂಗತಿ ಎಂದರು.
ಮಾರ್ಚ್ 1ರ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿ ಮಾಡಿಕೊಂಡರು.
ವೀಶೇಷ ಆಹ್ವಾನಿತರಾಗಿ ವೀರಶೈವ-ಲಿಂಗಾಯಿತ ಸಮನ್ವಯ ವೇದಿಕೆ ಸಂಚಾಲಕರಾದ ಪಾಲನೇತ್ರ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ. ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆ, ಬೆಂಗಳೂರುನಗರದ ಅಧ್ಯಕ್ಷರಾದ ಬಿ.ಆರ್.ನವೀನ್ ಕುಮಾರ್ ರವರು, ಯುವ ಘಟಕದ ಹರೀಶ್ ಮಹೇಶ್ ರವರು, ಭಾಗವಹಿಸಲಿದ್ದಾರೆ.

ಮಾರ್ಚ್ 1ರಂದು ಬೆಳಗ್ಗೆ 10ಗಂಟೆಗೆ ಹಡ್ನನ್ ಸರ್ಕಲ್ ನಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರತಿಮೆ ಹೊತ್ತ ಭವ್ಯ ಮೆರವಣಿಗೆಯಲ್ಲಿ ರವೀಂದ್ರ ಕಲಾಕ್ಷೇತ್ರದವರಗೆ ಮೆರವಣಿಗೆ ಸಾಗಲಿದೆ. ವೀರಗಾಸೆ, ಕಂಸಾಳೆ, ತಮಟೆವಾದ್ಯ, ನಾದಸ್ವರ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿದೆ.
ಸಾಹಿತಿ ಪ್ರಶಾಂತ ರಿಪ್ಪನಪೇಟೆರವರಿಂದ ಉಪನ್ಯಾಸ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.