ಬೆಂಗಳೂರು: ಜಾಗತಿಕ ಡೆನಿಮ್ ಮತ್ತು ಲೈಫ್‌ಸ್ಟೈಲ್ ಬ್ರ್ಯಾಂಡ್ ಆದ ಪೇಪೆ ಜೀನ್ಸ್ ಲಂಡನ್, ಬೆಂಗಳೂರಿನ ಇಂದಿರಾನಗರ ಮತ್ತು HSR ಲೇಔಟ್‌ನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆಯುವುದರ ಮೂಲಕ ನಗರದಲ್ಲಿ ತನ್ನ ರಿಟೇಲ್ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಇದು ನಗರದಾದ್ಯಂತ ಸಂಸ್ಥೆಯು ಹಮ್ಮಿಕೊಂಡಿರುವ ಮೂರು ಹೊಸ ಮಳಿಗೆಗಳ ವಿಸ್ತರಣಾ ಯೋಜನೆಯ ಭಾಗವಾಗಿದೆ ಎಂದು ಪೇಪೆ ಜೀನ್ಸ್ ಲಂಡನ್ (ಇಂಡಿಯಾ) ಸಂಸ್ಥೆಯ ಸಿಇಒ ಆದ ರಾಕೇಶ್ ಜಲ್ಲಿಪಲ್ಲಿ ತಿಳಿಸಿದರು.
ಇಂದ್ರ ನಗರ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿ ಎರಡು ಮಳಿಗೆಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪೇಪೆ ಜೀನ್ಸ್ ಲಂಡನ್ ಸಂಸ್ಥೆಗೆ ಅತ್ಯಂತ ಪ್ರಮುಖವಾದ ಮಾರುಕಟ್ಟೆಯಾಗಿದೆ. ಇಂದಿರಾನಗರ ಮತ್ತು HSR ಲೇಔಟ್‌ನಲ್ಲಿರುವ ನಮ್ಮ ಹೊಸ ಮಳಿಗೆಗಳು, ನಗರದ ಎರಡು ಪ್ರಮುಖ ಹಾಗೂ ಸದಾ ಚಟುವಟಿಕೆಯಿಂದ ಕೂಡಿರುವ ಭಾಗಗಳಲ್ಲಿರುವ ಗ್ರಾಹಕರಿಗೆ ಬ್ರ್ಯಾಂಡ್ ಅನ್ನು ಇನ್ನಷ್ಟು ಹತ್ತಿರವಾಗಿಸಲು ಸಹಕಾರಿಯಾಗಿವೆ. ನಮ್ಮ ಮಳಿಗೆಗಳು ಕೇವಲ ಶಾಪಿಂಗ್ ಅನುಭವವನ್ನು ಮಾತ್ರ ನೀಡದೆ, ಬ್ರ್ಯಾಂಡ್‌ನ ನಿಜವಾದ ಉತ್ಸಾಹ ಮತ್ತು ಶೈಲಿಯನ್ನು ಜನರಿಗೆ ತಲುಪಿಸಬೇಕು ಎಂದು ನಾವು ಯಾವಾಗಲೂ ನಂಬುತ್ತೇವೆ. ನಾವು ಭಾರತದಲ್ಲಿ ನಮ್ಮ ಮಳಿಗೆಗಳ ಜಾಲವನ್ನು ವಿಸ್ತರಿಸುತ್ತಾ ಮುಂದುವರಿದಂತೆ, ಎಲ್ಲಿ ಗ್ರಾಹಕರು ತಮ್ಮ ದೈನಂದಿನ ಫ್ಯಾಷನ್ ಶೈಲಿಯನ್ನು ಅಪ್‌ಗ್ರೇಡ್ ಮಾಡಿಕೊಳ್ಳುತ್ತಲೇ ಹೊಸ ಟ್ರೆಂಡ್‌ಗಳಿಗೆ ತೆರೆದುಕೊಳ್ಳುತ್ತಿದ್ದಾರೋ ಅಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳಲು ನಾವು ಹೆಚ್ಚು ಗಮನ ಹರಿಸುತ್ತಿದ್ದೇವೆ.
ಇಂದಿರಾನಗರದ 100 ಅಡಿ ರಸ್ತೆಯಲ್ಲಿ ತೆರೆಯಲಾಗಿರುವ ಮೇಲ್ದರ್ಜೆಗೆ ಏರಿಸಲಾದ ಈ ಹೊಸ ಎಕ್ಸ್‌ಪೀರಿಯನ್ಸ್ ಸ್ಟೋರ್, ಗ್ರಾಹಕರಿಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗಗಳಲ್ಲಿ ವಿಸ್ತಾರವಾದ ಪೇಪೆ ಜೀನ್ಸ್ ಶಾಪಿಂಗ್ ಅನುಭವವನ್ನು ನೀಡುತ್ತದೆ. HSR ಲೇಔಟ್‌ನಲ್ಲಿರುವ ಮಳಿಗೆಯು, ಬೆಂಗಳೂರಿನ ಅತ್ಯಂತ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ವಸತಿ ಮತ್ತು ಜೀವನಶೈಲಿಯ ಪ್ರಮುಖ ತಾಣಗಳಲ್ಲಿ ಒಂದಾದ ಈ ಪ್ರದೇಶಕ್ಕೆ ಬ್ರ್ಯಾಂಡ್‌ನ ಇತ್ತೀಚಿನ ಡೆನಿಮ್ ಮತ್ತು ಕ್ಯಾಶುಯಲ್ ವೇರ್ ಸಂಗ್ರಹಗಳನ್ನು ಪರಿಚಯಿಸುತ್ತಿದೆ.
