LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯ ಅವರಿಂದ ಮೈಸೂರು ನಗರದ ಅಭಿವೃದ್ಧಿಕಾರ್ಯಗಳ ಪರಿವೀಕ್ಷಣೆ

ಕಾಲಮಿತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿ, ಗುಣಮಟ್ಟ ಕಾಪಾಡಿ-ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಇಂಜಿನಿಯರ್ ಗಳಿಗೆ ಗುತ್ತಿಗೆದಾರರಿಗೆ ಸೂಚನೆ

news_1778777215_1_456.webp
ಮೈಸೂರು: ಮೈಸೂರು ನಗರದ ಅಭಿವೃದ್ಧಿ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳುವ ಜೊತೆಗೆ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
 
ಅವರು ಇಂದು ಮೈಸೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿವೀಕ್ಷಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆಪಿಟಿಸಿಎಲ್ ನ ವತಿಯಿಂದ ಸುಮಾರು 871 ಕಿ.ಮೀ. ಕೇಬಲ್ ಗಳನ್ನು ಹಾಕಲಾಗುತ್ತಿದ್ದು, ಇದುವರೆಗೆ 277 ಕಿ.ಮೀ.ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂಧ ಮೈಸೂರು ನಗರದ ಸೌಂದರ್ಯೀಕರಣಕ್ಕೆ ಸಹಕಾರಿಯಾಗಿದೆ ಎಂದರು.news_1778777218_4_592.webp
ಮಹಾರಾಣಿ ಕಾಲೇಜಿನ ವಿದ್ಯಾರ್ಥಿ ನಿಲಯಗಳಿಗೆ ಸೂಕ್ತ ಸ್ಥಳಾವಕಾಶವಿರದ ಕಾರಣ, ಪ್ರಸ್ತುತ 1400 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗುತ್ತಿದೆ ಎಂದರು.
*ರಸ್ತೆಗಳ ವೈಟ್ ಟಾಪಿಂಗ್*
ನಗರದಲ್ಲಿ ಸುಮಾರು 50 ಕಿ.ಮೀ.ನ ರಸ್ತೆಯಲ್ಲಿ  ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಇಂತಹ ರಸ್ತೆಗಳು ಸುಮಾರು 30 ವರ್ಷಗಳ ವರೆಗೆ ಸಂಚಾರಯೋಗ್ಯವಾಗಿರುತ್ತವೆ. ಮೊದಲನೇ ಹಂತದಲ್ಲಿ 4 ಪಥವಿರುವ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ಉಳಿದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು. ಈ ರಸ್ತೆ ಕಾಮಗಾರಿಯಿಂದ ನಗರದಲ್ಲಿ ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ  ಎಂದರು.
 *ಬಿಜೆಪಿ ಅಭಿವೃದ್ಧಿ ಕೈಗೊಳ್ಳಲಿಲ್ಲ*news_1778777216_2_917.webp
ಮೈಸೂರಿನ ರಸ್ತೆಗಳು, ಒಳಚರಂಡಿ ವ್ಯವಸ್ಥೇ ಸೇರಿದಂತೆ  ಎಲ್ಲ ಅಭಿವೃದ್ದಿ ಕಾರ್ಯಗಳನ್ನು ನಮ್ಮ ಸರ್ಕಾರವೇ ಕೈಗೊಂಡಿದ್ದು, ಬಿಜೆಪಿಯವರು ಕೇವಲ ಸರ್ಕಾರವನ್ನು ವಿರೋಧಿಸುವ, ಟೀಕಿಸುವ, ಸುಳ್ಳು ಹೇಳುವ ಕೆಲಸದಲ್ಲಿ ನಿರತವಾಗಿದೆ. ಜನರಿಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳನ್ನು ಬಿಜೆಪಿಯು ತನ್ನ ಅಧಿಕಾರಾವಧಿಯಲ್ಲಿ ಕೈಗೊಳ್ಳಲಿಲ್ಲ ಎಂದರು.
ಮೈಸೂರು ನಗರದಲ್ಲಿ ದೇವರಾಜ ಮಾರ್ಕೆಟ್, ಲ್ಯಾನ್ಸ್‌ಡೌನ್ ಕಟ್ಟಡಗಳ ಪಾರಂಪರಿಕ ವಿನ್ಯಾಸವನ್ನು ಕಾಯ್ದುಕೊಂಡು ನಿರ್ಮಿಸುವ ಉದ್ದೇಶವಿದ್ದರೂ, ಈ ವಿಷಯ ಕೋರ್ಟ್ ಮೆಟ್ಟಿಲೇರಿದೆ. ಆದರೂ ಈ ವಿಷಯದ ಬಗ್ಗೆ ನಾನು ಹಾಗೂ ಸ್ಥಳೀಯ ಶಾಸಕರು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.news_1778777217_3_707.webp
ಕೇರಳದಲ್ಲಿ  ಮುಖ್ಯಮಂತ್ರಿಗಳ ಆಯ್ಕೆಗೆ ಪಕ್ಷದ ವರಿಷ್ಠರು, ಅಲ್ಲಿನ ರಾಜಕೀಯ ನಾಯಕರೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ. ಕೇರಳಂನಲ್ಲಿ  ಮೂರು ನಾಯಕರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದು, ಅವರಲ್ಲಿ ವಿ.ಡಿ.ಸತೀಶನ್ ಅವರನ್ನು  ಕೇರಳ ಮುಖ್ಯಮಂತ್ರಿಯಾಗಿ  ಆಯ್ಕೆ ಮಾಡಲಾಗಿದೆ ಎಂದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಜಾಬ್ ವಿಚಾರ ಕೋರ್ಟ್ ನಲ್ಲಿ ಇರುವಾಗಲೇ ಸರ್ಕಾರ ತರಾತುರಿಯಲ್ಲಿ ಆದೇಶ: ಹಿಂದೂ ಪರ ಸಂಘಟನೆಗಳ ಖಂಡನೆದಾವಣಗೆರೆ ಉಪ ಚುನಾವಣೆ ಫಲಿತಾಂಶ ನಂತರ ಕಾಂಗ್ರೆಸ್ಸಿಗೆ ದಿಢೀರ್ ಜ್ಞಾನೋದಯಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ಮತ್ತೆ ದನಿಯೆತ್ತಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಕಲಾಶ್ರೀ ಸಂಸ್ಥೆಯ 30ನೇ ವರ್ಷದ ಬೇಸಿಗೆ ಶಿಬಿರ ಸಮಾರೋಪ ಯಶಸ್ವಿಸಿದ್ದರಾಮಯ್ಯ ಅವರಿಂದ ಮೈಸೂರು ನಗರದ ಅಭಿವೃದ್ಧಿಕಾರ್ಯಗಳ ಪರಿವೀಕ್ಷಣೆತ್ವರಾ ನೂತನ ಸ್ಟೋರ್ ಉದ್ಘಾಟನೆಯಲ್ಲಿ ಹೊಸ ಶ್ರೇಣಿ ಹೆಲ್ಮೆಟ್ಗಳ ಪರಿಚಯಿನೀಟ್ ಮರುಪರೀಕ್ಷೆ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ:ಮಧುಬಂಗಾರಪ್ಪನೀಟ್ ಮರುಪರೀಕ್ಷೆ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ:ಮಧುಬಂಗಾರಪ್ಪಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ವಿಶ್ವ ಅಮ್ಮಂದಿರ ದಿನಾಚರಣೆಅಬ್ಬಾಟ್ಟ್ ನಿಂದ ಭಾರತದಲ್ಲಿ ಆರೋಗ್ಯಕರ ವಯಸ್ಸಾಗುವಿಕೆಗೆ ಎನ್ಷೂರ್® ಸ್ಟ್ರೆಂಥ್ ಪ್ರೊ ಬಿಡುಗಡೆ