ಈ ಎರಡು ಮಳಿಗೆಗಳು ಶಿರುಕು ಮತ್ತು ಪವರ್‌ಫ್ಲೆಕ್ಸ್ ನಂತಹ ನವೀನ ಮಾದರಿಯ ಡೆನಿಮ್‌ಗಳೊಂದಿಗೆ ವ್ಯಾಪಕ ಶ್ರೇಣಿಯ ಡೆನಿಮ್, ಶರ್ಟ್‌ಗಳು, ಟಿ-ಶರ್ಟ್‌ಗಳು ಮತ್ತು ಇನ್ನಿತರ ಉಡುಪುಗಳನ್ನು ನೀಡುವುದರ ಜೊತೆಗೆ ದೈನಂದಿನ ಬಳಕೆಗೆ ಸೂಕ್ತವಾದ ಕ್ಯಾಶುಯಲ್ ಉಡುಪುಗಳ ದೊಡ್ಡ ಸಂಗ್ರಹವನ್ನೂ ಒದಗಿಸುತ್ತದೆ. 
ಇದರ ಮೂರನೇ ಮಳಿಗೆಯು ಫೀನಿಕ್ಸ್ ಮಾರ್ಕೆಟ್‌ಸಿಟಿ ವೈಟ್ ಫೀಲ್ಡ್ ಮಾಲ್‌ನಲ್ಲಿ ತೆರೆದಿದ್ದು, ಭಾರತದ ಪ್ರಮುಖ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಮಾರುಕಟ್ಟೆಗಳಲ್ಲೊಂದಾದ ಬೆಂಗಳೂರಿನಲ್ಲಿ ಬ್ರ್ಯಾಂಡ್‌ನ ಮಾರುಕಟ್ಟೆ ವಿಸ್ತರಣೆಗೆ ಇದು ಪ್ರಮುಖ ಹೆಜ್ಜೆಯಾಗಿದೆ.
ಪೇಪೆ ಜೀನ್ಸ್ ಲಂಡನ್ ಸಂಸ್ಥೆಯು ಸೆಪ್ಟೆಂಬರ್ 25 ರಂದು ಬೆಂಗಳೂರಿನಲ್ಲಿ ತನ್ನ ಮೂರು ಸುಧಾರಿತ ನ್ಯೂ ಎಕ್ಸ್‌ಪೀರಿಯನ್ಸ್ ಮಳಿಗೆಗಳನ್ನು ಏಕಕಾಲದಲ್ಲಿ ಪ್ರಾರಂಭಿಸಿದ್ದು, ಇದರ ಭಾಗವಾಗಿ ಇಂದಿರಾನಗರ, HSR ಲೇಔಟ್ ಮತ್ತು ಫೀನಿಕ್ಸ್ ಮಾರ್ಕೆಟ್‌ಸಿಟಿ ವೈಟ್ ಫೀಲ್ಡ್ ಮಾಲ್‌ನಲ್ಲಿ ಹೊಸ ಮಳಿಗೆಗಳು ಒಂದೇ ದಿನ ಉದ್ಘಾಟನೆಗೊಂಡವು.
ಈ ವಿಶಾಲವಾದ ಮಳಿಗೆಯು ಪೇಪೆ ಜೀನ್ಸ್ ಸಂಸ್ಥೆಗೆ ವಿವಿಧ ವಿಭಾಗಗಳ ವಿಶಾಲ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವುದರ ಜೊತೆಗೆ ಡೆನಿಮ್ ಸಂಗ್ರಹದ ಪ್ರಮುಖ ಆಕರ್ಷಣೆಯಾನ್ನಾಗಿಸುತ್ತದೆ.
ಬೆಂಗಳೂರಿನಲ್ಲಿ ಮಳಿಗೆಗಳ ವಿಸ್ತರಣೆಯು ಪೇಪೆ ಜೀನ್ಸ್ ಲಂಡನ್ ಸಂಸ್ಥೆಯ ಭಾರತದಾದ್ಯಂತದ ವ್ಯಾಪಾರ ಬೆಳವಣಿಗೆಯ ಯೋಜನೆಯ ಒಂದು ಭಾಗವಾಗಿದೆ.

ದೇಶಾದ್ಯಂತ 200+ ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ಈ ಬ್ರ್ಯಾಂಡ್, ಮುಂದಿನ 18 ತಿಂಗಳುಗಳಲ್ಲಿ ಇನ್ನೂ 100 ಮಳಿಗೆಗಳನ್ನು ತೆರೆಯುವುದರ ಮೂಲಕ ಪ್ರಮುಖ ನಗರಗಳು ಮತ್ತು ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಉದ್ದೇಶಿಸಿದೆ.
ಉದ್ಘಾಟನೆಯಲ್ಲಿ ತಿಪ್ಪೇ ಜೀನ್ಸ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ಹಾಗೂ ಪೆಪ್ಪೇ ಜೀನ್ಸ್ ನ ಸಿಬ್ಬಂದಿ ವರ್ಗದವರು ಆಡಳಿತ ಮಂಡಳಿಯವರಿಗೂ ಇದೆ ವೇಳೆ ಉಪಸ್ಥಿತರಿದ್ದರು.